ಕ್ರಿಕೆಟ್

1 ರನ್‌ನಿಂದ ವಿಶ್ವ ದಾಖಲೆಯ ರನ್ ಚೇಸ್ ಕಳೆದುಕೊಂಡ ಟೀಂ ಇಂಡಿಯಾ

ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಪಂದ್ಯದಲ್ಲಿ 1 ರನ್ ನಿಂದ ವಿಶ್ವ ದಾಖಲೆ ರನ್ ಚೇಸ್ ಅನ್ನು ಟೀಂ ಇಂಡಿಯಾ ಕಳೆದುಕೊಂಡಿದೆ...

1 ರನ್‌ನಿಂದ ವಿಶ್ವ ದಾಖಲೆಯ ರನ್ ಚೇಸ್ ಕಳೆದುಕೊಂಡ ಟೀಂ ಇಂಡಿಯಾ
ಟೀಂ ಇಂಡಿಯಾ
Published On :
ಫೋರ್ಟ್ ಲಾರ್ಡರ್ ಡೇಲ್: ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಪಂದ್ಯದಲ್ಲಿ 1 ರನ್ ನಿಂದ ವಿಶ್ವ ದಾಖಲೆ ರನ್ ಚೇಸ್ ಅನ್ನು ಟೀಂ ಇಂಡಿಯಾ ಕಳೆದುಕೊಂಡಿದೆ. 
ವಿಂಡೀಸ್ ನೀಡಿದ 246 ರನ್ ಗಳ ಬೃಹತ್ ಗುರಿ ಬೆನ್ನು ಹತ್ತಿದ ಭಾರತ ಆರಂಭಿಕ ಆಟಗಾರ ರೋಹಿತ್ ಶರ್ಮಾ (62 ರನ್, 28 ಎಸೆತ) ಹಾಗೂ ಕನ್ನಡಿಗ ಕೆಎಲ್ ರಾಹುಲ್ (110 ರನ್, 51 ಎಸೆತ) ಅವರ ಅಜೇಯ ಶತಕದ ಹೊರತಾಗಿಯೂ ತಂಡ 1 ರನ್ ಗಳ ರೋಚಕ ಸೋಲು ಕಾಣುವ ಮೂಲಕ ವಿಶ್ವ ದಾಖಲೆಯಿಂದ ವಂಚಿತವಾಯಿತು. 
ಅಂತಿಮ ಓವರ್ ನಲ್ಲಿ ಟೀಂ ಇಂಡಿಯಾ ಗೆಲ್ಲಲು 8 ರನ್ ಬೇಕಿತ್ತು. ಈ ವೇಳೆ ಕಣದಲ್ಲಿದ್ದಿದ್ದು ರಾಹುಲ್ ಹಾಗೂ ಸೂಪರ್ ಹಿಟ್ ಮೂಲಕ ಪಂದ್ಯ ಮುಗಿಸುವ ಚಾಕುಚಕ್ಯತೆ ಹೊಂದಿದ್ದ ಧೋನಿ. ಇವರಿಬ್ಬರ ಜೋಡಿ ಪಂದ್ಯವನ್ನು ಗೆಲ್ಲಿಸಿಕೊಡುತ್ತದೆ ಎಂದು ನಂಬಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ಕೊನೆಯಲ್ಲಿ ತೀರಾ ನಿರಾಸೆ ಎದುರಾಯಿತು.
ಮೊದಲ ಐದು ಎಸೆತದಲ್ಲಿ ಬ್ರಾವೋ ಕೇವಲ 6 ರನ್ ನೀಡಿ ಅಂತಿಮ ಎಸೆತದವರೆಗೂ ಪಂದ್ಯ ಮುಂದುವರೆಯುವಂತೆ ಮಾಡಿದರು. ಅಂತಿಮ ಎಸೆತದವರೆಗೂ ಗೆಲುವು ಭಾರತದ್ದೇ ಎಂದು ಭಾವಿಸಲಾಗಿತ್ತಾದರೂ, ಅಂತಿಮ ಎಸೆತದಲ್ಲಿ 2 ರನ್ ಗಳ ಅವಶ್ಯಕತೆ ಇದ್ದಾಗ ಧೋನಿ ಸ್ಯಾಮುಯೆಲ್ಸ್ ಗೆ ವಿಕೆಟ್ ನೀಡುವ ಮೂಲಕ ಭಾರತ 1 ರನ್ ಅಂತರದ ವಿರೋಚಿತ ಸೋಲು ಅನುಭವಿಸಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.