ಟೀಂ ಇಂಡಿಯಾ ಆಲ್ ರೌಂಡ್ ಆಟ; ವಿಂಡೀಸ್ ಮೇಲೆ ಫಾಲೋ ಆನ್ ಹೇರಿದ ಭಾರತ
ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ನೂತನ ಕೋಚ್ ಅನಿಲ್ ಕುಂಬ್ಳೆ ಸಾರಥ್ಯದ ಟೀಂ ಇಂಡಿಯಾ ಮೊದಲ ಟೆಸ್ಟ್ ಪಂದ್ಯದಲ್ಲಿಯೇ ತನ್ನ ಸಾಮರ್ಥ್ಯ ಅನಾವರಣ ಮಾಡಿದ್ದು, ಅತಿಥೇಯ ವಿಂಡೀಸ್ ಮೇಲೆ ಫಾಲೋಆನ್ ಹೇರುವ ಮೂಲಕ ವಿಂಡೀಸ್ ತಂಡವನ್ನು ಸೋಲಿನ ದವಡೆಗೆ ತಳ್ಳಿದೆ.

ಆ್ಯಂಟಿಗುವಾ: ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ನೂತನ ಕೋಚ್ ಅನಿಲ್ ಕುಂಬ್ಳೆ ಸಾರಥ್ಯದ ಟೀಂ ಇಂಡಿಯಾ ಮೊದಲ ಟೆಸ್ಟ್ ಪಂದ್ಯದಲ್ಲಿಯೇ ತನ್ನ ಸಾಮರ್ಥ್ಯ ಅನಾವರಣ ಮಾಡಿದ್ದು, ಅತಿಥೇಯ ವಿಂಡೀಸ್ ಮೇಲೆ ಫಾಲೋಆನ್ ಹೇರುವ ಮೂಲಕ ವಿಂಡೀಸ್ ತಂಡವನ್ನು ಸೋಲಿನ ದವಡೆಗೆ ತಳ್ಳಿದೆ.
ವೆಸ್ಟ್ ಇಂಡೀಸ್ ನ ಆ್ಯಂಟಿಗುವಾದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ 3ನೇ ದಿನದಾಟದಲ್ಲಿ ತನ್ನ ಮೊದಲ ಇನ್ನಿಂಗ್ಸ್ ಅನ್ನು 243 ರನ್ ಗಳಿಗೆ ಪೂರ್ಣಗೊಳಿಸಿದ ವಿಂಡೀಸ್ ತಂಡ ಫಾಲೋಆನ್ ಹೇರಿಕೊಂಡು ಎರಡನೇ ಇನ್ನಿಂಗ್ಸ್ ಆರಂಭಿಸಿದೆ. ದಿನದಾಟದ ಅಂತ್ಯದ ವೇಳೆಗೆ 1 ವಿಕೆಟ್ ನಷ್ಟಕ್ಕೆ 21 ರನ್ ಗಳಿಸಿರುವ ವಿಂಡೀಸ್ ತಂಡ ಪಂದ್ಯವನ್ನು ಉಳಿಸಿಕೊಳ್ಳಲು ಇನ್ನೂ ಎರಡು ದಿನಗಳ ಬ್ಯಾಟಿಂಗ್ ಮಾಡುವ ಅನಿವಾರ್ಯತೆಗೆ ಸಿಲುಕಿದೆ.
ಇನ್ನು ವಿರಾಟ್ ಕೊಹ್ಲಿ ಅಮೋಘ ದ್ವಿಶತಕ ಮತ್ತು ಆರ್ ಅಶ್ವಿನ್ ಅವರ ಆಲ್ ರೌಂಡ್ ಆಟದ ನೆರವಿನಿಂದ ಭಾರತ ಈ ಪಂದ್ಯದಲ್ಲಿ ಮೇಲುಗೈ ಸಾಧಿಸಿದ್ದು, 4ನೇ ದಿನದಾಟದ ವೇಳೆ ವಿಂಡೀಸ್ ನ ಪ್ರಮುಖ ಬ್ಯಾಟ್ಸಮನ್ ಗಳನ್ನು ಮೊದಲ ಸೆಷನ್ ನಲ್ಲಿಯೇ ಔಟ್ ಮಾಡಲು ಸಾಧ್ಯವಾದರೆ ಇಂದೇ ಗೆಲುವ ಭಾರತದ ಪಾಲಾಗಲಿದೆ. ವಿಂಡೀಸ್ ಪರ ಆರ್ ಚಂದ್ರಿಕಾ (9 ರನ್) ಹಾಗೂ ಬ್ರಾವೋ (10 ರನ್) ಕ್ರೀಸ್ ಕಾಯ್ದುಕೊಂಡಿದ್ದು, ನಾಲ್ಕನೇ ದಿನದಾಟ ಮುಂದುವರೆಸಲಿದ್ದಾರೆ.
ಸಂಕ್ಷಿಪ್ತ ಸ್ಕೋರ್ ವಿವರ
ಭಾರತ ಮೊದಲ ಇನ್ನಿಂಗ್ಸ್: 8 ವಿಕೆಟ್ ನಷ್ಟಕ್ಕೆ 566 (ಡಿಕ್ಲೇರ್)
ವಿರಾಟ್ ಕೊಹ್ಲಿ 200 ರನ್, 283 ಎಸೆತ
ಆರ್ ಅಶ್ವಿನ್ 113 ರನ್, 253 ಎಸೆತ
ಶಿಖರ್ ಧವನ್ 84 ರನ್, 147 ಎಸೆತ
ವೆಸ್ಟ್ ಇಂಡೀಸ್ ಬೌಲಿಂಗ್
ಗೇಬ್ರಿಯಲ್ 21 ಓವರ್, 2 ವಿಕೆಟ್, 65 ರನ್
ಬಿಶೂ 43 ಓವರ್, 3 ವಿಕೆಟ್, 163 ರನ್
ಬ್ರಾಥ್ ವೇಟ್ 14.5 ಓವರ್, 3 ವಿಕೆಟ್, 65 ರನ್
ವೆಸ್ಟ್ ಇಂಡೀಸ್ ಮೊದಲ ಇನ್ನಿಂಗ್ಸ್: 243ಕ್ಕೆ ಆಲ್ ಔಟ್
ಬ್ರಾಥ್ ವೇಟ್ 74 ರನ್, 218 ಎಸೆತ
ಡೌವ್ರಿಚ್ 57 ರನ್, 79 ಎಸೆತ
ಭಾರತ ಬೌಲಿಂಗ್
ಉಮೇಶ್ ಯಾದವ್ 18 ಓವರ್, 4 ವಿಕೆಟ್, 41 ರನ್
ಮಹಮದ್ ಶಮಿ 20 ಓವರ್, 4 ವಿಕೆಟ್, 66 ರನ್
ಅಮಿತ್ ಮಿಶ್ರಾ 15.2 ಓವರ್, 2 ವಿಕೆಟ್, 43 ರನ್
ವೆಸ್ಟ್ ಇಂಡೀಸ್ ಎರಡನೇ ಇನ್ನಿಂಗ್ಸ್ 1 ವಿಕೆಟ್ ನಷ್ಟಕ್ಕೆ 21 ರನ್
ಬ್ರಾವೋ ಅಜೇಯ 10 ರನ್
ಆರ್ ಚಂದ್ರಿಕಾ ಅಜೇಯ 9 ರನ್
ಭಾರತ ಬೌಲಿಂಗ್
ಇಶಾಂತ್ ಶರ್ಮಾ 4 ಓವರ್, 1 ವಿಕೆಟ್, 3 ರನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


