ದೇಶದಲ್ಲಿ ಕ್ರಿಕೆಟ್ ಉತ್ತೇಜನಕ್ಕೆ ಬಿಸಿಸಿಐ ಕೊಡುಗೆ ಶೂನ್ಯ: ಸುಪ್ರೀಂ
ಶ್ರೀಮಂತ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯನ್ನು ಮಂಗಳವಾರ ತೀವ್ರ ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್....

Published On :
ನವದೆಹಲಿ: ಶ್ರೀಮಂತ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯನ್ನು ಮಂಗಳವಾರ ತೀವ್ರ ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್, ದೇಶದಲ್ಲಿ ಕ್ರಿಕೆಟ್ಗೆ ಅಂಟಿರುವ ಕಳಂಕ ಹೋಗಲಾಡಿಸಲು ಹಾಗೂ ಆಟವನ್ನು ಉತ್ತೇಜಿಸಲು ಬಿಸಿಸಿಐ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ಲೋಧಾ ಸಮಿತಿ ನೀಡಿದ ವರದಿಯನ್ನು ಯಾವ ರೀತಿಯಲ್ಲಿ ಜಾರಿಗೆ ತರಲು ಸಾಧ್ಯ ಎನ್ನುವುದರ ಕುರಿತು ಬಿಸಿಸಿಐ ಇಂದು ಸುಪ್ರೀಂಗೆ ವಿವರ ನೀಡಿತು. ಈ ವೇಳೆ ಸುಪ್ರೀಂ ವಿವಿಧ ರಾಜ್ಯಗಳಿಗೆ ಹಂಚಿಕೆ ಮಾಡಲಾಗಿದ್ದ ಅನುದಾನದ ಕುರಿತು ಕೋರ್ಟ್ ಮಾಹಿತಿ ಕೇಳಿದ್ದು, ಕಳೆದ ಐದು ವರ್ಷದಲ್ಲಿ 11 ರಾಜ್ಯಗಳಿಗೆ ಯಾವುದೇ ರೀತಿಯ ಅನುದಾನ ನೀಡದಿರುವುದು ದಾಖಲೆಗಳಳಿಂದ ಬಹಿರಂಗವಾಗಿದೆ.
ಬಿಸಿಸಿಐ ಗುಜರಾತ್ ಒಂದಕ್ಕೆ ಬರೋಬ್ಬರಿ 66 ಕೋಟಿ ರುಪಾಯಿ ಅನುದಾನ ನೀಡಿದ್ದು, ಹನ್ನೊಂದು ಈಶಾನ್ಯ ರಾಜ್ಯಗಳಿಗೆ ಕೇವಲ 50 ಲಕ್ಷ ರುಪಾಯಿ ಅನುದಾನ ನೀಡಿರುವ ಕುರಿತು ಮುಖ್ಯ ನ್ಯಾಯಮೂರ್ತಿ ಟಿ ಎಸ್ ಠಾಕೂರ್ ಅವರು ಪ್ರಶ್ನಿಸಿದರು. ಅಲ್ಲದೆ ಹಣ ನೀಡುವಾಗ ಯಾವುದೇ ತಾರ್ಕಿಕ ನಿರ್ಣಯ ಕೈಗೊಳ್ಳದೆ ಹಣ ವರ್ಗಾವಣೆ ಮಾಡುವುದು ಸಹ ಭ್ರಷ್ಟಾಚಾರ ಎಂದು ಕಿವಿ ಹಿಂಡಿದರು.
ಇಂಡಿಯನ್ ಪ್ರೀಮಿಯಮ್ ಲೀಗ್ನಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಹಾಗೂ ಸ್ಪಾಟ್ ಫಿಕ್ಸಿಂಗ್ ಪ್ರಕರಣದ ಕುರಿತು ತನಿಖೆ ನಡೆಸಲು ಸುಪ್ರೀಂ ಕೋರ್ಟ್ 2015, ಜನವರಿಯಲ್ಲಿ ಲೋಧಾ ಸಮಿತಿ ನೇಮಕ ಮಾಡಿತ್ತು. ಈ ಸಮಿತಿ ನೀಡಿದ ವರದಿಯನ್ನು ಜಾರಿ ಮಾಡಿದರೆ ಬಿಸಿಸಿಐಗೆ ಕೋಟ್ಯಂತರ ರುಪಾಯಿ ಹಾನಿಯಾಗುತ್ತದೆ ಎಂದು ಬಿಸಿಸಿಐ ಲೋಧಾ ವರದಿಯ ಕುರಿತು ಮೇಲ್ಮನವಿ ಸಲ್ಲಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


