ಕ್ರಿಕೆಟ್

ಯುವಿಗಾಗಿ ಹೆಸರು ಬದಲಿಸಿಕೊಂಡ ಹೇಜೆಲ್ ಕೀಚ್

ರೂಪದರ್ಶಿ, ನಟಿ ಹೇಜೆಲ್ ಕೀಚ್ ರನ್ನು ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ವಿವಾಹವಾಗಿದ್ದು, ಇದೀಗ ಯುವಿಗಾಗಿ ಹೇಜೆಲ್ ತಮ್ಮ ಹೆಸರನ್ನು...

ಯುವಿಗಾಗಿ ಹೆಸರು ಬದಲಿಸಿಕೊಂಡ ಹೇಜೆಲ್ ಕೀಚ್
ಯುವರಾಜ್ ಸಿಂಗ್, ಹೇಜೆಲ್ ಕೀಚ್
Published On :
ನವದೆಹಲಿ: ರೂಪದರ್ಶಿ, ನಟಿ ಹೇಜೆಲ್ ಕೀಚ್ ರನ್ನು ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ವಿವಾಹವಾಗಿದ್ದು, ಇದೀಗ ಯುವಿಗಾಗಿ ಹೇಜೆಲ್ ತಮ್ಮ ಹೆಸರನ್ನು ಗುರ್ ಬಸಂತ್ ಕೌರ್ ಎಂದು ಬದಲಿಸಿಕೊಂಡು ಹಿಂದು ಸಂಪ್ರದಾಯದಂತೆ ನಿನ್ನೆ ವಿವಾಹವಾಗಿದ್ದಾರೆ. 
ನವೆಂಬರ್ 30 ರಂದು ಸಿಖ್ ಸಂಪ್ರದಾಯದಂತೆ ಯುವರಾಜ್ ಸಿಂಗ್ ವಿವಾಹವಾಗಿದ್ದರು. ಹೇಜೆಲ್ ಕೀಚ್ ಅವರ ತಂದೆ ಕ್ರೈಸ್ತ ಸಮುದಾಯಕ್ಕೆ ಸೇರಿದವರಾಗಿದ್ದು, ತಾಯಿ ಹಿಂದೂ ಧರ್ಮಕ್ಕೆ ಸೇರಿದ್ದರು. ಇದರಿಂದಾಗಿ ಹೇಜೆಲ್ ಕೀಚ್ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದು, ಯುವಿ ಬಹಳ ಗೌರವಿಸುವ ಬಾಬಾ ರಾಮ್ ಸಿಂಗ್ ಸಲಹೆಯಂತೆ ಹೇಜೆಲ್ ಕೀಚ್ ಹೆಸರನ್ನು ಗುರ್ ಬಸಂತ್ ಕೌರ್ ಎಂದು ಬದಲಾಯಿಸಲಾಗಿದೆ. 
ಹೇಜೆಲ್ ಕೀಚ್ ತಾಯಿ ಹಿಂದೂ ಧರ್ಮದವರಾಗಿದ್ದರಿಂದ ಹಿಂದು ಸಂಪ್ರದಾಯದಂತೆ ಗೋವಾದಲ್ಲಿ ಮದುವೆ ನಡೆಯಿತು. ಈ ಸಮಾರಂಭಕ್ಕೆ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಸೀಮಿತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ಸಚಿನ್ ತೆಂಡೂಲ್ಕರ್ ಭಾಗಿಯಾಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.