ಕ್ರಿಕೆಟ್

ಪುಣೆ ವಿರುದ್ಧ ಕೊನೆ ಎಸೆತದಲ್ಲಿ ಗೆಲುವಿನ ಗುರಿ ಮುಟ್ಟಿದ ಗುಜರಾತ್

ಐಪಿಎಲ್ 9ನೇ ಆವೃತ್ತಿಯ ಪುಣೆ ಸೂಪರ್ ಜೈಂಟ್ಸ್ ಹಾಗೂ ಗುಜರಾತ್ ಲಯನ್ಸ್ ನಡುವಿನ ಪಂದ್ಯದ ಕೊನೆಯ ಎಸೆತದಲ್ಲಿ ಗುಜರಾತ್ ಲಯನ್ಸ್ ಪಂದ್ಯವನ್ನು ಗೆಲ್ಲುವ...

ಪುಣೆ ವಿರುದ್ಧ ಕೊನೆ ಎಸೆತದಲ್ಲಿ ಗೆಲುವಿನ ಗುರಿ ಮುಟ್ಟಿದ ಗುಜರಾತ್
ಗುಜರಾತ್ ಲಯನ್ಸ್
Published On :

ಪುಣೆ: ಐಪಿಎಲ್ 9ನೇ ಆವೃತ್ತಿಯ ಪುಣೆ ಸೂಪರ್ ಜೈಂಟ್ಸ್ ಹಾಗೂ ಗುಜರಾತ್ ಲಯನ್ಸ್ ನಡುವಿನ ಪಂದ್ಯದ ಕೊನೆಯ ಎಸೆತದಲ್ಲಿ ಗುಜರಾತ್ ಲಯನ್ಸ್ ಪಂದ್ಯವನ್ನು ಗೆಲ್ಲುವ ಮೂಲಕ ಪುಣೆಗೆ ಮತ್ತೊಂದು ಶಾಕ್ ನೀಡಿದೆ.

ಮಹಾರಾಷ್ಟ್ರದ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪುಣೆ ಪರ ಸ್ಟೀವನ್ ಸ್ಮಿತ್ ಭರ್ಜರಿ ಶತಕ ಸಿಡಿಸಿ ತಂಡ 195 ರನ್ ಗಳಿಸಲು ಕಾರಣರಾದರು. 196 ರನ್ ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಗುಜರಾತ್ ತಂಡ ಕೊನೆಯ ಎಸೆತದಲ್ಲಿ 1 ರನ್ ಗಳಿಸುವ ಮೂಲಕ ಪಂದ್ಯವನ್ನು ಕೈವಶ ಮಾಡಿಕೊಂಡಿತು.

ಗುಜರಾತ್ ಲಯನ್ಸ್ ಪರ ಡ್ವೇನ್ ಸ್ಮಿತ್ 63, ಮೆಕ್ಕಲಂ 43, ಸುರೇಶ್ ರೈನಾ 34, ದಿನೇಶ್ ಕಾರ್ತಿಕ್ 33, ಡ್ವೇನ್ ಬ್ರಾವೊ 7, ರವೀಂದ್ರ ಜಡೇಜಾ 0, ಇಶಾನ್ ಕಿಶನ್ 0, ಜೇಮ್ಸ್ ಫಾಲ್ಕನರ್ ಅಜೇಯ 9 ಹಾಗೂ ಪ್ರವೀಣ್ ಕುಮಾರ್ 0 ರನ್ ಗಳಿಸಿದ್ದಾರೆ.

ಪುಣೆ ಪರ ಅಶೋಕ್ ದಿಂಡಾ, ಥಿಸ್ಸರ ಪೆರೇರಾ ತಲಾ 2 ವಿಕೆಟ್ ಪಡೆದರೆ, ರಜತ್ ಭಾಟಿಯಾ 1 ವಿಕೆಟ್ ಪಡೆದಿದ್ದಾರೆ.

ಪುಣೆ ಪರ ಬ್ಯಾಟ್ ಮಾಡಿದ ರಹಾನೆ 53, ಸೌರಭ್ ತಿವಾರಿ 1, ಸ್ಟೀವನ್ ಸ್ಮಿತ್ 101, ಎಂಎಸ್ ಧೋನಿ ಅಜೇಯ 30 ಹಾಗೂ ಥಿಸ್ಸರ ಪೆರೇರಾ 3 ರನ್ ಗಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.