ಯೋಗಿಯ 51 ನೇ ಚಿತ್ರ 'ಫಾರೆವರ್'ಗೆ ಚಾಲನೆ: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಾಥ್!
ವಿಜಯನಗರ ಶಾಸಕ ಕೃಷ್ಣಪ್ಪ ಕ್ಯಾಮೆರಾ ಸ್ವಿಚ್ ಆನ್ ಮಾಡಿದರೆ, ನಾಗರಹಾವು ನಿರ್ಮಾಪಕ ಸಾಜಿದ್ ಖುರೇಷಿ ಚಿತ್ರದ ಫಸ್ಟ್-ಲುಕ್ ಪೋಸ್ಟರ್ ಅನ್ನು ಅನಾವರಣಗೊಳಿಸಿದರು.

ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ವೈವಿಧ್ಯಮ ಪಾತ್ರಗಳನ್ನು ನಿರ್ವಹಿಸಿರುವ ಲೂಸ್ ಮಾದ ಯೋಗಿ, ಈಗ ತಮ್ಮ 51 ನೇ ಚಿತ್ರ 'ಫಾರೆವರ್' ಗೆ ಸಜ್ಜಾಗಿದ್ದು, ಇದು ಈ ಹಿಂದೆ ಮಾಡಿದ ಪಾತ್ರಗಳಿಗಿಂತ ಭಿನ್ನವಾಗಿದೆ ಎಂದು ಹೇಳಿದ್ದಾರೆ.
ಸುಪ್ರೀಂ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಚಂದ್ರಿಕಾ ಖ್ಯಾತಿಯ ಯೋಗೇಶ್ ಎಂ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಎಂ ವೆಂಕಟನಾರಾಯಣ್ (ಟ್ಯಾಗೋರ್ ಕೃಷ್ಣ) ನಿರ್ಮಾಣ ಮಾಡುತ್ತಿದ್ದಾರೆ. ಇತ್ತೀಚೆಗೆ ಯೋಗಿಯ ದೀರ್ಘಕಾಲದ ಸ್ನೇಹಿತ ಮತ್ತು ಸಹಪಾಠಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಆರಂಭಿಕ ಶಾಟ್ಗೆ ಮೊದಲ ಕ್ಲಾಪ್ ಮಾಡುವ ಮೂಲಕ ಫಾರೆವರ್' ಪ್ರಾರಂಭವಾಯಿತು.
ವಿಜಯನಗರ ಶಾಸಕ ಕೃಷ್ಣಪ್ಪ ಕ್ಯಾಮೆರಾ ಸ್ವಿಚ್ ಆನ್ ಮಾಡಿದರೆ, ನಾಗರಹಾವು ನಿರ್ಮಾಪಕ ಸಾಜಿದ್ ಖುರೇಷಿ ಚಿತ್ರದ ಫಸ್ಟ್-ಲುಕ್ ಪೋಸ್ಟರ್ ಅನ್ನು ಅನಾವರಣಗೊಳಿಸಿದರು. ಶೀರ್ಷಿಕೆಯನ್ನು ಸಹ ವಿಶಿಷ್ಟ ರೀತಿಯಲ್ಲಿ, ಸ್ಥಳದಲ್ಲಿದ್ದ ಟ್ಯಾಂಕರ್ನಲ್ಲಿ ಪ್ರದರ್ಶಿಸಲಾಯಿತು.
"ಒಂದು ಕಾಲಾತೀತ ಪ್ರೇಮಕಥೆ" ಎಂಬ ಟ್ಯಾಗ್ಲೈನ್ ಹೊಂದಿರುವ ಈ ಚಿತ್ರ ಪ್ರಣಯದ ಮೇಲೆ ಕೇಂದ್ರೀಕೃತವಾಗಿದೆ ಆದರೆ ಆಕ್ಷನ್, ಭಾವನೆ ಮತ್ತು ಕಮರ್ಷಿಯಲ್ ಅಂಶಗಳನ್ನು ಸಹ ಒಳಗೊಂಡಿದೆ. ಚಿತ್ರ ಬಿಡುಗಡೆ ಸಮೀಪ ಕಥೆಯಲ್ಲಿ ಮತ್ತೊಂದು ಅಂಶವಿದೆ ಎಂದು ನಿರ್ಮಾಪಕರು ಹೇಳಿದರು.
ಸುಮಾರು ಎರಡು ವರ್ಷಗಳ ಗ್ಯಾಪ್ ನಂತರ ಯೋಗಿ ನಾಯಕ ನಟನಾಗಿ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸ್ಕ್ರಿಪ್ಟ್ ವಿಭಿನ್ನವಾಗಿದ್ದು, ನಿಜ ಜೀವನದಲ್ಲಿ ಮೋಟಾರ್ಸೈಕಲ್ಗಳ ಬಗ್ಗೆಯೂ ಒಲವು ಹೊಂದಿರುವ ನಟ, ಬೈಕಿಂಗ್ಗೆ ಕಥೆಯ ಸಂಪರ್ಕವು ಅವರನ್ನು ಪಾತ್ರಕ್ಕೆ ಇನ್ನಷ್ಟು ಹತ್ತಿರವಾಗುವಂತೆ ಮಾಡಿದೆ ಎಂದು ಅವರು ಹೇಳಿದರು.
ಚಿತ್ರಕಥೆ ಬರೆಯಲು ಅನೇಕ ವರ್ಷಗಳೇ ಹಿಡಿಯಿತು. ಸ್ಕ್ರಿಪ್ಟ್ ಬರೆಯುವುದಕ್ಕೆ ಹೆಚ್ಚಿನ ಸಮಯ ಕಳೆದಿದ್ದೇನೆ. ಅಂತಿಮವಾಗಿ ಚಿತ್ರೀಕರಣ ಪ್ರಾರಂಭವಾಗಿದೆ. ಬೆಂಗಳೂರಿನಲ್ಲಿ ಮೊದಲಿಗೆ ಚಿತ್ರೀಕರಿಸಲಾಗುವುದು. ಸುಪ್ರೀಂ ಕ್ರಿಯೇಷನ್ಸ್ನಿಂದ 'ಫಾರೆವರ್' ಮೊದಲ ನಿರ್ಮಾಣವಾಗಿದೆ ಎಂದು ನಿರ್ಮಾಪಕ ಎಂ ವೆಂಕಟನಾರಾಯಣ್ ಬಹಿರಂಗಪಡಿಸಿದ್ದಾರೆ. ಈ ಚಿತ್ರದ ಮೂಲಕ ಆಕಾಂಕ್ಷಾ ರಾವ್ ಕನ್ನಡ ಚಿತ್ರರಂಗಕ್ಕೆ ಪರಿಚಿತರಾಗುತ್ತಿದ್ದಾರೆ. ಪ್ರದ್ಯೋತ್ತನ್ ಸಂಗೀತ ಸಂಯೋಜಿಸುತ್ತಿದ್ದು, ಸಂಕೇತ್ ಅವರ ಛಾಯಾಗ್ರಾಹಣವಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



