ಕ್ರಿಕೆಟ್

ವಿಶ್ವ ಟಿ20 ಇಲೆವನ್ ತಂಡಕ್ಕೆ ಕೊಹ್ಲಿ ನಾಯಕತ್ವ

ಭಾರತದ ಬ್ಯಾಟಿಂಗ್ ಸ್ಟಾರ್ ವಿರಾಟ್ ಕೊಹ್ಲಿಗೆ ಐಸಿಸಿ ವಿಶ್ವಟಿ20 ಇಲೆವನ್ ತಂಡದ ನಾಯಕ ಸ್ಥಾನ ನೀಡಲಾಗಿದೆ. ವಿಶ್ವ ಟಿ20 ಪಂದ್ಯದಲ್ಲಿ ಆಟಗಾರರು ನೀಡಿದ...

ವಿಶ್ವ ಟಿ20 ಇಲೆವನ್ ತಂಡಕ್ಕೆ ಕೊಹ್ಲಿ ನಾಯಕತ್ವ
ವಿರಾಟ್ ಕೊಹ್ಲಿ
Published On :
ಕೊಲ್ಕತ್ತಾ: ಭಾರತದ ಬ್ಯಾಟಿಂಗ್ ಸ್ಟಾರ್ ವಿರಾಟ್ ಕೊಹ್ಲಿಗೆ ಐಸಿಸಿ ವಿಶ್ವಟಿ20 ಇಲೆವನ್ ತಂಡದ ನಾಯಕ ಸ್ಥಾನ ನೀಡಲಾಗಿದೆ. ವಿಶ್ವ ಟಿ20 ಪಂದ್ಯದಲ್ಲಿ ಆಟಗಾರರು ನೀಡಿದ ಪ್ರದರ್ಶನವನ್ನು ಮಾನದಂಡವಾಗಿರಿಸಿ ಮಾಜಿ ಕ್ರಿಕೆಟರ್‌ಗಳು ಮತ್ತು ಕಾಮೆಂಟೇಟರ್‌ಗಳು ವಿಶ್ವಟಿ20 ಇಲೆವನ್ ತಂಡಕ್ಕೆ ಆಟಗಾರರನ್ನು ಆಯ್ಕೆ ಮಾಡಿದ್ದಾರೆ.
ಭಾನುವಾರ ಮುಕ್ತಾಯಗೊಂಡ ಟಿ20 ವಿಶ್ವಕಪ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಕೊಹ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.
ಪ್ರಸ್ತುತ ವಿಶ್ವಕಪ್ ಪಂದ್ಯಗಳಲ್ಲಿ ಸರಾಸರಿ 136.50 ಹೊಂದಿರುವ ಕೊಹ್ಲಿ 273 ರನ್ ಗಳನ್ನು ದಾಖಲಿಸಿದ್ದರು. ರನ್ ಗಳಿಕೆಯಲ್ಲಿ ಬಾಂಗ್ಲಾದೇಶದ ತಮೀಮ್ ಇಕ್ಬಾಲ್ 295 ರನ್ ಗಳಿಸಿ ಮೊದಲ ಸ್ಥಾನದಲ್ಲಿದ್ದಾರೆ.
ಈ ಪಂದ್ಯಗಳಲ್ಲಿ ಕಡಿಮೆ ರನ್ ಕೊಟ್ಟು 5 ವಿಕೆಟ್ ಗಳನ್ನು ಗಳಿಸಿರುವ ಆಶಿಶ್ ನೆಹ್ರಾ ಕೂಡಾ ಟಿ20 ಇಲೆವನ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಪುರುಷರ ಮತ್ತು ಮಹಿಳೆಯರ ಟಿ 20 ಇಲೆವನ್ ತಂಡವನ್ನು ಸೋಮವಾರ ಪ್ರಕಟಿಸಿದ್ದು, ಮಹಿಳಾ ತಂಡದಲ್ಲಿ ಭಾರತೀಯ ಕ್ರೀಡಾಪಟುಗಳು ಸ್ಥಾನ ಪಡೆದಿಲ್ಲ.
ವಿಶ್ವ ಟಿ20 ಇಲೆವನ್ (ಪುರುಷರ ತಂಡ) : ಜಾನ್ಸನ್ ರಾಯ್ (ಇಂಗ್ಲೆಂಡ್),  ಕ್ವಿಂಟೊನ್ ಡಿ ಕಾಕ್ ( ದಕ್ಷಿಣ ಆಫ್ರಿಕಾ , ವಿಕೆಟ್ ಕೀಪರ್ ), ವಿರಾಟ್ ಕೊಹ್ಲಿ ( ಭಾರತ, ನಾಯಕ),  ಜಾಯ್ ರೂಟ್ (ಇಂಗ್ಲೆಡ್), ಜೋಸ್ ಬಟ್ಲರ್ (ಇಂಗ್ಲೆಂಡ್), ಶೇನ್ ವಾಟ್ಸನ್ (ಆಸ್ಟ್ರೇಲಿಯಾ),  ಆಂಡ್ರಿ ರೂಸ್ಸೆಲ್  (ವೆಸ್ಟ್ ಇಂಡೀಸ್), ಮಿಶೆಲ್ ಸಾಂಟ್ನರ್ (ನ್ಯೂಜಿಲ್ಯಾಂಡ್), ಡೇವಿಡ್ ವಿಲ್ಲಿ (ಇಂಗ್ಲೆಂಡ್),  ಸಾಮ್ಯುಲೆ ಬದ್ರೀ (ವೆಸ್ಟ್ ಇಂಡೀಸ್ ), ಆಶಿಶ್ ನೆಹ್ರಾ (ಭಾರತ),  ಮುಸ್ತಾಫಿಜೂರ್ ರೆಹ್ಮಾನ್  (ಬಾಂಗ್ಲಾದೇಶ).

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.