ಕ್ರಿಕೆಟ್

ಅಮೆರಿಕ ಭದ್ರತಾ ಸಿಬ್ಬಂದಿಯಿಂದ ಸುನಿಲ್ ಗವಾಸ್ಕರ್ ಗೆ ಅವಮಾನ

ಅಮೆರಿಕದಲ್ಲಿ ನಡೆದ ವೆಸ್ಟ್ ಇಂಡೀಸ್ ಮತ್ತು ಟೀಂ ಇಂಡಿಯಾ ನಡುವಣ ಟಿ20 ಪಂದ್ಯಾವಳಿ ವೀಕ್ಷಿಸಲು ತೆರಳಿದ್ದ ಕ್ರಿಕೆಟ್ ದಿಗ್ಗಜ ಸುನೀಲ್ ಗವಾಸ್ಕರ್ ಗೆ ಅಲ್ಲಿನ ಸಿಬ್ಬಂದಿ...

ಅಮೆರಿಕ ಭದ್ರತಾ ಸಿಬ್ಬಂದಿಯಿಂದ ಸುನಿಲ್ ಗವಾಸ್ಕರ್ ಗೆ ಅವಮಾನ
ಸುನೀಲ್ ಗವಾಸ್ಕರ್
Published On :

ಫ್ಲೋರಿಡಾ: ಅಮೆರಿಕದಲ್ಲಿ ನಡೆದ ವೆಸ್ಟ್ ಇಂಡೀಸ್ ಮತ್ತು ಟೀಂ ಇಂಡಿಯಾ ನಡುವಣ ಟಿ20 ಪಂದ್ಯಾವಳಿ ವೀಕ್ಷಿಸಲು ತೆರಳಿದ್ದ ಕ್ರಿಕೆಟ್ ದಿಗ್ಗಜ ಸುನೀಲ್ ಗವಾಸ್ಕರ್ ಗೆ ಅಲ್ಲಿನ ಸಿಬ್ಬಂದಿ ಕ್ರೀಡಾಂಗಣಕ್ಕೆ ಪ್ರವೇಶ ನಿರಾಕರಿಸುವ ಮೂಲಕ ಅವಮಾನಿಸಿದ್ದಾರೆ.

ಅವರು ಯಾರಾದರೆ ನನಗೇನು ಎಂಬ ಉದ್ಧಟತನ ಮೆರೆದಿರುವ ಅಲ್ಲಿನ ಸಿಬ್ಬಂದಿ ವರ್ತನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆಗೆ ಗುರಿಯಾಗಿದೆ.

ಸೆಂಟ್ರಲ್ ಬ್ರೊವಾರ್ಡ್ ರೀಜನಲ್ ಪಾರ್ಕ್ ನ ಲಾಡರ್ಡೇಲ್ ಕ್ರೀಡಾಂಗಣಕ್ಕೆ ಭಾರತ ತಂಡ ಬರುವ ಮುನ್ನ ನಡೆದ ಘಟನೆಯಾಗಿದೆ. ಈ ವೇಳೆ ಅಲ್ಲಿ ನೆರೆದಿದ್ದ ಕ್ರಿಕೆಟ್ ಅಭಿಮಾನಿಯೊಬ್ಬರು ಇವರು ವಿಶ್ವಶ್ರೇಷ್ಠ ಮಾಜಿ ಬ್ಯಾಟ್ಸ್ ಮನ್ ಎಂದರೂ ಕೇಳದ ಭದ್ರತಾ ಸಿಬ್ಬಂದಿ ಇವರು ಯಾರಾದರೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಇಷ್ಟೆಲ್ಲ ಆದರೂ ಶಾಂತ ಮೂರ್ತಿಯಂತೆ ನಿಂತಿದ್ದ  ಸುನೀಲ್ ಗವಾಸ್ಕರ್ ಅಭಿಮಾನಿಗಳ ಜತೆ ಸೆಲ್ಫೀ ಕ್ಲಿಕ್ಕಿಸಿಕೊಳ್ಳುವುದರಲ್ಲಿ ನಿರತರಾದರು.

ಭಾರತ ತಂಡದ ಬಸ್ ಕ್ರೀಡಾಂಗಣ ಒಳಕ್ಕೆ ಹೋದ ನಂತರ ಸುನೀಲ್ ಗವಾಸ್ಕರ್ ಅವರಿಗೆ ಪ್ರವೇಶ ಸಿಕ್ಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.