ಕೊಹ್ಲಿ, ಕುಂಬ್ಳೆ ತಂಡದಲ್ಲಿ ಯುವಕರಿಗೆ ಪೂರಕ ವಾತಾವರಣ ಸೃಷ್ಟಿಸಿದ್ದಾರೆ: ರಾಹುಲ್ ದ್ರಾವಿಡ್
ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ಅನಿಲ್ ಕುಂಬ್ಳೆ ತಂಡದಲ್ಲಿ ಯುವಕರಿಗೆ ಪೂರಕ ವಾತಾವರಣ ಸೃಷ್ಟಿಸಿರುವುದರಿಂದಲೇ ಉತ್ತಮ ಪ್ರದರ್ಶನಗಳು ಹೊರಹೊಮ್ಮುತ್ತಿವೆ ಎಂದು ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಹೇಳಿದ್ದಾರೆ.

ನವದೆಹಲಿ: ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ಅನಿಲ್ ಕುಂಬ್ಳೆ ತಂಡದಲ್ಲಿ ಯುವಕರಿಗೆ ಪೂರಕ ವಾತಾವರಣ ಸೃಷ್ಟಿಸಿರುವುದರಿಂದಲೇ ಉತ್ತಮ ಪ್ರದರ್ಶನಗಳು ಹೊರಹೊಮ್ಮುತ್ತಿವೆ ಎಂದು ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಹೇಳಿದ್ದಾರೆ.
ಕಿರಿಯರ ರಾಷ್ಟ್ರೀಯ ಕ್ರಿಕೆಟ್ ತಂಡದ ಕೋಚ್ ಕೂಡ ಆಗಿರುವ "ದಿ ವಾಲ್" ಖ್ಯಾತಿಯ ರಾಹುಲ್ ದ್ರಾವಿಡ್ ಅವರು ಇಂಗ್ಲೆಂಡ್ ವಿರುದ್ಧ ಇತ್ತೀಚೆಗೆ ಮುಕ್ತಾಯವಾದ ಟೆಸ್ಟ್ ಸರಣಿಯಲ್ಲಿನ ಟೀಂ ಇಂಡಿಯಾ ಆಟಗಾರರ ಪ್ರದರ್ಶನವನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ ತಂಡದ ಪರ ಎರಡನೇ ತ್ರಿಶತಕ ಸಾಧಿಸಿದ ಸಾಧನೆ ಮಾಡಿದ ಕರುಣ್ ನಾಯರ್ ಹಾಗೂ ಪದಾರ್ಪಣೆ ಪಂದ್ಯದಲ್ಲೇ ಶತಕ ಭಾರಿಸಿದ ಹರ್ಯಾಣ ಆಟಗಾರ್ ಜಯಂತ್ ಯಾದವ್ ಅವರ ಪ್ರದರ್ಶನಕ್ಕೆ ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ಅನಿಲ್ ಕುಂಬ್ಳೆ ಅವರೇ ಕಾರಣ ಎಂದು ದ್ರಾವಿಡ್ ಹೇಳಿದ್ದಾರೆ.
ತಂಡದಲ್ಲಿ ನಾಯಕ ಕೊಹ್ಲಿ ಹಾಗೂ ಕೋಚ್ ಕುಂಬ್ಳೆ ಯುವಕರಿಗೆ ಪೂರಕವಾತಾವರಣ ಸೃಷ್ಟಿ ಮಾಡಿದ್ದು, ಇದೇ ಕಾರಣದಿಂದಲೇ ಆಟಗಾರರು ಯಾವುದೇ ರೀತಿಯ ಒತ್ತಡವಿಲ್ಲದ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡುತ್ತಿದ್ದಾರೆ. ಕರುಣ್ ನಾಯರ್ ಹಾಗೂ ಜಯಂತ್ ಯಾದವ್ ಇಬ್ಬರೂ ಕಿರಿಯರ ತಂಡದಿಂದ ಹಿರಿಯರ ತಂಡಕ್ಕೆ ಸೇರ್ಪಡೆಯಾದವರು. ಯಾವುದೇ ಆಟಗಾರನಿಗೆ ಮೊದಲಿಗೆ ಆಂತಾರಾಷ್ಟ್ರೀಯ ಪಂದ್ಯವನ್ನಾಡುವಾಗ ಕೊಂಚ ಒತ್ತಡವಿರುತ್ತದೆ. ಆದರೆ ಕೊಹ್ಲಿ ಮತ್ತು ಕುಂಬ್ಳೆ ತಂಡದಲ್ಲಿ ಅಂತಹ ಒತ್ತಡಕ್ಕೆ ಆಸ್ಪದ ನೀಡಲಿಲ್ಲ. ಡ್ರೆಸಿಂಗ್ ಕೋಣೆಯನ್ನು ಒತ್ತಡ ರಹಿತವನ್ನಾಗಿಸಿದ್ದಾರೆ. ನಾನು ಕಿರಿಯರ ತಂಡದ ಕೋಚ್ ಆಗಿರಬಹುದು. ಆದರೆ ಹಿರಿಯರ ತಂಡದೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತೇನೆ. ನಾನು ಹತ್ತಿರದಿಂದ ನೋಡಿರುವಂತೆ ಪ್ರಸ್ತುತ ಟೀಂ ಇಂಡಿಯಾ ಡ್ರೆಸಿಂಗ್ ರೂಂ ವಾತಾವಾರಣ ಯುವಕರಿಗೆ ಪೂರಕವಾಗಿದೆ. ಯುವ ಆಟಗಾರರಿಗೆ ಸ್ವಾತಂತ್ರ್ಯವಿದೆ ಎಂದು ಹೇಳಿದ್ದಾರೆ.
ಪ್ರತಿಭಾನ್ವಿತ ಆಟಗಾರರನ್ನು ಬೆಳೆಸುವುದೇ ನಮ್ಮ ಗುರಿಯಾಗಿದ್ದು, ಯಾವುದಾದರೊಬ್ಬ ಆಟಗಾರ ಆಲ್ ರೌಂಡ್ ಪ್ರದರ್ಶನ ನೀಡುತ್ತಿದ್ದರೆ ಅಥವಾ ಅಥವಾ ಆಲ್ ರೌಂಡರ್ ಆಗುತ್ತಾನೆಂದು ಗೋಚರಿಸಿದರೆ ಅಂಥವರಿಗೆ ವಿಶೇಷ ಕಾಳಜಿ ವಹಿಸಿ ಮಾರ್ಗದರ್ಶನ ಮಾಡುತ್ತೇವೆ ಎಂದು ದ್ರಾವಿಡ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


