ಕ್ರಿಕೆಟ್

ಮಹೇಂದ್ರ ಸಿಂಗ್ ಧೋನಿ ವಿಶ್ವದ ಅತ್ಯುತ್ತಮ ಫಿನಿಶರ್: ಕೊಹ್ಲಿ

ಧೋನಿ ವಿಶ್ವ ಕ್ರಿಕೆಟ್‌ನ ಶ್ರೇಷ್ಠ ಫಿನಿಶರ್‌ ಎಂದು ಕೊಹ್ಲಿ ಹೊಗಳಿದ್ದಾರೆ. ಭಾರತ ಟಿ-20 ಮತ್ತು ಏಕದಿನ ತಂಡದ ನಾಯಕ ಎಂ. ಎಸ್‌. ಧೋನಿ ಕುರಿತು ಟೆಸ್ಟ್‌ ತಂಡದ ..

ಮಹೇಂದ್ರ ಸಿಂಗ್ ಧೋನಿ ವಿಶ್ವದ ಅತ್ಯುತ್ತಮ ಫಿನಿಶರ್: ಕೊಹ್ಲಿ
ಧೋನಿ ಮತ್ತು ವಿರಾಟ್ ಕೊಹ್ಲಿ
Published On :

ನವದೆಹಲಿ: ಧೋನಿ ವಿಶ್ವ ಕ್ರಿಕೆಟ್‌ನ ಶ್ರೇಷ್ಠ ಫಿನಿಶರ್‌ ಎಂದು ಕೊಹ್ಲಿ ಹೊಗಳಿದ್ದಾರೆ. ಭಾರತ ಟಿ-20 ಮತ್ತು ಏಕದಿನ ತಂಡದ ನಾಯಕ ಎಂ. ಎಸ್‌. ಧೋನಿ ಕುರಿತು ಟೆಸ್ಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಮಿರ್‌ಪುರ್‌ನಲ್ಲಿ ಭಾನುವಾರ ಬಾಂಗ್ಲಾದೇಶದ ವಿರುದ್ಧ ನಡೆದ ಏಷ್ಯಾ ಕಪ್‌ ಟಿ-20 ಟೂರ್ನಿಯ ಫೈನಲ್‌ನಲ್ಲಿ ಸ್ಫೋಟಕ ಬ್ಯಾಟಿಂಗ್‌ ಮೂಲಕ  ಭಾರತಕ್ಕೆ ಧೋನಿ ಸುಲಭ ಗೆಲುವು ತಂದಿತ್ತಿದ್ದರು. ಕೇವಲ 6 ಎಸೆತಗಳಲ್ಲಿ ಧೋನಿ ಭರ್ಜರಿ 20 ರನ್‌ ಗಳಿಸಿದ್ದರು.

ಶಿಖರ್‌ ಧವನ್‌ ಉತ್ತಮವಾಗಿ ಆಟವಾಡಿದ್ದರು. ಈ ವೇಳೆ ಒಂದು ಬದಿಯಲ್ಲಿ ಉತ್ತಮವಾಗಿ ಆಡುವುದು ಮತ್ತು ಉತ್ತಮ ರನ್‌ ರೇಟ್‌ ಕಾಯ್ದುಕೊಳ್ಳುವುದು ನನ್ನ ಗುರಿಯಾಗಿತ್ತು. ಧವನ್‌ ಔಟಾದ ಬಳಿಕ ನನ್ನ ಮೇಲೆ ಹೆಚ್ಚಿನ ಜವಾಬ್ದಾರಿ ಬಿದ್ದಿತು. ಆದರೆ ಧೋನಿ ಕ್ರೀಸ್‌ ಗೆ ಬಂದಾಗ ನಾನು ನಿರಾಳನಾದೆ. ಅಲ್ಲದೆ ತಾವೊಬ್ಬ ಬೆಸ್ಟ್‌ ಫಿನಿಶರ್‌ ಎಂಬುದನ್ನು ಧೋನಿ ಮತ್ತೊಮ್ಮೆ ಸಾಬೀತುಪಡಿಸಿದರ, ಧೋನಿಯ ಕೆಲಸ ಎಲ್ಲರಿಗಿಂತ ದೊಡ್ಡದು ಎಂದಿದ್ದಾರೆ. ಎಂದು ಕೊಹ್ಲಿ ಹಾಡಿ ಹೊಗಳಿದ್ದಾರೆ.

ಧವನ್‌ ಮತ್ತೆ ಫಾರ್ಮ್‌ಗೆ ಮರಳಿದ್ದಾರೆ. ಅಂತೆಯೇ ತಮ್ಮ ಆಟ ನೈಜವಾಗಿ ಆಡುತ್ತಿದ್ದೇನೆ. ತಂಡದ ಆಟಗಾರರು ಉತ್ತಮ ಫಾರ್ಮ್‌ನಲ್ಲಿರುವುದು ಮುಂಬರುವ ಟಿ-20 ವಿಶ್ವಕಪ್‌ ಟೂರ್ನಿಗೂ ಮುನ್ನ ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ ಎಂದು ಕೊಹ್ಲಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.