ಬಿಸಿಸಿಐನ ಮೊದಲ ಆಯ್ಕೆ ಕುಂಬ್ಳೆ ಅಲ್ಲ, ದ್ರಾವಿಡ್!
ಟೀಂ ಇಂಡಿಯಾದ ನೂತನ ಕೋಚ್ ಆಗಿ ಕನ್ನಡಿಗ ಅನಿಲ್ ಕುಂಬ್ಳೆ ಆಯ್ಕೆಯಾಗಿದ್ದಾರಾದರೂ, ಬಿಸಿಸಿಐನ ಮೊದಲ ಆಯ್ಕೆ ಕುಂಬ್ಳೆ ಆಗಿರಲಿಲ್ಲ ಎಂಬ ರೋಚಕ ಅಂಶ ಬಯಲಾಗಿದೆ...

ನವದೆಹಲಿ: ಟೀಂ ಇಂಡಿಯಾದ ನೂತನ ಕೋಚ್ ಆಗಿ ಕನ್ನಡಿಗ ಅನಿಲ್ ಕುಂಬ್ಳೆ ಆಯ್ಕೆಯಾಗಿದ್ದಾರಾದರೂ, ಬಿಸಿಸಿಐನ ಮೊದಲ ಆಯ್ಕೆ ಕುಂಬ್ಳೆ ಆಗಿರಲಿಲ್ಲ ಎಂಬ ರೋಚಕ ಅಂಶ ಬಯಲಾಗಿದೆ.
ಮೂಲಗಳ ಪ್ರಕಾರ ಟೀಂ ಇಂಡಿಯಾದ ಕೋಚ್ ಸ್ಥಾನಕ್ಕಾಗಿ ಮೊದಲು ಕರ್ನಾಟಕದವರೇ ಆದ ಮಾಜಿ ಕ್ರಿಕೆಟಿಗ ಮತ್ತು ಹಾಲಿ ಅಂಡರ್ 19 ಕ್ರಿಕೆಟ್ ತಂಡದ ಕೋಚ್ ರಾಹುಲ್ ದ್ರಾವಿಡ್ ರನ್ನು ಆಯ್ಕೆ ಮಾಡಲಾಗಿತ್ತಂತೆ. ಈ ಬಗ್ಗೆ ದ್ರಾವಿಡ್ ರನ್ನು ಬಿಸಿಸಿಐ ಸಂಪರ್ಕಿಸಿದ್ದಾಗ, ರಾಷ್ಟ್ರೀಯ ತ೦ಡದೊ೦ದಿಗೆ ದೀಘ೯ಕಾಲ ಕಾಯ೯ನಿವ೯ಹಿಸುತ್ತ ಕುಟು೦ಬದಿ೦ದ ದೂರವಿದ್ದೆ. ಮತ್ತೆ ಟೀಂ ಇಂಡಿಯಾದ ಕೋಚ್ ಆದರೆ ಕುಟುಂಬದಿಂದ ದೂರವುಳಿಯಬೇಕಾಗುತ್ತದೆ. ಅಲ್ಲದೆ ಅಂಡರ್ 19 ಹುಡುಗರಿಗೆ ಪಾಠ ಮಾಡುವುದು ದ್ರಾವಿಡ್ ಗೆ ಹೆಚ್ಚು ಖುಷಿ ನೀಡುತ್ತಿದ್ದು, ಇದೇ ಕಾರಣಕ್ಕೆ ಅವರು ಟೀಂ ಇಂಡಿಯಾ ಕೋಚ್ ಸ್ಥಾನವನ್ನು ನಿರಾಕರಿಸಿದ್ದರು ಎಂಬ ಅಂಶ ತಿಳಿದುಬಂದಿದೆ.
ಈ ವಿಚಾರವನ್ನು ಸ್ವತಃ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಅವರು ಮಾಧ್ಯಮಗಳಿಗೆ ಹೇಳಿದ್ದು, "ನಾನು ಭಾರತ ತ೦ಡದ ಕೋಚ್ ಆಗುವ೦ತೆ ರಾಹುಲ್ ದ್ರಾವಿಡ್‍ಗೆ ಮನವಿ ಮಾಡಿದ್ದೆ. ಅವರು ಇದಕ್ಕೆ ಇಲ್ಲ ಎನ್ನಲಿಲ್ಲ. ಆದರೆ ಅವರು ದೀಘ೯ಕಾಲ ಮನೆಯಿ೦ದ ದೂರವಿರಲು ನನ್ನಿ೦ದ ಈಗ ಸಾಧ್ಯವಾಗದು. ಹೀಗಾಗಿ ಜೂನಿಯರ್ ತ೦ಡದೊಂದಿಗಿನ ಕಿರು ಸರಣಿಗಳಲ್ಲೇ ಕಾಯ೯ನಿವ೯ಹಿಸುವುದನ್ನು ಮು೦ದುವರಿಸುತ್ತೇನೆ ಎ೦ದರು. ರಾಷ್ಟ್ರೀಯ ತ೦ಡದ ಹುದ್ದೆ, ಭಾರಿ ಹಣ ಮತ್ತಿತರ ಯಾವುದಕ್ಕೂ ದ್ರಾವಿಡ್ ಆಸೆ ಪಡಲಿಲ್ಲ ಎ೦ಬುದೇ ದೊಡ್ಡ ವಿಚಾರ' ಎ೦ದು ಅನುರಾಗ್ ಹೇಳಿದ್ದಾರೆ.
ದ್ರಾವಿಡ್ ಸದ್ಯ ಭಾರತ 19 ವಯೋಮಿತಿ ಮತ್ತು ಭಾರತ ಎ ತ೦ಡದ ಕೋಚ್ ಆಗಿದ್ದು, ಐಪಿಎಲ್‍ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಪರ ಕಾಯ೯ನಿವ೯ಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


