ಕೊಹ್ಲಿ ಮತ್ತು ತೆಂಡೂಲ್ಕರ್ ಇವರಲ್ಲಿ ಯಾರು ಬೆಸ್ಟ್?
ಸಚಿನ್ ತೆಂಡೂಲ್ಕರ್ ಜತೆ ಯಾರನ್ನೂ ಹೋಲಿಕೆ ಮಾಡಲಾಗುವುದಿಲ್ಲ. ಭಾರತದ ಅಸಂಖ್ಯಾತ ಜನರಿಗೆ ಸಚಿನ್ ಒಬ್ಬ ರೋಲ್ ಮಾಡೆಲ್. ಆತನನ್ನು...

Published On :
ನವದೆಹಲಿ: ವಿರಾಟ್ ಕೊಹ್ಲಿ ಮತ್ತು ಸಚಿನ್ ತೆಂಡೂಲ್ಕರ್ ಇವರಲ್ಲಿ ಯಾರು ಬೆಸ್ಟ್? ಎಂದು ಕೇಳಿದ್ದಕ್ಕೆ ಪಾಕಿಸ್ತಾನ ನಾಯಕ ಶಾಹಿದ್ ಅಫ್ರೀದಿ, ನಾನು ಈ ಹಿಂದೆ ಕೂಡಾ ಈ ಬಗ್ಗೆ ಹೇಳಿದ್ದೆ. ಸಚಿನ್ ತೆಂಡೂಲ್ಕರ್ ಜತೆ ಯಾರನ್ನೂ ಹೋಲಿಕೆ ಮಾಡಲಾಗುವುದಿಲ್ಲ. ಭಾರತದ ಅಸಂಖ್ಯಾತ ಜನರಿಗೆ ಸಚಿನ್ ಒಬ್ಬ ರೋಲ್ ಮಾಡೆಲ್. ಆತನನ್ನು ಜಗತ್ತಿನಾದ್ಯಂತವಿರುವ ಜನರು ಫಾಲೋ ಮಾಡುತ್ತಾರೆ.
ವಿರಾಟ್ ಒಬ್ಬ ಚಾಂಪಿಯನ್ ಪ್ಲೇಯರ್. ಆತನ ಸಿಡುಕು ಬುದ್ಧಿಯೇ ಪಂದ್ಯಗಳನ್ನು ಗೆಲ್ಲಲು ಸಹಾಯ ಮಾಡುತ್ತದೆ. ವರುಷಗಳು ಕಳೆದಂತೆ ಆತ ಪ್ರಬುದ್ಧನಾಗುತ್ತಿದ್ದಾನೆ. ಇವರಿಬ್ಬರೂ ಒಳ್ಳೆಯ ಕ್ರಿಕೆಟಿಗರು. ಇವರಲ್ಲಿ ಒಬ್ಬರನ್ನು ಇನ್ನೊಬ್ಬರಿಂದ ಮೇಲೆತ್ತಿ ಹೇಳುವುದು ಅಸಾಧ್ಯ ಎಂದು ಉತ್ತರಿಸಿದ್ದಾರೆ.
ಏಷ್ಯಾ ಕಪ್ 2016ರಲ್ಲಿ ಶ್ರೀಲಂಕಾ ವಿರುದ್ಧ ಗೆಲವು ಸಾಧಿಸಿದ ನಂತರ ಮಾತನಾಡಿದ ಅಫ್ರೀದಿ, ನಮ್ಮಲ್ಲಿ ಒಳ್ಳೆಯ ಆಟಗಾರರಿದ್ದಾರೆ. ನಮಗೆ ನಮ್ಮ ಮೇಲಿನ ವಿಶ್ವಾಸವಷ್ಟೇ ಜಾಸ್ತಿ ಆಗ ಬೇಕಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Sachin Tendulkarಸಚಿನ್ ತೆಂಡೂಲ್ಕರ್PakistanVirat Kohliವಿರಾಟ್ ಕೊಹ್ಲಿShahid Afridiಶಾಹಿದ್ ಅಫ್ರೀದಿAsia Cup 2016Cricket Offbeatಏಷ್ಯಾ ಕಪ್ 2016
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


