"ಅಮೆರಿಕದಲ್ಲಿ ಅದ್ಬುತ ಕ್ರಿಕೆಟ್": ಭಾರತ-ವಿಂಡೀಸ್ ಟಿ20 ಕುರಿತು ಕ್ರಿಕೆಟ್ ದೇವರ ಗುಣಗಾನ
ಅಮೆರಿಕದ ಫ್ಲೋರಿಡಾದಲ್ಲಿ ನಡೆದ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟಿ20 ಪಂದ್ಯದ ಕುರಿತು ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರು ಟ್ವೀಟ್ ಮಾಡಿದ್ದು, ಅಮೆರಿಕ ಅದ್ಬುತ ಕ್ರಿಕೆಟ್ ಗೆ ಸಾಕ್ಷಿಯಾಯಿತು ಎಂದು ಹೇಳಿದ್ದಾರೆ..

ಮುಂಬೈ: ಅಮೆರಿಕದ ಫ್ಲೋರಿಡಾದಲ್ಲಿ ನಡೆದ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟಿ20 ಪಂದ್ಯದ ಕುರಿತು ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರು ಟ್ವೀಟ್ ಮಾಡಿದ್ದು, ಅಮೆರಿಕ ಅದ್ಬುತ ಕ್ರಿಕೆಟ್ ಗೆ ಸಾಕ್ಷಿಯಾಯಿತು ಎಂದು ಹೇಳಿದ್ದಾರೆ.
ಪಂದ್ಯ ರೋಚಕ ಮುಕ್ತಾಯ ಕಾಣುತ್ತಿದ್ದಂತೆಯೇ ಟ್ವೀಟ್ ಮಾಡಿರುವ ಸಚಿನ್ ತೆಂಡೂಲ್ಕರ್ ಅಮೆರಿಕ ಮತ್ತು ಪ್ರಪಂಚದ ಇತರೆ ದೇಶಗಳಿಗೆ ಅತ್ಯುತ್ತಮ ಟಿ20 ಕ್ರಿಕೆಟ್ ಪಂದ್ಯದ ರಸದೌತಣ ದೊರೆತಿದೆ. ಉಭಯ ತಂಡಗಳೂ ಅತ್ಯುತ್ತಮವಾಗಿ ಆಡಿದವು ಎಂದು ಹೇಳಿದ್ದಾರೆ. ಇದೇ ವೇಳೆ ಕನ್ನಡಿಗೆ ಕೆಎಲ್ ರಾಹುಲ್ ಆಟವನ್ನು ಕೊಂಡಾಡಿರುವ ಸಚಿನ್, ಧೋನಿ ತಂಡ ಗೆಲುವಿಗಾಗಿ ಅಂತಿಮ ಕ್ಷಣದವರೆಗೂ ಅತ್ಯುತ್ತಮವಾಗಿ ಹೋರಾಡಿತು ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


