ಮುಖ್ಯ ಕೋಚ್ ಆಗಿ ಅನಿಲ್ ಕುಂಬ್ಳೆ ಆಯ್ಕೆಯಲ್ಲಿ ಕೊಹ್ಲಿ ನಿರ್ಣಾಯಕ ಪಾತ್ರ
ಟೀಂ ಇಂಡಿಯಾದ ಮುಖ್ಯ ಕೋಚ್ ಹುದ್ದೆಗೇರಲು ಘಟಾನುಗಟಿಗಳು ರೇಸ್ ನಲ್ಲಿದ್ದರು. ಕೊನೆಗೆ ಕನ್ನಡಿಗ ಅನಿಲ್ ಕುಂಬ್ಳೆ ಅವರಿಗೆ ಮುಖ್ಯ ಕೋಚ್ ಹುದ್ದೆ ಸಿಗುವಲ್ಲಿ ಟೆಸ್ಟ್ ತಂಡದ...

ಟೀಂ ಇಂಡಿಯಾದ ಮುಖ್ಯ ಕೋಚ್ ಹುದ್ದೆಗೇರಲು ಘಟಾನುಗಟಿಗಳು ರೇಸ್ ನಲ್ಲಿದ್ದರು. ಕೊನೆಗೆ ಕನ್ನಡಿಗ ಅನಿಲ್ ಕುಂಬ್ಳೆ ಅವರಿಗೆ ಮುಖ್ಯ ಕೋಚ್ ಹುದ್ದೆ ಸಿಗುವಲ್ಲಿ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ನಿರ್ಣಾಯಕ ಪಾತ್ರವಹಿಸಿದ್ದಾರೆ.
ಅನಿಲ್ ಕುಂಬ್ಳೆ ಟೀಂ ಇಂಡಿಯಾದ ಕೋಚ್ ಆಗಿ ಆಯ್ಕೆಯಾದ ನಂತರ ತೀವ್ರ ಕುತೂಹಲ ಹುಟ್ಟಿಸಿದ್ದ ಕೋಚ್ ಆಯ್ಕೆ ಪ್ರಕ್ರಿಯೆಗೆ ತೆರೆಬಿದ್ದಿದ್ದು, ಕುಂಬ್ಳೆ ಆಯ್ಕೆ ಹಿಂದೆ ಟೀಂ ಇಂಡಿಯಾದ ಭವಿಷ್ಯದ ನಾಯಕ ಎಂದೇ ಬಿಂಬಿತರಾಗಿರುವ ವಿರಾಟ್ ಕೊಹ್ಲಿ ಮಹತ್ವದ ಪಾತ್ರವಹಿಸಿದ್ದಾರೆ. ರವಿಶಾಸ್ತ್ರಿ ಕೋಚ್ ಹುದ್ದೆ ಕೈ ತಪ್ಪಿದ ನಂತರ 21 ಸದಸ್ಯರ ಪಟ್ಟಿಯಲ್ಲಿ ಕೊನೆಗೆ ಆಸ್ಟ್ರೇಲಿಯಾದ ಟಾಮ್ ಮೂಡಿ ಹಾಗೂ ಅನಿಲ್ ಕುಂಬ್ಳೆ ಅವರ ಹೆಸರು ಅಂತಿಮವಾಗಿತ್ತು.
ಸಲಹ ಸಮಿತಿ ಸಂದರ್ಶನದ ವೇಳೆ ಟಾಮ್ ಮೂಡಿ ಹಾಗೂ ಅನಿಲ್ ಕುಂಬ್ಳೆ ತಮ್ಮ ಯೋಜನೆಗಳನ್ನು ಅದ್ಭುತವಾಗಿ ಪ್ರಸ್ತುತಪಡಿಸಿದ್ದರು. ಈ ವೇಳೆ ಟಾಮ್ ಮೂಡಿ ಅವರಿಗೆ ಕೋಚ್ ಸ್ಥಾನ ನೀಡುವ ಕುರಿತು ಚಿಂತನೆ ಶುರುವಾಗಿತ್ತು. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ತಮ್ಮ ಫೇಸ್ ಬುಕ್ ನಲ್ಲಿ ಅನಿಲ್ ಕುಂಬ್ಳೆ ಅವರನ್ನು ಕೋಚ್ ಹುದ್ದೆಗೆ ನೇಮಿಸಿದರೆ ಸೂಕ್ತ ಎಂದು ಬರೆದುಕೊಂಡಿದ್ದರು. ಅನಿಲ್ ಕುಂಬ್ಳೆರಂತ ಪ್ರಸಿದ್ಧ ಲೆಗ್ ಸ್ಪಿನ್ನರ್ ಅವರ ನೇತೃತ್ವದಲ್ಲಿ ನಮ್ಮ ತಂಡದ ಸ್ಪಿನ್ ಮತ್ತಷ್ಟು ಪ್ರಭಾವಶಾಲಿಯಾಗಬೇಕಿದೆ. ವಿದೇಶಗಳಲ್ಲಿ ನಮ್ಮ ಸ್ಪಿನ್ನರ್ ಗಳು ಹೆಚ್ಚು ಮಾರಕವಾಗಲಾರರು ಇದೇ ಕಾರಣಕ್ಕೆ ಅನಿಲ್ ಕುಂಬ್ಳೆ ತಂಡದ ಕೋಚ್ ಆಗಿ ನೇಮಕಗೊಂಡರೆ ನಮ್ಮ ಸ್ಪಿನ್ನರ್ ಗಳು ಹೆಚ್ಚು ಮಾರಕವಾಗಬಹುದು ಎಂದು ಹೇಳಿದ್ದರು. ಇಂತಹ ಅಭಿಪ್ರಾಯಗಳು ವ್ಯಕ್ತಗೊಂಡ ನಂತರ ಬಿಸಿಸಿಐ ಕುಂಬ್ಳೆಗೆ ಪಟ್ಟ ಕಟ್ಟಲು ಮುಂದಾಗಿತ್ತು.
ಇನ್ನು ಸಂದರ್ಶನ ವೇಳೆ ಕುಂಬ್ಳೆ ನೀಡಿದ ಪ್ರಾತ್ಯಕ್ಷಿಕೆ ಮತ್ತು ವಿದೇಶದಲ್ಲಿ ತಂಡ ಗೆಲ್ಲಲು ಬೇಕಾದ ಅರ್ಹತೆಗಳು ಮತ್ತು ಕ್ರಮಗಳ ಕುರಿತು ಅವರು ನೀಡಿದ ಉತ್ತರಗಳು ಸಲಹಾ ಸಮಿತಿ ಸದಸ್ಯರಾಗಿರುವ ಸಚಿನ್, ಗಂಗೂಲಿ ಹಾಗೂ ಲಕ್ಷ್ಮಣ್ ಅವರ ಮನಗೆದ್ದಿತ್ತು. ಈ ಮೂವರೂ ಆಟಗಾರರು ದಶಕಗಳ ಕಾಲ ಕುಂಬ್ಳೆ ಅವರೊಂದಿಗೆ ಆಡಿದ್ದು, ಅವರ ಧನಾತ್ಮಕ ಮತ್ತು ಋಣಾತ್ಮಕ ಅಂಶಗಳು ಇವರಿಗೆ ತಿಳಿದಿತ್ತು. ಹೀಗಾಗಿ ರವಿಶಾಸ್ತ್ರಿಗಿಂತಲೂ ಕುಂಬ್ಳೆ ಸೂಕ್ತ ಆಯ್ಕೆ ಎಂಬ ನಿರ್ಣಾಯಕಕ್ಕೆ ಸಲಹ ಸಮಿತಿ ಬಂದಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


