ವಿಚ್ಛೇದನಕ್ಕೆ ಪತ್ನಿ ಸಂಗೀತಾ ಅರ್ಜಿ: ನಟ ವಿಜಯ್ ಮೊದಲ ಪೋಸ್ಟ್ ನಲ್ಲಿ ಏನಿದೆ?
ವಿಜಯ್ ಜೊತೆಗಿನ ದಾಂಪತ್ಯ ಜೀವನ ಮುರಿದುಕೊಳ್ಳಲು ಸಂಗೀತಾ ಸೋರ್ನಲಿಂಗಂ ಇತ್ತೀಚಿಗೆ ಚೆಂಗಲ್ಪಟ್ಟು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.

ಚೆನ್ನೈ: ನಟ ಹಾಗೂ ಟಿವಿಕೆ ಪಕ್ಷದ ಸಂಸ್ಥಾಪಕ ವಿಜಯ್ ಜೊತೆಗಿನ ದಾಂಪತ್ಯ ಜೀವನ ಮುರಿದುಕೊಳ್ಳಲು ಪತ್ನಿ ಸಂಗೀತಾ ಸೋರ್ನಲಿಂಗಂ ಇತ್ತೀಚಿಗೆ ನ್ಯಾಯಾಲಯದಲ್ಲಿ ವಿಚ್ಛೇದನ ಅರ್ಜಿ ಸಲ್ಲಿಸಿದ್ದರು. ಇದಾದ ಕೆಲವು ದಿನಗಳ ಬಳಿಕ ದಳಪತಿ ವಿಜಯ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಮೊದಲ ಪೋಸ್ಟ್ ಮಾಡಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ 12 ನೇ ತರಗತಿಯ ಪಬ್ಲಿಕ್ ಪರೀಕ್ಷೆಗಳಿಗೆ ಹಾಜರಾಗುತ್ತಿರುವ ತಮಿಳುನಾಡು ಮತ್ತು ಪುದುಚೇರಿಯ ವಿದ್ಯಾರ್ಥಿಗಳಿಗೆ ಶುಭ ಹಾರೈಸಿರುವ ವಿಜಯ್, ನಾಳೆ ಸುಭಿಕ್ಷ ಸಮಾಜ ನಿರ್ಮಾಣ ಮಾಡಲಿರುವ ನೀವೆಲ್ಲರೂ ಈ ಪರೀಕ್ಷೆಯನ್ನು ಆತಂಕ, ಭಯಬಿಟ್ಟು ಧೈರ್ಯದಿಂದ ಎದುರಿಸಿ, ಉನ್ನತ ಶಿಕ್ಷಣದಲ್ಲೂ ಉನ್ನತ ಸಾಧನೆ ಮಾಡಬೇಕು ಮುಂಚಿತವಾಗಿ ಶುಭ ಹಾರೈಸುತ್ತೇನೆ. ಒಳ್ಳೆಯದೇ ಆಗುವುದು! ಗೆಲುವು ನಿಶ್ಚಿತ! ಎಂದಿದ್ದಾರೆ.
ವಿಜಯ್ ಜೊತೆಗಿನ ದಾಂಪತ್ಯ ಜೀವನ ಮುರಿದುಕೊಳ್ಳಲು ಸಂಗೀತಾ ಸೋರ್ನಲಿಂಗಂ ಇತ್ತೀಚಿಗೆ ಚೆಂಗಲ್ಪಟ್ಟು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
ನಟಿಯೊಬ್ಬರೊಂದಿಗೆ ವಿಜಯ್ ವಿವಾಹೇತರ ಸಂಬಂಧ ಹೊಂದಿರುವುದು ಏಪ್ರಿಲ್ 2021 ರಲ್ಲಿ ತನಗೆ ಗೊತ್ತಾಗಿತ್ತು. ಇದು ತೀವ್ರ ಮಾನಸಿಕ ಸಂಕಟವನ್ನುಂಟು ಮಾಡಿದ್ದು, ವಿಜಯ್ ಅವರ ಆದಾಯ ಮತ್ತು ಸಾಮಾಜಿಕ ಸ್ಥಾನಮಾನಕ್ಕೆ ಅನುಗುಣವಾಗಿ ಶಾಶ್ವತ ಜೀವನಾಂಶ ನೀಡಲು ಆದೇಶಿಸಬೇಕು ಎಂದು ವಿಚ್ಚೇದನ ಅರ್ಜಿಯಲ್ಲಿ ಸಂಗೀತ ಮನವಿ ಮಾಡಿರುವುದಾಗಿ ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



