ಟೀಂ ಇಂಡಿಯಾ ವಿರುದ್ಧ ಗೆದ್ದ ಸರಣಿ ನನ್ನ ಜೀವನದ ಅವಿಸ್ಮರಣಿಯ ಪಂದ್ಯ: ರಬಾಡಾ
ಕ್ರಿಕೆಟ್ ಬದುಕಿಗೆ ಪಾರ್ದಾಪಣೆ ಮಾಡಿದ ಕಡಿಮೆ ಅವಧಿಯಲ್ಲೇ ದಕ್ಷಿಣ ಆಫ್ರಿಕಾದ ವರ್ಷದ ಕ್ರಿಕೆಟಿಗ ಪ್ರಶಸ್ತಿ ಸೇರಿ ಆರು ಪ್ರಶಸ್ತಿಗಳನ್ನು ಗೆದ್ದಿರುವ ವೇಗಿ ರಬಾಡಾ...

ಜೋಹಾನ್ಸ್ ಬರ್ಗ್: ಕ್ರಿಕೆಟ್ ಬದುಕಿಗೆ ಪಾರ್ದಾಪಣೆ ಮಾಡಿದ ಕಡಿಮೆ ಅವಧಿಯಲ್ಲೇ ದಕ್ಷಿಣ ಆಫ್ರಿಕಾದ ವರ್ಷದ ಕ್ರಿಕೆಟಿಗ ಪ್ರಶಸ್ತಿ ಸೇರಿ ಆರು ಪ್ರಶಸ್ತಿಗಳನ್ನು ಗೆದ್ದಿರುವ ವೇಗಿ ರಬಾಡಾ ಭಾರತ ವಿರುದ್ಧದ ಸರಣಿ ಜಯ ನನ್ನ ಜೀವನದ ಅಸ್ಮರಣೀಯ ಪಂದ್ಯ ಎಂದು ಹೇಳಿದ್ದಾರೆ.
ವರ್ಷದ ಕ್ರಿಕೆಟಿಗ ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ರಬಾಡಾ, ಭಾರತ ನೆಲದಲ್ಲಿ ಜಯಿಸಿದ ಸರಣಿ ನನ್ನ ಜೀವನದ ಅವಿಸ್ಮರಣೀಯ ಸರಣಿಯಾಗಿತ್ತು ಎಂದು ಹೇಳಿದ್ದಾರೆ.
ಆರು ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ರಬಾಡಾ ವೈಯಕ್ತಿಕ ಗರಿಷ್ಠ ಪ್ರಶಸ್ತಿ ಗಳಿಸಿ ದಕ್ಷಿಣ ಆಫ್ರಿಕಾದ ಅಗ್ರಮಾನ್ಯ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಈ ಹಿಂದೆ ದಕ್ಷಿಣ ಆಫ್ರಿಕಾದ ಆಶೀಮ್ ಆಮ್ಲಾ ಮತ್ತು ಎಬಿಡಿ ವಿಲಿಯರ್ಸ್ ಅಗ್ರಮಾನ್ಯ ಆಟಗಾರರಾಗಿದ್ದರು.
ರಬಾಡಾ ಟೆಸ್ಟ್ ಕ್ರಿಕೆಟ್ ಹಾಗೂ ಏಕದಿನ ಪಂದ್ಯಗಳ ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದರು. ಇನ್ನು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ನ ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ಇಮ್ರಾನ್ ತಾಹೀರ್ ಭಾಜನರಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


