ಕ್ರಿಕೆಟ್

ಪ್ರೀತಿ ಝಿಂಟಾ ತಂಡ ಮಣಿಸಿದ ಮುಂಬೈ ಇಂಡಿಯನ್ಸ್

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 9ನೇ ಆವೃತ್ತಿಯಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿದ್ದ ಮುಂಬೈ ಇಂಡಿಯನ್ಸ್ ತಂಡ ಕಿಂಗ್ಸ್ ಇಲೆವೆನ್ ಪಂಜಾಬ್...

ಪ್ರೀತಿ ಝಿಂಟಾ ತಂಡ ಮಣಿಸಿದ ಮುಂಬೈ ಇಂಡಿಯನ್ಸ್
ಪಾರ್ಥಿವ್ ಪಟೇಲ್
Published On :

ಮೊಹಾಲಿ: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 9ನೇ ಆವೃತ್ತಿಯಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿದ್ದ ಮುಂಬೈ ಇಂಡಿಯನ್ಸ್ ತಂಡ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 25 ರನ್ ಗಳಿಂದ ಜಯ ಗಳಿಸಿದೆ.

ಪಂಜಾಬ್ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ 6 ವಿಕೆಟ್ ಗೆ ಭರ್ಜರಿ 189 ರನ್ ಕಲೆಹಾಕಿತು. 190 ರನ್ ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ್ದ ಬಾಲಿವುಡ್ ನಟಿ ಪ್ರೀತಿ ಝಿಂಟಾ ಮಾಲೀಕತ್ವದ ಕಿಂಗ್ಸ್ ಇಲೆವೆನ್ ತಂಡ 25 ರನ್ ಗಳಿಂದ ಸೋಲು ಅನುಭವಿಸಿತು.

ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಮುರುಳಿ ವಿಜಯ್ 19, ಮನನ್ ವೊಹ್ರಾ 7, ಶಾನ್ ಮಾರ್ಷ್ 45, ಗ್ಲೆನ್ ಮ್ಯಾಕ್ಸ್ ವೆಲ್ 56, ನಿಖಿಲ್ ನಾಯ್ಕ್ 1, ಅಕ್ಷರ್ ಪಟೇಲ್ 0, ಮಿಚೆಲ್ ಚಾನ್ಸನ್ 1, ಡೇವಿಡ್ ಮಿಲ್ಲರ್ ಅಜೇಯ 30 ಹಾಗೂ ಮೋಹಿತ್ ಶರ್ಮಾ 0 ರನ್ ಗಳಿಸಿದ್ದಾರೆ.

ಮುಂಬೈ ಪರ ಜಸ್ ಪ್ರೀತ್ ಬುಮ್ರಾ 3, ಟಿಮ್ ಸೌಥಿ, ಮಿಚೆಲ್ ಮೆಕ್ಲೀನಘನ್ ತಲಾ 2 ವಿಕೆಟ್ ಪಡೆದಿದ್ದಾರೆ.

ಮುಂಬೈ ಇಂಡಿಯನ್ಸ್ ಪರ ರೋಹಿತ್ ಶರ್ಮಾ 0, ಪಾರ್ಥಿವ್ ಪಟೇಲ್ 81, ಅಂಬಟ್ಟಿ ರಾಯುಡು 65, ಜೋಸ್ ಬಟ್ಲರ್ 24, ಪೊಲ್ಲಾರ್ಡ್ 10, ಹಾರ್ದಿಕ್ ಪಟೇಲ್ 4 ಹಾಗೂ ಕೃನಾಲ್ ಪಾಂಡ್ಯ ಅಜೇಯ 0 ರನ್ ಗಳಿಸಿದ್ದಾರೆ.

ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಮೋಹಿತ್ ಶರ್ಮಾ 3, ಸಂದೀಪ್ ಶರ್ಮಾ, ಮಿಚೆಲ್ ಜಾನ್ಸನ್ ಅಕ್ಷರ್ ಪಟೇಲ್ ತಲಾ 1 ವಿಕೆಟ್ ಪಡೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.