ಟೀಂ ಇಂಡಿಯಾ ಕ್ಯಾಪ್ಟನ್ ಧೋನಿಗೆ 20 ಕೋಟಿ ರು.ವಂಚನೆ?
ಭಾರತ ತಂಡದ ನಿಗದಿತ ಓವರ್ ಗಳ ತಂಡದ ನಾಯಕ ಎಂ ಎಸ್ ಧೋನಿಗೆ ಖ್ಯಾತ ಅಂತಾರಾಷ್ಟ್ರೀಯ ಕ್ರೀಡಾ ಸಾಮಗ್ರಿ ತಯಾರಿಕಾ ಸಂಸ್ಥೆಯೊಂದು ಬರೊಬ್ಬರಿ 20 ಕೋಟಿ ರು. ವಂಚನೆ ಮಾಡಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ...

ನವದೆಹಲಿ: ಭಾರತ ತಂಡದ ನಿಗದಿತ ಓವರ್ ಗಳ ತಂಡದ ನಾಯಕ ಎಂ ಎಸ್ ಧೋನಿಗೆ ಖ್ಯಾತ ಅಂತಾರಾಷ್ಟ್ರೀಯ ಕ್ರೀಡಾ ಸಾಮಗ್ರಿ ತಯಾರಿಕಾ ಸಂಸ್ಥೆಯೊಂದು ಬರೊಬ್ಬರಿ 20 ಕೋಟಿ ರು. ವಂಚನೆ ಮಾಡಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಧೋನಿ ರಾಯಭಾರಿಯಾಗಿರುವ ಆಸ್ಟ್ರೇಲಿಯಾ ಮೂಲದ ಕ್ರೀಡಾ ಸಾಮಗ್ರಿ ತಯಾರಿಕಾ ಸಂಸ್ಥೆ "ಸ್ಪಾರ್ಟನ್" ಸ್ಪೋರ್ಟ್ಸ್ ಧೋನಿಗೆ ವಂಚನೆ ಮಾಡಿದ್ದು, ರಾಯಧನ ಸೇರಿದಂತೆ ಧೋನಿ ನಟಿಸಿರುವ ಜಾಹಿರಾತುಗಳಿಗೂ ಸಂಸ್ಥೆ ಹಣ ನೀಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಮೂಲಗಳ ಪ್ರಕಾರ ಸ್ಪಾರ್ಟನ್ ಸ್ಪೋರ್ಟ್ಸ್ ಸಂಸ್ಥೆಯಿಂದ ಧೋನಿಗೆ ಬರೊಬ್ಬರಿ 20 ಕೋಟಿ ರು.ಗಳು ಬರಬೇಕಿತ್ತಂತೆ. ಆದರೆ ಸಂಸ್ಥೆಯ ಅಧಿಕಾರಿಗಳು ಹಣ ನೀಡದೇ ವಂಚಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಸ್ಪಾರ್ಟನ್ ಸ್ಪೋರ್ಟ್ ಸಂಸ್ಥೆಯೊಂದಿಗೆ ಮೂರು ವರ್ಷಗಳ ಜಾಹಿರಾತಿನ ರಾಯಭಾರಿಯಾಗಿ ಒಪ್ಪಂದ ಮಾಡಿಕೊಂಡಿದ್ದರು. ಅದರಂತೆ ಧೋನಿಗೆ ಸಂಸ್ಥೆ 13 ಕೋಟಿ. ರುಗಳನ್ನು ನೀಡುವುದಾಗಿ ಒಪ್ಪಂದ ಮಾಡಿಕೊಂಡಿತ್ತು. ಇದಲ್ಲದೆ ರಾಯಧನ ಸೇರಿದಂತೆ ಇತ್ಯಾದಿ ಮೂಲಗಳಿಂದ ಧೋನಿಗೆ ಸಂಸ್ಥೆ ಸುಮಾರು 20 ಕೋಟಿ ರು. ಪಾವತಿ ಮಾಡಬೇಕಿತ್ತು. ಒಪ್ಪಂದವಾದ ನಾಲ್ಕು ಕಂತಿನವರೆಗೂ ಧೋನಿಗೆ ಸಂಸ್ಥೆ ಹಣ ಪಾವತಿ ಮಾಡಿದ್ದು, ಆ ಬಳಿಕ ಯಾವುದೇ ಕಂತನ್ನು ಪಾವತಿ ಮಾಡಿಲ್ಲ. ಹೀಗಾಗಿ ಧೋನಿ ಅವರ ಮ್ಯಾನೇಜರ್ ಸಂಸ್ಥೆ ವಿರುದ್ಧ ನ್ಯಾಯಾಲಯದ ಮೊರೆ ಹೋಗುವ ಸಾಧ್ಯತೆ ಇದ್ದು, ಸಿಡ್ನಿ ಮತ್ತು ದೆಹಲಿ ಕಚೇರಿ ವಿರುದ್ಧ ದೂರು ದಾಖಲಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಆದರೆ ಈ ಬಗ್ಗೆ ಸ್ಪಾರ್ಟನ್ ಸಂಸ್ಥೆಯಿಂದ ಯಾವುದೇ ರೀತಿಯ ಸ್ಪಷ್ಟೀಕರಣ ಹೊರಬಿದ್ದಲ್ಲ. ಅಂತೆಯೇ ಧೋನಿ ಷೇರು ಹೊಂದಿರುವ ರಿತಿ ಸ್ಪೋರ್ಟ್ಸ್ ಸಂಸ್ಥೆ ಕೂಡ ಸ್ಪಾರ್ಟನ್ ನೊಂದಿಗಿನ ವ್ಯವಹಾರ ಸ್ಥಗಿತಗೊಂಡಿಲ್ಲ. ಆದರೆ ಕೆಲ ಕಂತಿನ ಹಣವನ್ನು ಸಂಸ್ಥೆ ಪಾವತಿ ಮಾಡಿಲ್ಲ ಎಂದು ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


