ಕ್ರಿಕೆಟ್

ಗುಜರಾತ್ ವಿರುದ್ಧ ಸನ್ ರೈಸರ್ಸ್ ಗೆ 10 ವಿಕೆಟ್ ಗಳ ಜಯ

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 9ನೇ ಆವೃತ್ತಿಯ ಪಂದ್ಯದಲ್ಲಿ ಗುಜರಾತ್ ಲಯನ್ಸ್ ವಿರುದ್ಧ ಸನ್ ರೈಸರ್ಸ್ 10 ವಿಕೆಟ್ ಗಳಿಂದ ಜಯ ಗಳಿಸಿದ್ದಾರೆ...

ಗುಜರಾತ್ ವಿರುದ್ಧ ಸನ್ ರೈಸರ್ಸ್ ಗೆ 10 ವಿಕೆಟ್ ಗಳ ಜಯ
ಸನ್ ರೈಸರ್ಸ್ ಹೈದರಾಬಾದ್
Published On :

ರಾಜ್ ಕೋಟ್: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 9ನೇ ಆವೃತ್ತಿಯ ಪಂದ್ಯದಲ್ಲಿ ಗುಜರಾತ್ ಲಯನ್ಸ್ ವಿರುದ್ಧ ಸನ್ ರೈಸರ್ಸ್ 10 ವಿಕೆಟ್ ಗಳಿಂದ ಜಯ ಗಳಿಸಿದ್ದಾರೆ.

ಟಾಸ್​​​ ಗೆದ್ದು ಫೀಲ್ಡಿಂಗ್​​ ಮಾಡಿದ ಸನ್​'ರೈಸರ್ಸ್​​​​ ಪಂದ್ಯದಲ್ಲಿ ಮೂರು ಪಂದ್ಯಗಳನ್ನು ಗೆದ್ದು ಬೀಗುತ್ತಿದ್ದ ಗುಜರಾತ್ ಲಯನ್ಸ್ ತಂಡವನ್ನು 135 ರನ್ ಗಳಿಗೆ ಕಟ್ಟಿ ಹಾಕಿದರು. 136 ರನ್ ಗಳ ಸುಲಭ ಗುರಿಯನ್ನು ಬೆನ್ನಟ್ಟಿದ್ದ ಸನ್ ರೈಸರ್ಸ್ ಪರ ಆರಂಭಿಕರಾದ ಡೇವಿಡ್ ವಾನ೯ರ್ ಅಜೇಯ 74 ಶಿಖರ್ ಧವನ್ ಅಜೇಯ 53 ರನ್ ಗಳ ಬಿರುಸಿನ ಆಟವಾಡಿ 14.5 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 137 ರನ್ ಗಳ ಗುರಿ ಮುಟ್ಟಿದರು.

ಗುಜರಾತ್ ಪರ ಆರನ್ ಫಿ೦ಚ್ 0, ಮೆಕ್ಕಲ೦ 18, ಸುರೇಶ್ ರೈನಾ 75, ದಿನೇಶ್  8, ಬ್ರಾವೊ 8, ಜಡೇಜಾ 14, ಅಕ್ಷದೀಪ್ 5, ಸ್ಟೈನ್ 1, ಪ್ರವೀಣ್ ಕುಮಾರ್ ಔಟಾಗದೆ 1 ರನ್ ಗಳಿಸಿದ್ದಾರೆ.

ಸನ್ ರೈಸರ್ಸ್ ಪರ ಭುವನೇಶ್ವರ್ ಕುಮಾರ್ 4, ಬರೀ೦ದರ್ ಸನ್‍೯, ಮುಸ್ತಾಫಿಜುರ್ ರೆಹಮಾನ್, ದೀಪಕ್ ಹೂಡಾ, ಬಿಪುಲ್ ಶಮ೯ ತಲಾ ಒಂದು ವಿಕೆಟ್ ಪಡೆದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.