ಕ್ರಿಕೆಟ್

ಶಾಹಿದ್ ಅಫ್ರೀದಿಗೆ ನೋಬೆಲ್ ಪ್ರಶಸ್ತಿ ಕೊಡಿ: ಆರ್ಶಿ ಖಾನ್

ಭಾರತದ ಮೇಲೆ ಹೆಚ್ಚು ಪ್ರೀತಿ ವ್ಯಕ್ತ ಪಡಿಸಿದ ಪಾಕ್ ಕ್ರಿಕೆಟಿಗ ಶಾಹಿದ್ ಅಫ್ರೀದಿಗೆ ನೋಬೆಲ್ ಪ್ರಶಸ್ತಿ ನೀಡಬೇಕು ಎಂದು ನಟಿ, ಮಾಡೆಲ್ ಆರ್ಶಿ..

ಶಾಹಿದ್ ಅಫ್ರೀದಿಗೆ ನೋಬೆಲ್ ಪ್ರಶಸ್ತಿ ಕೊಡಿ: ಆರ್ಶಿ ಖಾನ್
ಆರ್ಶಿ ಖಾನ್ -ಶಾಹಿದ್ ಅಫ್ರೀದಿ
Published On :
ನವದೆಹಲಿ: ಭಾರತದ ಮೇಲೆ ಹೆಚ್ಚು ಪ್ರೀತಿ ವ್ಯಕ್ತ ಪಡಿಸಿದ ಪಾಕ್ ಕ್ರಿಕೆಟಿಗ ಶಾಹಿದ್ ಅಫ್ರೀದಿಗೆ ನೋಬೆಲ್ ಪ್ರಶಸ್ತಿ ನೀಡಬೇಕು ಎಂದು ನಟಿ, ಮಾಡೆಲ್ ಆರ್ಶಿ ಖಾನ್ ಟ್ವೀಟ್ ಮಾಡಿದ್ದಾರೆ.
ಭೋಪಾಲ್ ಮೂಲದ ಆರ್ಶಿ ಖಾನ್ ಹೆಸರು ಈ ಹಿಂದೆ ಅಫ್ರೀದಿ ಜತೆ ತಳಕು ಹಾಕಿಕೊಂಡಿತ್ತು. ತಾನು ಅಫ್ರೀದಿ ಜತೆ ಸೆಕ್ಸ್ ಮಾಡಿದ್ದೇನೆ. ನಾನು ಯಾರ ಜತೆ ಮಲಗಬೇಕು ಎಂಬುದಕ್ಕೆ ಭಾರತದ ಮಾಧ್ಯಮಗಳ ಅನುಮತಿ ಬೇಕೆ? ಇದು ನನ್ನ ವೈಯಕ್ತಿಕ ಜೀವನ ಎಂದು ಟ್ವೀಟ್ ಮಾಡುವ ಮೂಲಕ ಈ ಹಿಂದೆ ಈಕೆ ಭಾರೀ ಸುದ್ದಿಯಾಗಿದ್ದಳು. ಇವರಿಬ್ಬರ ನಡುವೆ ಸಂಬಂಧವಿದೆ ಎಂದು ಮಾಧ್ಯಮಗಳಲ್ಲಿ ಗಾಸಿಪ್ ಹಬ್ಬಿದ್ದರೂ, ನಾನು ಆತನ ಒಳ್ಳೆಯ ಗೆಳತಿ ಅಷ್ಟೇ ಎಂದು  ಆರ್ಶಿ ಖಾನ್ ಟ್ವೀಟ್ ಮಾಡಿದ್ದರು.
ಇತ್ತ,  ತನಗೆ ಪಾಕಿಸ್ತಾನದಲ್ಲಿ ಸಿಗುವ ಪ್ರೀತಿಗಿಂತಲೂ ಹೆಚ್ಚಿನ ಪ್ರೀತಿ ಭಾರತದಲ್ಲಿ ಸಿಕ್ಕಿದೆ ಎಂಬ ಅಫ್ರೀದಿ ಹೇಳಿಕೆಗೆ ಪಾಕ್ ಸರ್ಕಾರ ಕಿಡಿ ಕಾರಿದೆ. ಈ ಬಗ್ಗೆ ಮಾಜಿ ಕ್ರಿಕೆಟಿಗ ಜಾವೇದ್ ಮಿಯಾಂದಾದ್ ಕೂಡಾ ಅಫ್ರೀದಿ ವಿರುದ್ಧ ಗುಡುಗಿದ್ದರು. 
ಈ ಬಗ್ಗೆ ಟ್ವೀಟರ್ ನಲ್ಲಿ ಟ್ವೀಟ್ ಮಾಡಿದ ಆರ್ಶಿ ಖಾನ್, ಪಾಕ್ ಮಾದ್ಯಮ ಮತ್ತು ಮಿಯಾಂದಾದ್ ನೀವೆಲ್ಲರೂ ನಮ್ಮ ಹೀರೋ ಅಫ್ರೀದಿಗೆ ಬೆಂಬಲ ನೀಡಬೇಕು.  ಕ್ರಿಕೆಟ್ ಪಂದ್ಯ ಆರಂಭವಾಗುವ ಮುನ್ನವೇ ಆತ ಮ್ಯಾಚ್ ಗೆದ್ದಿದ್ದಾನೆ. ಆತನಿಗೆ ವಿಶ್ವಕಪ್ ಮಾತ್ರವಲ್ಲ ಶಾಂತಿಗಾಗಿ ನೀಡುವ ನೋಬೆಲ್ ಪ್ರಶಸ್ತಿಯನ್ನೂ ನೀಡಬೇಕಾಗಿದೆ ಎಂದಿದ್ದಾರೆ.
ಆತನಿಗಾಗಿ ತಾನು ಒಂದು ಮ್ಯೂಸಿಕ್ ವಿಡಿಯೋ ಮಾಡುತ್ತಿದ್ದೇನೆ. ಮಾರ್ಚ್ 17ಕ್ಕೆ ತಾನು ಇದರ ಶೂಟಿಂಗ್ ಗಾಗಿ ಮುಂಬೈಯಲ್ಲಿರುತ್ತೇನೆ. ಈ ವೀಡಿಯೋ ಆತನಿಗಾಗಿ ಅರ್ಪಿಸುತ್ತಿದ್ದೇನೆ ಎಂದು ಆರ್ಶಿ ಖಾನ್ ಹೇಳಿದ್ದಾಳೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.