ಕ್ರಿಕೆಟ್

3ನೇ ಟಿ20: ಜಿಂಬಾಬ್ವೆಗೆ 139 ರನ್ ಗಳು ಟಾರ್ಗೆಟ್ ನೀಡಿದ ಭಾರತ

ಹರಾರೆಯಲ್ಲಿ ನಡೆಯುತ್ತಿರುವ ಮೂರನೇ ಹಾಗೂ ಕೊನೆಯ ಪಂದ್ಯದಲ್ಲಿ ಟೀಂ ಇಂಡಿಯಾ ಜಿಂಬಾಬ್ವೆಗೆ 139 ರನ್ ಗಳ ಸಾಧಾರಣ ಮೊತ್ತದ....

3ನೇ ಟಿ20: ಜಿಂಬಾಬ್ವೆಗೆ 139 ರನ್ ಗಳು ಟಾರ್ಗೆಟ್ ನೀಡಿದ ಭಾರತ
ಸಾಂದರ್ಭಿಕ ಚಿತ್ರ
Published On :
ಹರಾರೆ: ಹರಾರೆಯಲ್ಲಿ ನಡೆಯುತ್ತಿರುವ ಮೂರನೇ ಹಾಗೂ ಕೊನೆಯ ಪಂದ್ಯದಲ್ಲಿ ಟೀಂ ಇಂಡಿಯಾ ಜಿಂಬಾಬ್ವೆಗೆ 139 ರನ್ ಗಳ ಸಾಧಾರಣ ಮೊತ್ತದ ಸವಾಲು ನೀಡಿದೆ,
ಟಾಸ್ ಸೋತರು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತಕ್ಕೆ ಜಿಂಬಾಬ್ವೆ ಆರಂಭದಲ್ಲೇ ಆಘಾತ ನೀಡಿತು. ಭಾರತ ನಿಗದಿತ 20 ಓವರ್​ಗಳಲ್ಲಿ 6ವಿಕೆಟ್ ನಷ್ಟಕ್ಕೆ 138ರನ್ ಗಳಿಸಿದ್ದು, ಜಿಂಬಾಬ್ವೆ ಗೆಲ್ಲಲು 139 ರನ್ ಗಗಳ ಸವಾಲು ನೀಡಿದೆ.
ಜಿಂಬಾಬ್ವೆ 27 ರನ್ ಗಳಿಸುಷ್ಟರಲ್ಲೇ ಭಾರತದ ಪ್ರಮುಖ 3 ವಿಕೆಟ್ ಉರುಳಿಸುವ ಮೂಲಕ ಬ್ಯಾಟ್ಸ್​ಮನ್​ಗಳ ಮೇಲಿನ ಒತ್ತಡ ಹೆಚ್ಚಿಸಿತು. ಈ ಹಂತದಲ್ಲಿ ಕ್ರೀಸ್​ಗೆ ಬಂದ ಕೇದಾರ್ ಜಾಧವ್ (58) ತಂಡದ ಮೊತ್ತವನ್ನು 100 ರನ್ ಗಡಿ ದಾಟಿಸಿದರು. ಉಳಿದಂತೆ ಕೆ.ಎಲ್.ರಾಹುಲ್ (22), ಅಂಬಟಿ ರಾಯುಡು (20) ಮತ್ತು ಅಕ್ಷರ್ ಪಟೇಲ್ (20*) ಮಾತ್ರ ಎರಡಂಕಿ ಮೊತ್ತ ಗಳಿಸಿದರು.
ಜಿಂಬಾಬ್ವೆ ಪರ ಡೊನಾಲ್ಡ್ ತಿರಿಪೊನೊ 20 ಕ್ಕೆ 3 ಪ್ರಭಾವಿ ಬೌಲಿಂಗ್ ದಾಳಿ ನಡೆಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.