ಐಪಿಎಲ್ ನಲ್ಲಿ ಬಂದ ಲಾಭದ ಅರ್ಧವನ್ನು ವೃದ್ದಾಶ್ರಮಕ್ಕೆ ನೀಡಿದ್ದಾರಾ ವಿರಾಟ್ ಕೊಹ್ಲಿ?
ಕೊಹ್ಲಿ ತಮ್ಮ ಒಂದು ಪಂದ್ಯದ ಅರ್ಧದಷ್ಟು ಹಣವನ್ನು ನಿರ್ಗತಿಕರ ಹಾಗೂ ವೃದ್ಧಾಶ್ರಮಗಳ ಅಭಿವೃದ್ಧಿಗಾಗಿ ...

ನವದೆಹಲಿ: ಭಾರತೀಯ ಕ್ರಿಕೆಟರ್ ವಿರಾಟ್ ಕೊಹ್ಲಿ ಕೇವಲ ಬ್ಯಾಟಿಂಗ್ ಮಾಡಿ ಮೆಚ್ಚುಗೆ ಪಡೆಯುತ್ತಿರುವುದು ಮಾತ್ರವಲ್ಲದೇ ಹಲವು ಸಾಮಾಜಿಕ ಕೆಲಸಗಳಿಂದ ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ಐಪಿಎಲ್ ಪಂದ್ಯಾವಳಿ ಆರಂಭವಾಗುವುದಕ್ಕೆ ಮುನ್ನ ವಿರಾಟ್ ಕೊಹ್ಲಿ ದೆಹಲಿಯಲ್ಲಿರುವ ಅಬಾಲಮಯ ವೃದ್ಧಾಶ್ರಮಕ್ಕೆ ಭೇಟಿ ನೀಡಿದ್ದರು. ವಿರಾಟ್ ಕೊಹ್ಲಿ ಭೇಟಿ ನಂತರ, ವಿರಾಟ್ ಕೊಹ್ಲಿ ಐಪಿಎಲ್ ಮ್ಯಾಚ್ ನಿಂದ ಬಂದ ಲಾಭದ ಅರ್ಧದಷ್ಟು ಅಂದರೇ ಶೇ. 50 ರಷ್ಟು ಹಣವನ್ನು ವೃದ್ಧಾಶ್ರಮಗಳಿಗೆ ಕೊಡುವುದಾಗಿ ಭರವಸೆ ನೀಡಿದ್ದಾರೆಂಬ ಪೋಸ್ಟ್ ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದವು.
ಆದರೆ ಸ್ಪೋರ್ಟ್ಸ್ ಕೀಡಾ ಎಂಬ ಮ್ಯಾಗಜೀನ್ ವರದಿಯ ಪ್ರಕಾರ ಕೊಹ್ಲಿ ತಮ್ಮ ಒಂದು ಪಂದ್ಯದ ಅರ್ಧದಷ್ಟು ಹಣವನ್ನು ನಿರ್ಗತಿಕರ ಹಾಗೂ ವೃದ್ಧಾಶ್ರಮಗಳ ಅಭಿವೃದ್ಧಿಗಾಗಿ ನೀಡುವುದಾಗಿ ಹೇಳಿದ್ದಾಗಿ ವರದಿ ಮಾಡಿದೆ.
2016ರ ಅಂತ್ಯದ ವೇಳೆಗೆ ವಿರಾಟ್ ಕೊಹ್ಲಿ ಫೌಂಡೇಶನ್ ಗೆ ಎಲ್ಲಾ ಅಗತ್ಯ ಸೌಲಭ್ಯಗಳನ್ನು ಒದಗಿಸುವುದಾಗಿ ಕೊಹ್ಲಿ ಭರವಸೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


