ಆಸಿಸ್ ದೈತ್ಯ ಪಾಟಿಂಗ್ ದಾಖಲೆ ಸರಿಗಟ್ಟಲಿರುವ ಮಾಹಿ!
ಭಾರತ ಕ್ರಿಕೆಟ್ ಕಂಡ ಅದೃಷ್ಟಶಾಲಿ ಮತ್ತು ಯಶಸ್ವೀ ನಾಯಕರಲ್ಲಿ ಒಬ್ಬರಾಗಿರುವ ಟೀಂ ಇಂಡಿಯಾದ ಸೀಮಿತ ಓವರ್ ಗಳ ಪಂದ್ಯದ ನಾಯಕ ಮಹೇಂದ್ರ ಸಿಂಗ್ ಧೋನಿ ಶೀಘ್ರದಲ್ಲೇ ಮೂರು ಅಂತಾರಾಷ್ಟ್ರೀಯ ದಾಖಲೆಗಳನ್ನು ಸರಿಗಟ್ಟಲಿದ್ದಾರೆ.

ನವದೆಹಲಿ: ಭಾರತ ಕ್ರಿಕೆಟ್ ಕಂಡ ಅದೃಷ್ಟಶಾಲಿ ಮತ್ತು ಯಶಸ್ವೀ ನಾಯಕರಲ್ಲಿ ಒಬ್ಬರಾಗಿರುವ ಟೀಂ ಇಂಡಿಯಾದ ಸೀಮಿತ ಓವರ್ ಗಳ ಪಂದ್ಯದ ನಾಯಕ ಮಹೇಂದ್ರ ಸಿಂಗ್ ಧೋನಿ ಶೀಘ್ರದಲ್ಲೇ ಮೂರು ಅಂತಾರಾಷ್ಟ್ರೀಯ ದಾಖಲೆಗಳನ್ನು ಸರಿಗಟ್ಟಲಿದ್ದಾರೆ.
ಮುಂಬರುವ ನ್ಯೂಜಿಲೆಂಡ್ ವಿರುದ್ಧ ಐದು ಏಕದಿನ ಪಂದ್ಯದ ಸರಣಿಯಲ್ಲಿ ಮಹೇಂದ್ರ ಸಿಂಗ್ ಬರೋಬ್ಬರಿ ಮೂರು ದಾಖಲೆ ನಿರ್ವಿುಸಲಿದ್ದಾರೆ. ಈ ಪೈಕಿ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಹೆಸರಲ್ಲಿರುವ ಅತೀ ಹೆಚ್ಚು ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ ದಾಖಲೆಯನ್ನು ಧೋನಿ ಮೀರಿ ನಿಲ್ಲಲಿದ್ದಾರೆ, ಪ್ರಸ್ತುತ ಧೋನಿ ಹಾಗೂ ರಿಕ್ಕಿ ಪಾಂಟಿಂಗ್ ಇಬ್ಬರೂ 324 ಪಂದ್ಯಗಳನ್ನು ಆಡಿದ್ದಾರೆ. ಆದರೆ ಪಾಂಟಿಂಗ್ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದು, ಧೋನಿ ಇನ್ನೊಂದು ಪಂದ್ಯದಲ್ಲಿ ಆಡಿದರೂ ಅವರ ದಾಖಲೆಯನ್ನು ಧೋನಿ ಮುರಿಯುತ್ತಾರೆ. ಧೋನಿ ಹೆಸರಿಗೆ ನಾಯಕನಾಗಿ ಅಧಿಕ ಪಂದ್ಯವಾಡಿದ ದಾಖಲೆ ನಿರ್ಮಾಣವಾಗುತ್ತದೆ.
ಇದೇ ವೇಳೆ ಪಾಂಟಿಂಗ್ ಆಸಿಸ್ ತಂಡದ ನಾಯಕರಾಗಿ 165 ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದು, ಧೋನಿ 107 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದಾರೆ. ಹೀಗಾಗಿ ಇದೇ ಅಕ್ಟೋಬರ್ನಲ್ಲಿ ಆರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಯಲ್ಲಿ ಒಂದು ಪಂದ್ಯ ಗೆದ್ದರೂ ಧೋನಿ ಪಾಟಿಂಗ್ ದಾಖಲೆಯನ್ನು ಸರಿಗಟ್ಟಲಿದ್ದಾರೆ. ಆಗ ಧೋನಿ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಲಿದ್ದು, ಅಲನ್ ಬಾರ್ಡರ್ ರೊಂದಿಗೆ ಸ್ಥಾನ ಹಂಚಿಕೊಳ್ಳಲ್ಲಿದ್ದಾರೆ.
ಧೋನಿ ಪಾಲಿಗೆ ಮೂರನೇ ದಾಖಲೆಯಾಗಿ ಸಿಕ್ಸರ್ ಗಳಿದ್ದು, ಆಸಿಸ್ ತಂಡದ ನಾಯಕನಾಗಿ ರಿಕಿ ಪಾಂಟಿಂಗ್ 123 ಸಿಕ್ಸ್ ಸಿಡಿಸಿದ್ದಾರೆ. ಧೋನಿ ಈಗಾಗಲೇ 121 ಸಿಕ್ಸ್ ಸಿಡಿಸಿದ್ದು, ಪಾಂಟಿಂಗ್ ಅವರ ಈ ದಾಖಲೆಯನ್ನು ಮುರಿಯಲು ಧೋನಿಗೆ ಇನ್ನು ಕೇವಲ ಮೂರು ಸಿಕ್ಸರ್ ಗಳ ಅಗತ್ಯವಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


