ಕೋಚ್ ರೇಸ್ ಗೆ ಅನಿಲ್ ಕುಂಬ್ಳೆ ಸೇರ್ಪಡೆ
ಭಾರತೀಯ ಕ್ರಿಕೆಟ್ ತ೦ಡದ ಕೋಚ್ ಹುದ್ದೆಗೆ ಅಜಿ೯ ಸಲ್ಲಿಸಿರುವ 57 ಮ೦ದಿಯ ಪೈಕಿ ಮಾಜಿ ನಾಯಕ ಹಾಗೂ ಸ್ಪಿನ್ ದಿಗ್ಗಜ ಅನಿಲ್ ಕು೦ಬ್ಳೆ ಕೂಡ ಸೇರಿದ್ದಾರೆ ಎ೦ದು ತಿಳಿದುಬಂದಿದೆ.

ನವದೆಹಲಿ: ಭಾರತೀಯ ಕ್ರಿಕೆಟ್ ತ೦ಡದ ಕೋಚ್ ಹುದ್ದೆಗೆ ಅಜಿ೯ ಸಲ್ಲಿಸಿರುವ 57 ಮ೦ದಿಯ ಪೈಕಿ ಮಾಜಿ ನಾಯಕ ಹಾಗೂ ಸ್ಪಿನ್ ದಿಗ್ಗಜ ಅನಿಲ್ ಕು೦ಬ್ಳೆ ಕೂಡ ಸೇರಿದ್ದಾರೆ ಎ೦ದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಕೋಚ್ ಹುದ್ದೆಗಾಗಿ ಬಿಸಿಸಿಐ ಬಳಿ ಸಲ್ಲಿಕೆಯಾಗಿರುವ 57 ಅರ್ಜಿಗಳ ಪೈಕಿ ಮಾಜಿ ನಾಯಕ ಅನಿಲ್ ಕುಂಬ್ಳೆ ಅವರ ಅರ್ಜಿ ಕೂಡ ಸೇರಿದೆ ಎಂದು ತಿಳಿದುಬಂದಿದೆ. ಈ ಹಿಂದೆ ಭಾರತ ಕ್ರಿಕೆಟ್ ನಿಂಯತ್ರಣ ಮಂಡಳಿಗೆ ಅರ್ಜಿಗಳು ಬಂದಿರುವ ಕುರಿತು ವರದಿಯಾಗಿತ್ತಾದರೂ, ಯಾವೆಲ್ಲಾ ಕ್ರಿಕೆಟಿಗರು ಅರ್ಜಿ ಸಲ್ಲಿಸಿದ್ದಾರೆ ಎಂಬುದರ ಕುರಿತ ಮಾಹಿತಿ ಲಭ್ಯವಾಗಿರಲಿಲ್ಲ. ಈದೀಗ ಬಿಸಿಸಿಐನ ಮೂಲಗಳು ತಿಳಿಸಿರುವಂತೆ ಅನಿಲ್ ಕುಂಬ್ಳೆ ಕೂಡ ಕೋಚ್ ಹುದ್ದೆಗೆ ಅವಕಾಶ ಕೋರಿ ಅರ್ಜಿ ಸಲ್ಲಿಸಿದ್ದಾರೆ.
ಅ೦ತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ 956 ವಿಕೆಟ್ (619 ಟೆಸ್ಟ್, 337 ಏಕದಿನ) ಕಬಳಿಸಿರುವ ಅನುಭವಿ ಕನ್ನಡಿಗ ಕು೦ಬ್ಳೆ, ಐಪಿಎಲ್‍ನಲ್ಲಿ ಆರ್‍ಸಿಬಿ ಮತ್ತು ಮು೦ಬ್ಯೆ ಇ೦ಡಿಯನ್ಸ್ ತ೦ಡಗಳ ಮೆ೦ಟರ್ ಆಗಿರುವ ಅನುಭವ ಹೊಂದಿದ್ದಾರೆ. ಹೀಗಾಗಿ ಕುಂಬ್ಳೆ ಬಿಸಿಸಿಐ ವಿಧಿಸಿರುವ ಮಾನದಂಡಗಳಿಗೆ ಅರ್ಹರಾಗಿದ್ದಾರೆ.
ಅಜಿ೯ ಸಲ್ಲಿಸಿರುವವರಲ್ಲಿ ಸೂಕ್ತ ಅಭ್ಯಥಿ೯ಗಳನ್ನು ಬಿಸಿಸಿಐ ಈ ವಾರ ಪಟ್ಟಿಮಾಡುವ ನಿರೀಕ್ಷೆ ಇದ್ದು, ಕೋಚ್ ಆಯ್ಕೆ ವಿಚಾರದಲ್ಲಿ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಮತ್ತು ವಿವಿಎಸ್ ಲಕ್ಷ್ಮಣ್ ನೇತೃತ್ವ ಸಲಹಾ ಸಮಿತಿಯ ನಿರ್ಧಾರ ನಿರ್ಣಾಯಕವಾಗಲಿದೆ. ಅಂತೆಯೇ ಭಾರತ ತಂಡದ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಮತ್ತು ಸೀಮಿತ ಓವರ್ ತ೦ಡದ ನಾಯಕ ಎ೦ಎಸ್ ಧೋನಿ ಕೋಚ್ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


