ಕ್ರಿಕೆಟ್

ಮಳೆಯಿಂದ ಪಂದ್ಯ ರದ್ದು, 1-0 ಅಂತರದಲ್ಲಿ ಸರಣಿ ವೆಸ್ಟ್ ಇಂಡೀಸ್ ಕೈವಶ

ಅಮೆರಿಕ ಫ್ಲೋರಿಡಾದಲ್ಲಿ ಭಾನುವಾರ ನಡೆದ ಎರಡನೇ ಟಿ20 ಪಂದ್ಯ ಮಳೆ ಹಾಗೂ ತೇವಾಂಶದಿಂದ ಕೂಡಿದ ಮೈದಾನದಿಂದಾಗಿ ರದ್ದಾಗಿದ್ದು, 2 ಪಂದ್ಯಗಳ ಸರಣಿಯನ್ನು ವೆಸ್ಟ್ ಇಂಡೀಸ್ 1-0 ಅಂತರದಲ್ಲಿ ತನ್ನ ಕೈವಶ ಮಾಡಿಕೊಂಡಿದೆ.

ಮಳೆಯಿಂದ ಪಂದ್ಯ ರದ್ದು, 1-0 ಅಂತರದಲ್ಲಿ ಸರಣಿ ವೆಸ್ಟ್ ಇಂಡೀಸ್ ಕೈವಶ
ಮೈದಾನದಲ್ಲಿ ಮಳೆ (ಕ್ರಿಕ್ ಇನ್ಫೋ ಚಿತ್ರ)
Published On :

ಫ್ಲೋರಿಡಾ: ಅಮೆರಿಕ ಫ್ಲೋರಿಡಾದಲ್ಲಿ ಭಾನುವಾರ ನಡೆದ ಎರಡನೇ ಟಿ20 ಪಂದ್ಯ ಮಳೆ ಹಾಗೂ ತೇವಾಂಶದಿಂದ ಕೂಡಿದ ಮೈದಾನದಿಂದಾಗಿ ರದ್ದಾಗಿದ್ದು, 2 ಪಂದ್ಯಗಳ ಸರಣಿಯನ್ನು ವೆಸ್ಟ್ ಇಂಡೀಸ್ 1-0 ಅಂತರದಲ್ಲಿ ತನ್ನ ಕೈವಶ ಮಾಡಿಕೊಂಡಿದೆ.

ವೆಸ್ಟ್ ಇಂಡೀಸ್ ನೀಡಿದ್ದ 144 ರನ್ ಗಳ ಸಾಧಾರಣ ಗುರಿಯನ್ನು ಬೆನ್ನು ಹತ್ತಿದ್ದ ಭಾರತ ಗೆಲುವಿನ ವಿಶ್ವಾಸದಲ್ಲಿಯೇ ಬ್ಯಾಟಿಂಗ್ ಆರಂಭಿಸಿತ್ತು. ಆರಂಭಿಕರಾದ ರೋಹಿತ್ ಶರ್ಮಾ ಹಾಗು ಅಜಿಂಕ್ಯ ರಹಾನೆ ಭಾರತಕ್ಕೆ ಉತ್ತಮ ಆರಂಭ ಒದಗಿಸಿದ್ದರು. 2 ಓವರ್ ಗೆ ಭಾರತ ವಿಕೆಟ್ ನಷ್ಟವಿಲ್ಲದೇ 15 ರನ್ ಕಲೆಹಾಕಿತ್ತು. ಆದರೆ ಈ ಹಂತದಲ್ಲಿ ಸುರಿದ ಮಳೆ ಪಂದ್ಯಕ್ಕೆ ಅಡ್ಡಿಪಡಿಸಿತು. ಸುಮಾರು 1 ಗಂಟೆಗೂ ಅಧಿಕ ಕಾಲ ಸುರಿದ ಮಳೆಯಿಂದಾಗಿ ಪಿಚ್ ಸೇರಿದಂತೆ ಇಡೀ ಮೈದಾನ ತೇವವಾಗಿತ್ತು. ಬಳಿಕ ಮಳೆ ನಿಂತಿತಾದರೂ, ಅತಿಯಾದ ತೇವಾಂಶದಿಂದಾಗಿ ಆಟ ಮುಂದುವರೆಸಲು ಸಾಧ್ಯವಿಲ್ಲ ಎಂದು ಮನಗಂಡ ಅಂಪೈರ್ ಗಳು ಪಂದ್ಯವನ್ನು ರದ್ದುಗೊಳಿಸಿದರು.

ಭಾರತದ ಪರ ರೋಹತ್ ಶರ್ಮಾ 10 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರೆ, ರಹಾನೆ 4 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದರು.

ಇನ್ನು ನಿನ್ನೆ ನಡೆದ ಮೊದಲ ಪಂದ್ಯದಲ್ಲಿ 1 ರನ್ ಅಂತರದಲ್ಲಿ ರೋಚಕ ಜಯಸಾಧಿಸಿದ್ದ ವೆಸ್ಟ್ ಇಂಡೀಸ್ ತಂಡ ಇಂದಿನ ಪಂದ್ಯ ರದ್ದಾದ ಬಳಿಕ 1-0 ಅಂತರದಲ್ಲಿ ಸರಣಿ ಕೈವಶ ಮಾಡಿಕೊಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.