ಕ್ರಿಕೆಟ್

ಸೆಮಿಫೈನಲ್ ನಲ್ಲಿ ಸೋಲು: ಅಭಿಮಾನಿಗಳಿಗೆ ವಿರಾಟ್ ಭಾವನಾತ್ಮಕ ಸಂದೇಶ

ಐಸಿಸಿ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸೋತ ನಂತರ ಸುಮ್ಮನಿದ್ದ ಟೀಂ ಇಂಡಿಯಾ ಸ್ಫೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಇದೀಗ ಮೌನ...

ಸೆಮಿಫೈನಲ್ ನಲ್ಲಿ ಸೋಲು: ಅಭಿಮಾನಿಗಳಿಗೆ ವಿರಾಟ್ ಭಾವನಾತ್ಮಕ ಸಂದೇಶ
ವಿರಾಟ್ ಕೊಹ್ಲಿ
Published On :

ಮುಂಬೈ: ಐಸಿಸಿ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸೋತ ನಂತರ ಸುಮ್ಮನಿದ್ದ ಟೀಂ ಇಂಡಿಯಾ ಸ್ಫೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಇದೀಗ ಮೌನ ಮುರಿದಿದ್ದಾರೆ.

ಸರಣಿಗಳಲ್ಲಿ ಎಷ್ಟೋ ಪಂದ್ಯಗಳನ್ನು ಸೋತಿದ್ದೀವಿ, ಗೆದ್ದಿದ್ದೀವಿ ಆದರೆ ಆಡಿದ ಪ್ರತಿ ಪಂದ್ಯದಲ್ಲೂ ವಿಭಿನ್ನ ಅನುಭವವನ್ನು ಪಡೆದಿದ್ದೇವೆ. ಮಾಡಿದ ತಪ್ಪುಗಳಿಂದಲೂ ಪಾಠ ಕಲಿತಿದ್ದೇವೆ ಎಂದು ಟೀಂ ಇಂಡಿಯಾ ಅಭಿಮಾನಿಗಳಿಗೆ ಟ್ವೀಟ್ ಮಾಡಿದ್ದಾರೆ.

ಸಹೋದದರೇ... ನಿಮ್ಮ ಬೆಂಬಲದಿಂದ ಈ ಟಿ20 ವಿಶ್ವಕಪ್ ಪಂದ್ಯಾವಳಿ ನನಗೆ ಅವಿಸ್ಮರಣೀಯವಾಗುವಂತೆ ಮಾಡಿದೆ. ನಿಮಗೆಲ್ಲರಿಗೂ ಧನ್ಯವಾದಗಳು. ಮುಂದಿನ ಬಾರಿ ಭರ್ಜರಿ ವಾಪಸಾತಿ ಮಾಡುತ್ತೇವೆ ಎಂದು ಬರೆದುಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.