ಅಸಾಧಾರಣ ಪ್ರತಿಭೆಯುಳ್ಳ ಸಚಿನ್ ಜೊತೆ ನನ್ನ ಹೋಲಿಕೆ ಸರಿಯಲ್ಲ: ಅಲಿಸ್ಟೈರ್ ಕುಕ್
ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರು ಪ್ರತಿಭಾವಂತರಾಗಿದ್ದು, ಅವರ ಜೊತೆ ನನ್ನ ಹೋಲಿಕೆ ಸರಿಯಲ್ಲ ಎಂದು ಇಂಗ್ಲೆಂಡ್ ಕ್ರಿಕೆಟ್ ..

ಮುಂಬಯಿ: ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರು ಪ್ರತಿಭಾವಂತರಾಗಿದ್ದು, ಅವರ ಜೊತೆ ನನ್ನ ಹೋಲಿಕೆ ಸರಿಯಲ್ಲ ಎಂದು ಇಂಗ್ಲೆಂಡ್ ಕ್ರಿಕೆಟ್ ತಂಡ ನಾಯಕ ಅಲಿಸ್ಟೈರ್ ಕುಕ್ ಆಭಿಪ್ರಾಯ ಪಟ್ಟಿದ್ದಾರೆ.
ಸಚಿನ್ ಅವರ 10,000 ರನ್ ದಾಖಲೆಯ ಗಡಿಯನ್ನು ದಾಟಿದರೂ ಟೆಸ್ಟ್ ರನ್‌ಗಳ ಸರ್ವಕಾಲಿಕ ದಾಖಲೆ ಸಮೀಪಿಸಬೇಕಾಗಿದ್ದು, ಇನ್ನೂ ಸಮೀಪಿಸಿಲ್ಲ ಎಂದು ಕುಕ್ ಹೇಳಿದ್ದಾರೆ. ಶ್ರೀಲಂಕಾ ವಿರುದ್ಧ ಇಂಗ್ಲೆಂಡ್ 9 ವಿಕೆಟ್ ಜಯದ ಸಂದರ್ಭದಲ್ಲಿ ಕುಕ್ ಇತಿಹಾಸದಲ್ಲಿ 10,000 ಟೆಸ್ಟ್ ರನ್ ಸ್ಕೋರ್ ಮಾಡಿದ 12ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಅತಿ ಕಿರಿಯ ವಯಸ್ಸಿನಲ್ಲೇ ಅಂದರೇ 31 ವರ್ಷ 157 ದಿನಗಳಲ್ಲಿ ಈ ಸಾಧನೆ ಮಾಡಿ ಮೊದಲ ಇಂಗ್ಲಿಷ್ ಆಟಗಾರ ಎಂಬ ಕೀರ್ತಿಗೆ ಅವರು ಪಾತ್ರರಾಗಿದ್ದು, ತೆಂಡೂಲ್ಕರ್ ಅವರ ದಾಖಲೆಯನ್ನು 5 ತಿಂಗಳಿಗಿಂತ ಹೆಚ್ಚಿನ ಅವಧಿಯಲ್ಲಿ ಮುರಿದಿದ್ದಾರೆ.
ಕುಕ್ (128 ಟೆಸ್ಟ್‌ಗಳಲ್ಲಿ 10,042 ರನ್) ತೆಂಡೂಲ್ಕರ್ ಅವರ 200 ಟೆಸ್ಟ್‌ಗಳಿಂದ 15,921 ಒಟ್ಟು ರನ್ ದಾಖಲೆಯನ್ನು ಮುರಿಯಲು ಇನ್ನೂ 6000 ರನ್ ಕೊರತೆ ಹೊಂದಿದ್ದಾರೆ. ಇಂಗ್ಲೆಂಡ್ ನಾಯಕ 28 ಟೆಸ್ಟ್ ಶತಕಗಳನ್ನು ಬಾರಿಸಿ ಸರಾಸರಿ 47ರಲ್ಲಿದ್ದರೆ, ತೆಂಡೂಲ್ಕರ್ 51 ಶತಕಗಳೊಂದಿಗೆ 54 ಸರಾಸರಿ ಹೊಂದಿದ್ದಾರೆ. ಈ ದಾಖಲೆಯನ್ನು ವಿಸ್ಮಯಕಾರಿ ಪ್ರತಿಭಾಶಾಲಿ ಸಚಿನ್ ನಿರ್ಮಿಸಿದ್ದಾರೆ. ನಾನು ಪ್ರತಿಭಾಶಾಲಿಯಲ್ಲ, ಆದ್ದರಿಂದ ಇದು ಇನ್ನೂ ದೂರದಲ್ಲಿದೆ ಎಂದು ಕುಕ್ ಹೇಳಿದರು.
ನಾನು ಪ್ರಚಾರ ಬಯಸುವವನಲ್ಲ. ಇಂಗ್ಲೆಂಡ್ ತಂಡದ ಪರವಾಗಿ ಆಡುವುದು ನನ್ನ ಪ್ರಮುಖ ಧ್ಯೇಯ, ಇನ್ನೂ ಸಾಧಿಸಬೇಕಿರುವುದು ಬೇಕಾದಷ್ಟಿದೆ ಎಂದು ಕುಕ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


