ತಿಲಕರತ್ನೆ ದಿಲ್ಶಾನ್ ಹೋರಾಟ; ಶ್ರೀಲಂಕಾಗೆ ಜಯ
ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿರುವ ಹಾಲಿ ಚಾಂಪಿಯನ್ ಶ್ರೀಲಂಕಾ ತಂಡ ಗುರುವಾರ ನಡೆದ ಪಂದ್ಯದಲ್ಲಿ ಆಫ್ಘಾನಿಸ್ತಾನ..

ಕೋಲ್ಕತಾ: ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿರುವ ಹಾಲಿ ಚಾಂಪಿಯನ್ ಶ್ರೀಲಂಕಾ ತಂಡ ಗುರುವಾರ ನಡೆದ ಪಂದ್ಯದಲ್ಲಿ ಆಫ್ಘಾನಿಸ್ತಾನದ ವಿರುದ್ಧ 6 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.
ತಂಡದ ವೇಗದ ಅಸ್ತ್ರ ಲಸಿತ್ ಮಾಲಿಂಗ್ ಅವಲ ಅಲಭ್ಯತೆಯ ಹೊರತಾಗಿಯೂ ತನ್ನ ಬಲಿಷ್ಠ ಬ್ಯಾಟಿಂಗ್ ಪಡೆಯ ನೆರವಿನಿಂದ ನಿನ್ನೆ ಪಂದ್ಯದಲ್ಲಿ ಜಯ ಸಾಧಿಸಿದೆ. ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಟಾಸ್ ಗೆದ್ದು ಬ್ಯಾಟಿ೦ಗ್ ಮಾಡಿದ ಅಫ್ಘಾನಿಸ್ತಾನ ತಂಡ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 153 ರನ್ ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು. ಅಫ್ಘನ್ ಪರ, ಅಸ್ಗರ್ ಸ್ಟಾನಿಕಜೈ (62 ರನ್) ಅವರ ಬಿರುಸಿನ ಆಟ ಸ್ಪರ್ಧಾತ್ಮಕ ಮೊತ್ತ ಪೇರಿಸಲು ಆಸರೆಯಾಯಿತು. ಅಸ್ಗರ್ ಅವರಿಗೆ ಸಮಿಉಲ್ಲ ಶೆನ್ವಾರಿ (31ರನ್) ಉತ್ತಮ ಸಾಥ್ ನೀಡಿದರು.
ಲ೦ಕಾದ ಮೊಣಚಿಲ್ಲದ ಬೌಲಿ೦ಗ್ ವಿಭಾಗವನ್ನು ಎದುರಿಸಿದ ಆಫ್ಘನ್ ನಿರೀಕ್ಷೆ ಮೀರಿದ ಬ್ಯಾಟಿ೦ಗ್ ನಿವ೯ಹಣೆ ತೋರಿತು. ಸ್ಪಿನ್ನರ್ ರ೦ಗನಾ ಹೆರಾತ್ ದಾಳಿಗೆ 11 ಓವರ್‍ಗಳಲ್ಲಿ 51 ರನ್‍ಗೆ 4ವಿಕೆಟ್ ಕಳೆದುಕೊ೦ಡು ದಿಢೀರ್ ಕುಸಿತ ಕ೦ಡಿದ್ದ ಆಫ್ಘಾನಿಸ್ತಾನಕ್ಕೆ ಅಸ್ಗರ್ ಆಸರೆಯಾದರು. ಅವರು 5ನೇ ವಿಕೆಟ್‍ಗೆ ಶೆನ್ವಾರಿ(31) ಜತೆ 61 ರನ್ ಸಿಡಿಸಿ ತ೦ಡಕ್ಕೆ ಚೇತರಿಕೆ ನೀಡಿದರು. ಮೊದಲ 10 ಓವರ್‍ನಲ್ಲಿ ಕೇವಲ 47 ರನ್ ದಾಖಲಿಸಿದ್ದ ಆಫ್ಘನ್ ತ೦ಡ ಕೊನೇ 10 ಓವರ್‍ನಲ್ಲಿ 106 ರನ್ ಕಸಿಯಿತು.
ಲಂಕಾ ಪರ ಪರೇರಾ 3 ವಿಕೆಟ್, ರಂಗನಾ ಹೆರಾತ್ 2 ವಿಕೆಟ್ ಕಬಳಿಸಿದರೆ, ಮ್ಯಾಥ್ಯೂಸ್ ಮತ್ತು ಕುಲಶೇಖರ ತಲಾ 1 ವಿಕೆಟ್ ಕಬಳಿಸಿದರು. ಆಕರ್ಷಕ ಅರ್ಧಶತಕ ಸಡಿಸಿ ಲಂಕಾ ಗೆಲುವಿಗೆ ಕಾರಣರಾದ ದಿಲ್ಶಾನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


