'ಪ್ರಶಸ್ತಿಯನ್ನು ಕನ್ನಡಿಗರಿಗೆ ಮತ್ತು ಕರ್ನಾಟಕಕ್ಕೆ ಅರ್ಪಿಸುತ್ತೇನೆ': ಹಿರಿಯ ನಟ ಅನಂತ್ ನಾಗ್
ನನಗೆ ಈ ಸಂದರ್ಭದಲ್ಲಿ ಬಹಳ ಸಂತೋಷವಾಗಿದೆ. ಮೊದಲನೆಯದಾಗಿ ಕರ್ನಾಟಕವನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸಲಾಗಿದೆ. ಕರ್ನಾಟಕದ ಚಿತ್ರರಂಗಕ್ಕೆ ನಾನು ನೀಡಿರುವ ಕೊಡುಗೆಯನ್ನೂ ಗುರುತಿಸಲಾಗಿದೆ. ನನಗೆ ಕೃತಜ್ಞತೆಯ ಭಾವವಿದೆ. ಪ್ರಧಾನಮಂತ್ರಿ ಮೋದಿಯವರೇ ಪ್ರಶಸ್ತಿ ಘೋಷಿಸಿದ್ದು ಇನ್ನಷ್ಟು ಖುಷಿಯ ವಿಚಾರ ಎಂದರು.

2024ನೇ ಸಾಲಿನ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆಯಾಗಿರುವುದಕ್ಕೆ ಹಿರಿಯ ಕನ್ನಡ ನಟ ಅನಂತ್ ನಾಗ್ ಸಂತಸ ಹಾಗೂ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡುವ ವೇಳೆ ಅವರು, ಈ ಗೌರವ ಕೇವಲ ವೈಯಕ್ತಿಕ ಮನ್ನಣೆಯಲ್ಲ, ರಾಷ್ಟ್ರಮಟ್ಟದಲ್ಲಿ ಕರ್ನಾಟಕಕ್ಕೂ ಸಂದ ಗೌರವವಾಗಿದೆ ಎಂದು ಹೇಳಿದ್ದಾರೆ.
ನನಗೆ ಈ ಸಂದರ್ಭದಲ್ಲಿ ಬಹಳ ಸಂತೋಷವಾಗಿದೆ. ಮೊದಲನೆಯದಾಗಿ ಕರ್ನಾಟಕವನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸಲಾಗಿದೆ. ಕರ್ನಾಟಕದ ಚಿತ್ರರಂಗಕ್ಕೆ ನಾನು ನೀಡಿರುವ ಕೊಡುಗೆಯನ್ನೂ ಗುರುತಿಸಲಾಗಿದೆ. ನನಗೆ ಕೃತಜ್ಞತೆಯ ಭಾವವಿದೆ. ಪ್ರಧಾನಮಂತ್ರಿ ಮೋದಿಯವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಪ್ರಶಸ್ತಿ ಘೋಷಣೆಗೆ ಪ್ರತಿಕ್ರಿಯಿಸಿದ ಅನಂತ್ ನಾಗ್ ಹೇಳಿದ್ದಾರೆ.
ಹಠಾತ್ತನೆ ಹರಿದುಬಂದ ಅಭಿನಂದನಾ ಕರೆಗಳು ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಟ್ವೀಟ್‌ನಿಂದ ಅಚ್ಚರಿಗೊಳಗಾದ ಹಿರಿಯ ನಟ, ಈ ಸುದ್ದಿ ತಮ್ಮನ್ನು ಸಂಪೂರ್ಣವಾಗಿ ಅನಿರೀಕ್ಷಿತವಾಗಿ ತಲುಪಿತು ಎಂದು ಖುಷಿಯಿಂದ ಭಾವೋದ್ವೇಕಕ್ಕೊಳಗಾಗಿ ಹೇಳಿಕೊಂಡರು.
ಮುಂಬೈನ ರಂಗಭೂಮಿಯಲ್ಲಿ ತಮ್ಮ ಕಲಾ ಪಯಣ ಆರಂಭಿಸಿದ ದಿನಗಳನ್ನು ಸ್ಮರಿಸಿದ ಅನಂತ್ ನಾಗ್, ಕನ್ನಡ ಕಲಾ ಕೇಂದ್ರದೊಂದಿಗಿನ ತಮ್ಮ ಆರಂಭಿಕ ದಿನಗಳ ಕುರಿತು ಮಾಧ್ಯಮದ ಕೆಲ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ನಾನು ರಂಗಭೂಮಿಯಿಂದ ಬಂದವನು. ಅಲ್ಲಿ ನಾನು ಕೇವಲ ನಟನಾಗಿದ್ದೆ. ಐದು ವರ್ಷಗಳಲ್ಲಿ ಸುಮಾರು 50 ನಾಟಕಗಳನ್ನು ಪ್ರದರ್ಶಿಸಿದ್ದನ್ನು ಅವರು ಸ್ಮರಿಸಿಕೊಂಡರು. ನಾನು ನಾಟಕ ಬರೆದೆ, ನಿರ್ದೇಶಿಸಿದೆ, ನಟಿಸಿದೆ. ಸ್ನೇಹಿತರೊಂದಿಗೆ ಬೀದಿಗಳಲ್ಲಿ ನಿಂತು ಟಿಕೆಟ್‌ಗಳನ್ನೂ ಮಾರಿದ್ದೇನೆ. ಆ ವ್ಯವಸ್ಥೆಯಿಂದ ಸಿನಿಮಾಕ್ಕೆ ಬಂದಿದ್ದು, ಆಗ ನನಗೆ ನದಿಯಲ್ಲಿ ಸಣ್ಣ ದೋಣಿಯಲ್ಲಿ ಸಾಗುತ್ತಿದ್ದವನು ನೇರವಾಗಿ ವಿಶಾಲ ಸಮುದ್ರಕ್ಕೆ ಪ್ರವೇಶಿಸಿದಂತಾಗಿತ್ತು ಎಂದರು.
ಕನ್ನಡ ಚಿತ್ರರಂಗದ ಮೊದಲ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ, ದಿಗ್ಗಜ ನಟ ಡಾ. ರಾಜ್‌ಕುಮಾರ್ ಅವರೊಂದಿಗೆ ಹೋಲಿಕೆ ಮಾಡಿದ ಅನಂತ್ ನಾಗ್ ವಿನಯಪೂರ್ವಕವಾಗಿ ತಮ್ಮ ಅನುಭವ ಹಂಚಿಕೊಂಡರು.
ನನಗೆ ರಾಜ್‌ಕುಮಾರ್ ಸರ್ ಆ ವಿಶಾಲ ಸಮುದ್ರದಲ್ಲಿ ಸಾಗುತ್ತಿದ್ದ ಬೃಹತ್ ಹಡಗಿನಂತಿದ್ದರು. ನಾನು ನನ್ನ ದಾರಿಯನ್ನು ಹುಡುಕುತ್ತಿದ್ದ ಸಣ್ಣ ಮರದ ದೋಣಿಯಷ್ಟೇ. ಇಂದು ಅವರ ಬಳಿಕ ಈ ಗೌರವ ನನಗೆ ಬಂದಿದೆ. ಅವರಿಗೆ ಶಿರಬಾಗಿ ನಮಿಸುತ್ತೇನೆ ಹಾಗೂ ಅತ್ಯಂತ ಗೌರವದಿಂದ ಈ ಪ್ರಶಸ್ತಿಯನ್ನು ಸ್ವೀಕರಿಸುತ್ತೇನೆ ಎಂದು ಹೇಳಿದರು. ತಮ್ಮ ಕಲಾ ಪಯಣದಲ್ಲಿ ನೆರವಾದ ಎಲ್ಲರಿಗೂ ಅವರು ಕೃತಜ್ಞತೆ ಸಲ್ಲಿಸಿದರು.
ನನ್ನ ಎಲ್ಲಾ ರಂಗಭೂಮಿ ಗುರುಗಳಿಗೆ, ಈ ಹಲವು ದಶಕಗಳಲ್ಲಿ ನನ್ನೊಂದಿಗೆ ಕೆಲಸ ಮಾಡಿದ ಪ್ರತಿಯೊಬ್ಬ ನಿರ್ದೇಶಕ, ನಿರ್ಮಾಪಕ ಹಾಗೂ ಸಹನಟರಿಗೆ ಧನ್ಯವಾದ ಸಲ್ಲಿಸುತ್ತೇನೆ. ಅವರ ಸಹಕಾರ ಮತ್ತು ಅವರು ಹೇಳಿದ ಕಥೆಗಳ ಕಾರಣದಿಂದಲೇ ನಾನು ಇಂದು ಈ ಸ್ಥಾನದಲ್ಲಿದ್ದೇನೆ ಎಂದರು.
ಕಲಾವಿದನಿಗೆ ನಿಜವಾದ ಮನ್ನಣೆ ಯಾವಾಗಲೂ ಪ್ರೇಕ್ಷಕರಿಂದಲೇ ದೊರೆಯುತ್ತದೆ, ಪ್ರೇಕ್ಷಕರು ತೃಪ್ತರಾಗಿದ್ದಾರೆಯೇ ಎಂಬುದರ ಮೇಲೆಯೇ ನನ್ನ ಸಂಪೂರ್ಣ ತೃಪ್ತಿ ಅವಲಂಬಿತವಾಗಿದೆ ಎಂದು ಹೇಳಿದರು. ಸಾರ್ವಜನಿಕ ಮನ್ನಣೆ ದೊರೆತ ಬಳಿಕ ಜೀವನದಲ್ಲಿ ಸ್ವಯಂ ಶಿಸ್ತು ಹಾಗೂ ಕೆಲವು ಮಿತಿಗಳನ್ನು ಪಾಲಿಸಬೇಕಾಗುತ್ತದೆ ಎಂದೂ ಹೇಳಿದರು.
ಒಮ್ಮೆ ನೀವು ಪರಿಚಿತ ಮುಖವಾದ ಬಳಿಕ, ನಿಮ್ಮ ಮೇಲೆಯೇ ಕೆಲವು ಮಿತಿಗಳನ್ನು ವಿಧಿಸಿಕೊಳ್ಳುತ್ತೀರಿ. ನೀವು ಎಂದಿಗೂ ಸಂಪೂರ್ಣವಾಗಿ ನಿರ್ಬಂಧರಹಿತರಾಗಿರಲು ಸಾಧ್ಯವಿಲ್ಲ ಎಂದರು.
ತಮ್ಮ ಹಿಂದಿನ ಗೌರವಗಳ ಸಂದರ್ಭದಲ್ಲಿ ಅಭಿಮಾನಿಗಳು ಹಾಗೂ ಮಾಧ್ಯಮಗಳು ತೋರಿದ ಅಪಾರ ಬೆಂಬಲವನ್ನು ಸ್ಮರಿಸಿದ ಅನಂತ್ ನಾಗ್, ಹೃದಯಪೂರ್ವಕ ಕೃತಜ್ಞತೆ ಸಲ್ಲಿಸಿದರು.
ಇದುವರೆಗೆ ಕರ್ನಾಟಕದ ಜನರು ನನ್ನ ಪರವಾಗಿ ಅಭಿಯಾನ ನಡೆಸಿ, ಸಂಭ್ರಮಿಸಿದಂತೆಯೇ, ಈ ಗೌರವವೂ ಅವರಿಗೇ ಸೇರಿದೆ. ಈ ಪ್ರಶಸ್ತಿಯನ್ನು ಕನ್ನಡಿಗರಿಗೆ ಮತ್ತು ಕರ್ನಾಟಕಕ್ಕೆ ಅರ್ಪಿಸುತ್ತೇನೆ ಎಂದು ಅನಂತ್ ನಾಗ್ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



