ಕ್ರಿಕೆಟ್

ಪತ್ನಿ ವಸ್ತ್ರ ಕುರಿತು ಟೀಕೆ" ಟೀಕಾಕಾರರನ್ನು ತರಾಟೆಗೆ ತೆಗೆದುಕೊಂಡ ಮೊಹಮ್ಮದ್ ಶಮಿ

ಪತ್ನಿ ವಸ್ತ್ರದ ಕುರಿತು ಟೀಕೆ ಮಾಡುತ್ತಿದ್ದ ಟೀಕಾಕಾರರನ್ನು ಭಾರತೀಯ ಕ್ರಿಕೆಟ್ ತಂಡ ವೇಗದ ಬೌಲರ್ ಮೊಹಮ್ಮದ್ ಶಮಿಯವರು ತರಾಟೆಗೆ ತೆಗೆದುಕೊಂಡಿದ್ದಾರೆ....

ಪತ್ನಿ ವಸ್ತ್ರ ಕುರಿತು ಟೀಕೆ" ಟೀಕಾಕಾರರನ್ನು ತರಾಟೆಗೆ ತೆಗೆದುಕೊಂಡ ಮೊಹಮ್ಮದ್ ಶಮಿ
ಭಾರತೀಯ ಕ್ರಿಕೆಟ್ ತಂಡ ವೇಗದ ಬೌಲರ್ ಮೊಹಮ್ಮದ್ ಶಮಿ ಮತ್ತು ಅವರ ಪತ್ನಿ
Published On :

ನವದೆಹಲಿ: ಪತ್ನಿ ವಸ್ತ್ರದ ಕುರಿತು ಟೀಕೆ ಮಾಡುತ್ತಿದ್ದ ಟೀಕಾಕಾರರನ್ನು ಭಾರತೀಯ ಕ್ರಿಕೆಟ್ ತಂಡ ವೇಗದ ಬೌಲರ್ ಮೊಹಮ್ಮದ್ ಶಮಿಯವರು ತರಾಟೆಗೆ ತೆಗೆದುಕೊಂಡಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಪತ್ನಿಯೊಂದಿಗಿರುವ ಫೋಟೋವೊಂದನ್ನು ಮೊಹಮ್ಮದ್ ಶಮಿಯವರು ಫೇಸ್ ಬುಕ್ ನಲ್ಲಿ ಹಾಕಿಕೊಂಡಿದ್ದರು. ಫೋಟೋದಲ್ಲಿ ಶಮಿ ಅವರ ಪತ್ನಿ ಬುರ್ಖಾ ಧರಿಸಿರಲಿಲ್ಲ. ಈ ಫೋಟೋಗೆ ಕೆಲ ಸಂಪ್ರದಾಯವಾದಿಗಳು ವಿರೋಧ ವ್ಯಕ್ತಪಡಿಸಿ ಟೀಕೆಗಳನ್ನು ವ್ಯಕ್ತಪಡಿಸಲು ಆರಂಭಿಸಿದ್ದರು.

ಶಮಿ ಅವರು ಮುಸ್ಲಿಂ ಧರ್ಮಕ್ಕೆ ಸೇರಿದವರಾಗಿದ್ದು, ಮುಸ್ಲಿಂ ಹೆಣ್ಣು ಮಕ್ಕಳು ಮೈ ತುಂಬಾ ಬಟ್ಟೆಯನ್ನು ತೊಡಬೇಕು ಹಾಗೂ ಸಾರ್ವಜನಿಕವಾಗಿ ಅರೆಬರೆ ತೊಟ್ಟು ತೋರಿಸಿಕೊಳ್ಳಬಾರದೆಂದು ಕೆಲ ಸಂಪ್ರದಾಯವಾದಿಗಳು ಟೀಕೆಗಳನ್ನು ವ್ಯಕ್ತಪಡಿಸಿದ್ದರು.

ಈ ಹಿನ್ನಲೆಯಲ್ಲಿ ಟೀಕಾಕಾರರನ್ನು ತರಾಟೆಗೆ ತೆಗೆದುಕೊಂಡ ಶಮಿ ಅವರು, ಇದು ನನ್ನ ಜೀವನವಾಗಿದ್ದು ಯಾವುದು ಮಾಡಿದರೆ ಸರಿ ಹಾಗೂ ಯಾವುದು ತಪ್ಪು ಎಂಬುದು ನನಗೆ ಗೊತ್ತಿದೆ. ನಾವೆಷ್ಟು ಒಳ್ಳೆಯವರೆಂಬುದನ್ನು ಮೊದಲು ನಮ್ಮ ಆಂತರಾಳವನ್ನು ಕೇಳಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ.

ಇದರಂತೆ ಶಮಿ ಅವರ ಬೆಂಬಲಕ್ಕೆ ಕ್ರಿಕೆಟರ್ ಮೊಹಮ್ಮದ್ ಕೈಫ್ ಅವರೂ ಕೂಡ ಬಂದಿದ್ದು, ಕಾಮೆಂಟ್ ಗಳಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ರೀತಿ ಕಾಮೆಂಟ್ ಗಳು ನಿಜಕ್ಕೂ ನಾಚಿಕೆಗೇಡು. ದೇಶದಲ್ಲಿ ಮಾಡಲು ಬೇರೆ ಬೇಕಾದಷ್ಟು ವಿಷಯಗಳಿವೆ. ಈ ವಿಷಯವನ್ನು ದೊಡ್ಡದು ಮಾಡಬೇಡಿ. ಶಮಿಗೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.