ಕಿವೀಸ್ ಗೆಲುವಿಗೆ ಸ್ಪೂರ್ತಿಯಾದ ಮಾರ್ಟಿನ್ ಕ್ರೋವ್
ಭಾರತದ ವಿರುದ್ಧದ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ಅಭೂತಪೂರ್ವ ಗೆಲುವಿಗೆ ಇತ್ತೀಚೆಗೆ ಮೃತರಾದ ಮಾಜಿ ಆಟಗಾರ ಮಾರ್ಟಿನ್ ಕ್ರೋವ್ ಅವರೇ ಸ್ಪೂರ್ತಿ ಎಂದು ತಿಳಿದುಬಂದಿದೆ.

ನಾಗ್ಪುರ: ಭಾರತದ ವಿರುದ್ಧದ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ಅಭೂತಪೂರ್ವ ಗೆಲುವಿಗೆ ಇತ್ತೀಚೆಗೆ ಮೃತರಾದ ಮಾಜಿ ಆಟಗಾರ ಮಾರ್ಟಿನ್ ಕ್ರೋವ್ ಅವರೇ ಸ್ಪೂರ್ತಿ ಎಂದು ತಿಳಿದುಬಂದಿದೆ.
ಈ ಹಿಂದೆ ಮಾರ್ಟಿನ್ ಕ್ರೋವ್ ಅವರು ಹೂಡಿದ್ದ ತಂತ್ರವನ್ನೇ ನ್ಯೂಜಿಲೆಂಡ್ ಕ್ರಿಕೆಟ್ ತಂಡದ ನಾಯಕ ಭಾರತದ ವಿರುದ್ಧ ಅಳವಡಿಸಿ ಅದರಲ್ಲಿ ಯಶಸ್ಸು ಕೂಡ ಪಡೆದಿದ್ದಾರೆ. ಕಿವೀಸ್ ಮಾಜಿ ನಾಯಕ ಮಾರ್ಟಿನ್ ಕ್ರೋವ್ 1992ರ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಸ್ಪಿನ್ನರ್ ದೀಪಕ್ ಪಟೇಲ್‌ರನ್ನು ಮೊದಲ ಓವರ್‌ನಲ್ಲೇ ಕಣಕ್ಕಿಳಿಸಿ ದಿಟ್ಟನಡೆ ಇಟ್ಟಿದ್ದರು.
ಭಾರತದ ವಿರುದ್ಧದ ಪಂದ್ಯದಲ್ಲಿ ಕಿವೀಸ್ ಪಡೆ ಕೂಡ ಇದೇ ತಂತ್ರಗಾರಿಕೆಯನ್ನು ಪ್ರಯೋಗಿಸಿ ಅದರಲ್ಲಿ ಯಶಸ್ವಿ ಕೂಡ ಆಗಿದೆ. ಭಾರತದ ವಿರುದ್ಧದ ಪಂದ್ಯದಲ್ಲಿ ಮಾರ್ಟಿನ್ ಗೌರವಾರ್ಥ ಕಪ್ಪುಪಟ್ಟಿ ಧರಿಸಿ ಕಣಕ್ಕಿಳಿದಿದ್ದ ಕಿವೀಸ್ ತಂಡಕ್ಕೆ ಅವರ ಸ್ಪಿನ್ ಮಂತ್ರವೂ ಸ್ಪೂರ್ತಿಯಾಗಿದ್ದು ವಿಶೇಷ.
ಟಿ20 ಪಂದ್ಯವೊಂದರಲ್ಲಿ ಸ್ಪಿನ್ನರ್‌ಗಳೇ 9 ವಿಕೆಟ್ ಕಬಳಿಸಿದ 3ನೇ ದೃಷ್ಟಾಂತವಿದು. ಈ ಹಿಂದೆ ಜಿಂಬಾಬ್ವೆ (2008), ಶ್ರೀಲಂಕಾ (2012) ಸ್ಪಿನ್ನರ್‌ಗಳು ಈ ಸಾಧನೆ ಮಾಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


