ಕ್ರಿಕೆಟ್

ಯೂತ್ ಐಕಾನ್ ಆಗಿರುವುದು ಅತೀ ದೊಡ್ಡ ಜವಾಬ್ದಾರಿ: ವಿರಾಟ್ ಕೊಹ್ಲಿ

ಇತರರಿಗೆ ಐಕಾನ್ ಆಗಿರುವುದು ಖುಷಿಯ ವಿಚಾರವೇ ಆದರೂ ಅದೊಂದು ಅತೀ ದೊಡ್ಡ ಜವಾಬ್ದಾರಿ ಎಂದು ಕ್ರಿಕೆಟಿಗ ವಿರಾಟ್ ಕೊಹ್ಲಿ ಹೇಳಿದ್ದಾರೆ...

ಯೂತ್ ಐಕಾನ್ ಆಗಿರುವುದು ಅತೀ ದೊಡ್ಡ ಜವಾಬ್ದಾರಿ: ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ (ಸಂಗ್ರಹ ಚಿತ್ರ)
Published On :

ನವದೆಹಲಿ: ಇತರರಿಗೆ ಐಕಾನ್ ಆಗಿರುವುದು ಖುಷಿಯ ವಿಚಾರವೇ ಆದರೂ ಅದೊಂದು ಅತೀ ದೊಡ್ಡ ಜವಾಬ್ದಾರಿ ಎಂದು ಕ್ರಿಕೆಟಿಗ ವಿರಾಟ್ ಕೊಹ್ಲಿ ಹೇಳಿದ್ದಾರೆ.

ತಮ್ಮ ಸ್ಫೋಟಕ ಬ್ಯಾಟಿಂಗ್ ಮತ್ತು ಮೈದಾನದಲ್ಲಿನ ತಮ್ಮ ಆಕ್ರಮಣಕಾರಿ ಮನೋಭಾವದಿಂದಲೇ ಕೋಟ್ಯಂತರ ಕ್ರೀಡಾ ಪ್ರೇಮಿಗಳ ಮನಗೆದ್ದಿರುವ ವಿರಾಟ್ ಕೊಹ್ಲಿಗೆ, ಯೂತ್ ಐಕಾನ್  ಆಗಿರುವುದು ಅತ್ಯಂತ ದೊಡ್ಡ ಜವಾಬ್ದಾರಿಯಂತೆ. ಅವರೇ ಹೇಳುವಂತೆ ಇತರರಿಗೆ ಆಕರ್ಷಣೆಯಾಗಿರುವುದು ತಮಗೂ ಕೂಡ ಖುಷಿಯ ಸಂಗತಿಯೇ, ಆದರೂ ನಮ್ಮನ್ನು ಹತ್ತಾರು ಮಂದಿ  ಫಾಲೋ ಮಾಡುವಾಗ ನಾವು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಇತರರಿಗೆ ಮಾದರಿಯಾಗಿರುವುದು ನನ್ನ ಪ್ರಕಾರ ಅತ್ಯಂತ ದೊಡ್ಡ ಜವಾಬ್ದಾರಿ ಎಂದು ಕೊಹ್ಲಿ  ಅಭಿಪ್ರಾಯಪಟ್ಟಿದ್ದಾರೆ.

ಖಾಸಗಿ ಸುದ್ದಿಸಂಸ್ಥೆಯೊಂದಿಗಿನ ಸಂದರ್ಶನದಲ್ಲಿ ಮಾತನಾಡಿರುವ ಕೊಹ್ಲಿ , ನನ್ನ ಪಾಲಿಗೆ ಶಿಸ್ತು ಮತ್ತು ಶ್ರಮ ಮೊದಲ ಆದ್ಯತೆಯಾಗಿದೆ. ಅಂತೆಯೇ ನಾನು ಕೂಡ ಹೊಸ ವಿಚಾರಗಳನ್ನು  ಕಲಿಯಲು ಆಸಕ್ತನಾಗಿರುತ್ತೇನೆ. ನನ್ನ ಕೊನೆಯ ಪಂದ್ಯದ ಆಟಕ್ಕಿಂತ ನನ್ನ ಮುಂದಿನ ಪಂದ್ಯದ ಆಟ ಉತ್ತಮವಾಗಿರಬೇಕು ಎಂದು ನಾನು ಸದಾ ಆಶಿಸುತ್ತೇನೆ. ಹೀಗಾಗಿ ಕೊನೆಯ ಪಂದ್ಯದ  ತಪ್ಪುಗಳನ್ನು ಮುಂದಿನ ಪಂದ್ಯದಲ್ಲಿ ನಾನು ನೋಡಬಯಸುವುದಿಲ್ಲ. ಎಲ್ಲ ವಿಚಾರದಲ್ಲಿ ಅಲ್ಲದಿದ್ದರೂ ಒಂದಷ್ಟು ವಿಚಾರಗಳಲ್ಲಿಯಾದರೂ ನಾನು ಇತರರಿಗಿಂತ ಭಿನ್ನ ಎಂದು ಭಾವಿಸಿದ್ದೇನೆ. ನನ್ನ  ಅಭಿಮಾನಿಗಳೊಂದಿಗೆ ನಾನು ಹೆಚ್ಚು ಹೊತ್ತು ಸಮಯ ಕಳೆಯಲು ಬಯಸುತ್ತೇನೆ ಎಂದು ಹೇಳಿದ್ದಾರೆ.

ಗುರಿ ಸಾಧನೆಗೆ ಯಾವುದೇ ವಾಮಮಾರ್ಗವಿಲ್ಲ. ಸತತ ಅಭ್ಯಾಸ ಮತ್ತು ಕಠಿಣ ಶ್ರಮವೊಂದೇ ಗುರಿ ಸಾಧನೆಗಿರುವ ಏಕೈಕ ಮಾರ್ಗ. ನಾವು ಮಾಡುವ ಕೆಲಸ ಯಶಸ್ಸಿನಿಂದ ಕೂಡಿರಬೇಕು  ಎಂದುಕೊಂಡು ಮಾಡುವ ಬದಲು, ಮಾಡುವ ಕೆಲಸವನ್ನು ಶ್ರದ್ಧೆಯಿಂದ ಮಾಡಿದರೆ ಸಾಕು. ಯಶಸ್ಸು ತಾನೇ ತಾನಾಗಿ ಬರುತ್ತದೆ ಎಂದು ಕೊಹ್ಲಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.