ಕ್ರಿಕೆಟ್

ಲಿಖಿತ ಭರವಸೆ ನೀಡುವವರೆಗೆ ಪಾಕ್ ತಂಡ ಭಾರತಕ್ಕೆ ತೆರಳಲ್ಲ: ಪಾಕಿಸ್ತಾನ ಸರ್ಕಾರ

ಟಿ20 ವಿಶ್ವಕಪ್ ನಲ್ಲಿ ಪಾಕಿಸ್ತಾನ ತಂಡ ಭಾಗವಹಿಸುವ ಬಗ್ಗೆ ಅನಿಶ್ಚಿತತೆ ಇನ್ನೂ ಮುಂದುವರೆದಿದ್ದು,...

ಲಿಖಿತ ಭರವಸೆ ನೀಡುವವರೆಗೆ ಪಾಕ್ ತಂಡ ಭಾರತಕ್ಕೆ ತೆರಳಲ್ಲ: ಪಾಕಿಸ್ತಾನ ಸರ್ಕಾರ
ಸಾಂದರ್ಭಿಕ ಚಿತ್ರ
Published On :
ಇಸ್ಲಾಮಾಬಾದ್: ಟಿ20 ವಿಶ್ವಕಪ್ ನಲ್ಲಿ ಪಾಕಿಸ್ತಾನ ತಂಡ ಭಾಗವಹಿಸುವ ಬಗ್ಗೆ ಅನಿಶ್ಚಿತತೆ ಇನ್ನೂ ಮುಂದುವರೆದಿದ್ದು, ತಂಡದ ಭದ್ರತೆಗೆ ಸಂಬಂಧಿಸಿದಂತೆ ಭಾರತ ಸರ್ಕಾರ ಲಿಖಿತ ಭರವಸೆ ನೀಡುವವರೆಗೆ ಪಾಕ್ ತಂಡ ಭಾರತಕ್ಕೆ ತೆರಳಲು ಅನುಮತಿ ನೀಡುವುದಿಲ್ಲ ಎಂದು ಪಾಕಿಸ್ತಾನ ಆಂತರಿಕ ಸಚಿವಾಲಯ ಹೇಳಿದೆ.
ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ಕ್ರಿಕೆಟ್ ತಂಡ ಭಾರತಕ್ಕೆ ತೆರಳಲು ಅನುಮತಿ ನೀಡಲು ಸಾಧ್ಯವಿಲ್ಲ. ಪಾಕ್ ಆಟಗಾರರು ಭಾರತದಲ್ಲಿ ಆಡುವಾಗ ಯಾವುದೇ ಒತ್ತಡಕ್ಕೆ ಸಿಲುಕದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ ಎಂದು ಪಾಕ್ ಆಂತರಿಕ ಸಚಿವ ಚೌಧರಿ ನಿಸಾರ್ ಅಲಿ ಖಾನ್ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಭಾರತ ಸರ್ಕಾರ ಪಾಕ್ ತಂಡಕ್ಕೆ ಅಗತ್ಯ ಭದ್ರತೆ ನೀಡುವ ಕುರಿತು ಲಿಖಿತ ಭರವಸೆ ನೀಡುವವರೆಗೂ ಪಾಕ್ ತಂಡ ಭಾರತಕ್ಕೆ ತೆರಳಲು ಅನುಮತಿ ನೀಡುವುದಿಲ್ಲ ಎಂದು ಅವರು ಹೇಳಿದ್ದಾರೆ.
ಭದ್ರತೆ ಕುರಿತು ಬೆದರಿಕೆ ಇರುವಾಗ ನಿರಾಳವಾಗಿ ಕ್ರಿಕೆಟ್ ಆಡಲು ಹೇಗೆ ಸಾಧ್ಯ. 1 ಲಕ್ಷ ವೀಕ್ಷಕರ ಸಾಮರ್ಥವಿರುವ ಈಡನ್ ಗಾರ್ಡನ್ ನಲ್ಲಿ ಏನಾದರೂ ಅವಘಟ ಸಂಭವಿಸಿದೆ ಯಾರು ಹೊಣೆ ಎಂದು ಅಲಿಖಾನ್ ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.