ಸಾಲು ಸಾಲು ಸೋಲು: ಬಾಲಿವುಡ್ ಬ್ಯಾಡ್ ಬಾಯ್ ಟೀಕಿಸಿದ್ದ ಎ.ಆರ್ ಮುರುಗದಾಸ್ ಗೆ ಎದುರಾಯ್ತು ಸಂಕಷ್ಟ!
ಖ್ಯಾತ ನಿರ್ದೇಶಕ ಎ.ಆರ್. ಮುರುಗದಾಸ್ ನಿರ್ದೇಶನದಲ್ಲಿ ಕಳೆದ ವರ್ಷ ಎರಡು ಚಿತ್ರಗಳು ಬಿಡುಗಡೆಯಾಗಿದ್ದವು. ಅದರಲ್ಲಿ ಒಂದು ಸಲ್ಮಾನ್ ಖಾನ್ ಅಭಿನಯದ ಸಿಕಂದರ್ ದೊಡ್ಡ ಫ್ಲಾಪ್ ಆಗಿತ್ತು.

ಖ್ಯಾತ ನಿರ್ದೇಶಕ ಎ.ಆರ್. ಮುರುಗದಾಸ್ ನಿರ್ದೇಶನದಲ್ಲಿ ಕಳೆದ ವರ್ಷ ಎರಡು ಚಿತ್ರಗಳು ಬಿಡುಗಡೆಯಾಗಿದ್ದವು. ಅದರಲ್ಲಿ ಒಂದು ಸಲ್ಮಾನ್ ಖಾನ್ ಅಭಿನಯದ ಸಿಕಂದರ್ ದೊಡ್ಡ ಫ್ಲಾಪ್ ಆಗಿತ್ತು. ಸಲ್ಮಾನ್ ಖಾನ್ ಸಮಯಕ್ಕೆ ಸರಿಯಾಗಿ ಶೂಟಿಂಗ್ಗೆ ಬರುವುದಿಲ್ಲ. ನನಗೆ ಭಾಷಾ ಸಮಸ್ಯೆ ಇತ್ತು. ಅದಕ್ಕಾಗಿಯೇ ಚಿತ್ರ ವಿಫಲವಾಯಿತು ಎಂದು ಮುರುಗದಾಸ್ ಹೇಳಿದ್ದರು.
ಆ ನಂತರ ಮುರುಗದಾಸ್ ನಿರ್ದೇಶನದ ತಮಿಳು ಚಿತ್ರ ಮದ್ರಾಸಿ ಕೂಡ ಮಕಾಡೆ ಮಲಗಿತು. 'ಶಿವಕಾರ್ತಿಕೇಯನ್ ಬೇಗ ಶೂಟಿಂಗ್ಗೆ ಬರುತ್ತಿದ್ದರು. ಆ ಚಿತ್ರ ಏಕೆ ವಿಫಲವಾಯಿತು' ಎಂದು ಸಲ್ಮಾನ್ ಖಾನ್ ಮುರುಗದಾಸ್ ಮೇಲೆ ವಾಗ್ದಾಳಿ ನಡೆಸಿದ್ದರು. ಈ ಪರಿಸ್ಥಿತಿಯಲ್ಲಿ, ಮದ್ರಾಸಿಯ ನಿರ್ಮಾಪಕರು ಈಗ ನಿರ್ದೇಶಕರ ಸಂಘ ಮತ್ತು ನಿರ್ಮಾಪಕರ ಸಂಘಕ್ಕೆ ದೂರು ನೀಡಿದ್ದಾರೆ.
ಆರಂಭದಲ್ಲಿ ಮುರುಗದಾಸ್ ಚಿತ್ರವನ್ನು ಪೂರ್ಣಗೊಳಿಸಲು 115 ಕೋಟಿ ರೂ. ಬಜೆಟ್ ನಿಗದಿಪಡಿಸಿದ್ದರು. ಆದರೆ ಚಿತ್ರ ಪೂರ್ಣಗೊಂಡಾಗ ಅದು 170 ಕೋಟಿ ರೂ.ಗಳಿಗೆ ಏರಿತು. ಇದಕ್ಕೆ ಕಾರಣ ಮುರುಗದಾಸ್ ಒಟ್ಟಿಗೆ ಸಿಕಂದರ್ ಮತ್ತು ಮದ್ರಾಸಿ ಚಿತ್ರಗಳನ್ನು ನಿರ್ದೇಶಿಸಿದ್ದು, ಸರಿಯಾಗಿ ಯೋಜನೆ ರೂಪಿಸದಿರುವುದು ಎಂದು ಆರೋಪಿ ನಿರ್ಮಾಪಕರು 10 ಕೋಟಿ ರೂ. ಪರಿಹಾರವನ್ನು ನೀಡಬೇಕು ಎಂದು ನಿರ್ದೇಶಕರನ್ನು ಕೇಳಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಮಾತುಕತೆಯಲ್ಲಿ ಅಂತಿಮವಾಗಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ರಮಣ 2 ರ ಕಥೆಯನ್ನು ಬರೆದು ನಿರ್ಮಾಪಕರಿಗೆ ಉಚಿತವಾಗಿ ನೀಡುವ ಒಪ್ಪಂದಕ್ಕೆ ಬರಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



