ಪ್ರಭಾವಿ ಬೌಲಿಂಗ್ ದಾಳಿಗೆ ತತ್ತರಿಸಿದ ವಿಂಡೀಸ್; ಭಾರತಕ್ಕೆ 237 ರನ್ ಗಳ ರೋಚಕ ಜಯ
ಡ್ರಾದತ್ತ ಸಾಗಿದ್ದ ಪಂದ್ಯವನ್ನು ಭಾರತದ ಬೌಲರ್ ಗಳು ತಮ್ಮ ಕರಾರುವಕ್ಕಾದ ಬೌಲಿಂಗ್ ದಾಳಿ ಮೂಲಕ ರೋಚಕ ಗೆಲುವಾಗಿ ಬದಲಿಸಿದ್ದು, ಭಾರತಕ್ಕೆ 237 ರನ್ ಗಳ ಭರ್ಜರಿ ಜಯ ತಂದಿತ್ತಿದ್ದಾರೆ.

ಗ್ರಾಸ್ ಐಲೆಟ್: ಡ್ರಾದತ್ತ ಸಾಗಿದ್ದ ಪಂದ್ಯವನ್ನು ಭಾರತದ ಬೌಲರ್ ಗಳು ತಮ್ಮ ಕರಾರುವಕ್ಕಾದ ಬೌಲಿಂಗ್ ದಾಳಿ ಮೂಲಕ ರೋಚಕ ಗೆಲುವಾಗಿ ಬದಲಿಸಿದ್ದು, ಭಾರತಕ್ಕೆ 237 ರನ್ ಗಳ ಭರ್ಜರಿ ಜಯ ತಂದಿತ್ತಿದ್ದಾರೆ.
ವೆಸ್ಟ್ ಇಂಡೀಸ್ ನ ಗ್ರಾಸ್ ಐಲೆಟ್ ನಲ್ಲಿ ನಿನ್ನೆ ಮುಕ್ತಾಯವಾದ 3ನೇ ಟೆಸ್ಟ್ ಪಂದ್ಯದಲ್ಲಿ ಭಾರತ ವೆಸ್ಟ್ ಇಂಡೀಸ್ ಎದುರು 237 ರನ್‌ಗಳಿಂದ ರೋಚಕ ಗೆಲುವು ಸಾಧಿಸಿ 4 ಪಂದ್ಯಗಳ ಸರಣಿಯಲ್ಲಿ 2-0ಯಿಂದ ಮುನ್ನಡೆ ಸಾಧಿಸಿದೆ. ಅಲ್ಲದೆ ಸರಣಿಯನ್ನು ತನ್ನ ಕೈವಶ ಮಾಡಿಕೊಂಡಿದೆ. ಎರಡನೇ ಇನ್ನಿಂಗ್ಸ್ ನಲ್ಲಿ 356 ರನ್ ಗಳ ಗುರಿ ಪಡೆದ ವಿಂಡೀಸ್ ತಂಡ ಭಾರತದ ಪ್ರಭಾವಿ ಬೌಲಿಂಗ್ ದಾಳಿಗೆ ತತ್ತರಿಸಿ ಕೇವಲ 108 ರನ್ ಗಳಿಗೆ ಆಲ್ ಔಟ್ ಆಯಿತು.
ವಿಂಡೀಸ್ ಪರ ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ ಡರೇನ್ ಬ್ರಾನೋ 59 ರನ್ ಗಳಿಸಿ ಇನ್ನಿಂಗ್ಸ್ ಗೆ ಜೀವ ತುಂಬುವ ಪ್ರಯತ್ನ ಮಾಡಿದರಾದರೂ, ಶಮಿ ಬೌಲಿಂಗ್ ನಲ್ಲಿ ರೋಹಿತ್ ಶರ್ಮಾಗೆ ಕ್ಯಾಚಿತ್ತು ನಿರ್ಗಮಿಸಿದರು. ಬಳಿಕ ಬಂದ ಯಾವೋಬ್ಬ ಬ್ಯಾಟ್ಸಮನ್ ಕೂಡ ಗಟ್ಟಿಯಾಗಿ ಕ್ರೀಸ್ ನಲ್ಲಿ ನಿಲ್ಲುವ ಪ್ರಯತ್ನ ಮಾಡಲಿಲ್ಲ.
ಭಾರತದ ಪರ 2 ನೇ ಇನ್ನಿಂಗ್ಸ್‌ನಲ್ಲಿ ಮಹಮದ್ ಶಮಿ 3 ವಿಕೆಟ್ ಕಬಳಿಸಿದರೆ,ಇಶಾಂತ್ ಶರ್ಮಾಮತ್ತು ಜಡೇಜಾ ತಲಾ 2 ವಿಕೆಟ್ ಪಡೆದರು. ಅಂತೆಯೇ ಭುವನೇಶ್ವರ್ ಕುಮಾರ್ ,ಆರ್ ಅಶ್ವಿನ್ ತಲಾ 1 ವಿಕೆಟ್ ಪಡೆದರು. ಬ್ರಾವೋ ಗಳಿಸಿದ್ದ 59 ರನ್ ಗಳೇ ವಿಂಡೀಸ್ ಪರ ಗರಿಷ್ಟ ವೈಯುಕ್ತಿಕ ಮೊತ್ತವಾಗಿತ್ತು.
ಸಂಕ್ಷಿಪ್ತ ಸ್ಕೋರ್
ಭಾರತ- ಮೊದಲ ಇನ್ನಿಂಗ್ಸ್ 353 ಮತ್ತು 2ನೇ ಇನ್ನಿಂಗ್ಸ್ 7 ವಿಕೆಟ್ ನಷ್ಟಕ್ಕೆ 217 ರನ್ (ಡಿಕ್ಲೇರ್)
ವೆಸ್ಟ್ ಇಂಡೀಸ್ -ಮೊದಲ ಇನ್ನಿಂಗ್ಸ್ 225 ಮತ್ತು ಎರಡನೇ ಇನ್ನಿಂಗ್ಸ್ 108 ರನ್ ಆಲ್ ಔಟ್
ಪಂದ್ಯ ಶ್ರೇಷ್ಠ : ಆರ್ ಅಶ್ವಿನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


