Satluj Controversy: 'ಸತ್ಲುಜ್'ಅನ್ನು ಅಂತರ-ಇಲಾಖಾ ಸಮಿತಿಗೆ ಉಲ್ಲೇಖಿಸಲು ಕೇಂದ್ರ ನಿರ್ಧಾರ; ಏನಿದು ವಿವಾದ?
"ಸತ್ಲುಜ್" ಸಿನಿಮಾ ಬಿಡುಗಡೆಯಾದ ಎರಡೇ ದಿನದಲ್ಲಿ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ZEE5ಗೆ "ಭದ್ರತಾ" ಕಾರಣದಿಂದ ಚಿತ್ರವನ್ನು ತೆಗೆದುಹಾಕುವಂತೆ ನಿರ್ದೇಶಿಸಿದ ಎರಡು ದಿನಗಳ ನಂತರ ಕೇಂದ್ರ ಈ ಕ್ರಮಕ್ಕೆ ಮುಂದಾಗಿದೆ.

ನವದೆಹಲಿ: ದಿಲ್ಜಿತ್ ದೋಸಾಂಜ್ ಅಭಿನಯದ "ಸತ್ಲುಜ್" ಚಿತ್ರವನ್ನು ವಿವರವಾದ ಪರಿಶೀಲನೆ ಮತ್ತು ಭವಿಷ್ಯದ ಕ್ರಮಕ್ಕಾಗಿ ಐಟಿ ನಿಯಮಗಳು 2021 ರ ಅಡಿಯಲ್ಲಿ ರಚಿಸಲಾದ ಅಂತರ-ಇಲಾಖಾ ಸಮಿತಿಗೆ(IDC) ಉಲ್ಲೇಖಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಸರ್ಕಾರಿ ಮೂಲಗಳು ಮಂಗಳವಾರ ತಿಳಿಸಿವೆ.
"ಸತ್ಲುಜ್" ಸಿನಿಮಾ ಬಿಡುಗಡೆಯಾದ ಎರಡೇ ದಿನದಲ್ಲಿ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ZEE5ಗೆ "ಭದ್ರತಾ" ಕಾರಣದಿಂದ ಚಿತ್ರವನ್ನು ತೆಗೆದುಹಾಕುವಂತೆ ನಿರ್ದೇಶಿಸಿದ ಎರಡು ದಿನಗಳ ನಂತರ ಕೇಂದ್ರ ಈ ಕ್ರಮಕ್ಕೆ ಮುಂದಾಗಿದೆ.
OTT ಪ್ಲಾಟ್‌ಫಾರ್ಮ್‌ಗಳು ಮತ್ತು ಡಿಜಿಟಲ್ ಸುದ್ದಿ ಪ್ರಕಾಶಕರು ಪ್ರಕಟಿಸಿದ ವಿಷಯಕ್ಕೆ ಸಂಬಂಧಿಸಿದ ಕುಂದುಕೊರತೆಗಳನ್ನು ಪರಿಶೀಲಿಸಲು ಮತ್ತು ಮಾಹಿತಿ ಹಾಗೂ ಪ್ರಸಾರ ಸಚಿವಾಲಯಕ್ಕೆ ಶಿಫಾರಸುಗಳನ್ನು ಮಾಡಲು ಮಾಹಿತಿ ತಂತ್ರಜ್ಞಾನ(ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳು, 2021 ರ ಅಡಿಯಲ್ಲಿ ರಚಿಸಲಾದ IDC ಈ ವಿಷಯವನ್ನು ಪರಿಶೀಲಿಸುತ್ತದೆ ಎಂದು ಮೂಲಗಳು ತಿಳಿಸಿವೆ.
ಸಮಿತಿಯು ಮಾಹಿತಿ ಮತ್ತು ಪ್ರಸಾರ, ಗೃಹ ಸಚಿವಾಲಯ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿದೇಶಾಂಗ ವ್ಯವಹಾರಗಳ ಸಚಿವಾಲಯ, ರಕ್ಷಣೆ ಮತ್ತು ಕಾನೂನು ಸಚಿವಾಲಯಗಳ ಪ್ರತಿನಿಧಿಗಳನ್ನು ಒಳಗೊಂಡಿದೆ. ಜೊತೆಗೆ ಸರ್ಕಾರ ನಿರ್ಧರಿಸಬಹುದಾದ ಇತರ ಸಚಿವಾಲಯಗಳು ಮತ್ತು ಡೊಮೇನ್ ತಜ್ಞರನ್ನು ಒಳಗೊಂಡಿದೆ.
ಏನಿದು ವಿವಾದವೇನು?
ನಟ ಹಾಗೂ ಗಾಯಕ ದಿಲ್ಜಿತ್ ದೋಸಾಂಜ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ, ಹನಿ ಟ್ರೆಹನ್ ನಿರ್ದೇಶನದ ಬಹುನಿರೀಕ್ಷಿತ ‘ಸತ್ಲುಜ್’ ಚಿತ್ರವು ಬಿಡುಗಡೆಯಾದ ಕೇವಲ ಎರಡೇ ದಿನಗಳಲ್ಲಿ ಝೀ5 ಒಟಿಟಿಯಿಂದ ತೆಗೆದು ಹಾಕಲಾಗಿದೆ.
ಹನಿ ಟ್ರೆಹಾನ್ ನಿರ್ದೇಶನದ 'ಸತ್ಲುಜ್' ಚಿತ್ರಕ್ಕೆ ಆರಂಭದಲ್ಲಿ 'ಘಲ್ಲುಘಾರಾ' ಎಂದು ಹೆಸರಿಡಲಾಗಿತ್ತು, ನಂತರ ಅದನ್ನು 'ಪಂಜಾಬ್ 95' ಎಂದು ಬದಲಾಯಿಸಿ, ಅಂತಿಮವಾಗಿ 'ಸತ್ಲುಜ್' ಎಂದು ನಾಮಕರಣ ಮಾಡಲಾಗಿತ್ತು. ಸೆನ್ಸಾರ್ ಮಂಡಳಿಯು ಸುಮಾರು 120 ಕ್ಕೂ ಹೆಚ್ಚು ಕಟ್‌ಗಳನ್ನು ನೀಡಿತ್ತು. ಆನಂತರ ಜುಲೈ 3 ರಂದು ಝೀ5 ನಲ್ಲಿ ಪ್ರಥಮ ಪ್ರದರ್ಶನ ಕಂಡಿತ್ತು. ಆದರೆ ಕೇವಲ ಎರಡೇ ದಿನಗಳಲ್ಲಿ ಭಾರತದಲ್ಲಿ ಈ ಪ್ಲಾಟ್‌ಫಾರ್ಮ್‌ನಿಂದ ಸಿನಿಮಾವನ್ನು ದಿಢೀರ್ ಆಗಿ ತೆಗೆದುಹಾಕಲಾಗಿದೆ.
ಈ ಚಿತ್ರವು ಪಂಜಾಬ್‌ನ ಪ್ರಸಿದ್ಧ ಮಾನವ ಹಕ್ಕುಗಳ ಹೋರಾಟಗಾರ ಜಸ್ವಂತ್ ಸಿಂಗ್ ಖಲ್ರಾ ಅವರ ಜೀವನ ಮತ್ತು ನೈಜ ಹೋರಾಟವನ್ನು ಆಧರಿಸಿದೆ. 1980ರ ದಶಕದ ಪಂಜಾಬ್ ದಂಗೆಯ ಸಮಯದಲ್ಲಿ ಪೊಲೀಸರು ಸಾವಿರಾರು ಜನರನ್ನು ಕಾನೂನುಬಾಹಿರವಾಗಿ ಕಟುಂಬದವರಿಗೆ ತಿಳಿಸದೆ ರಹಸ್ಯವಾಗಿ ಶವಸಂಸ್ಕಾರ ಮಾಡಿದ್ದನ್ನು ಖಲ್ರಾ ಅವರು ಬಯಲಿಗೆಳೆದಿದ್ದರು. ನಂತರ 1995ರಲ್ಲಿ ಅವರನ್ನೂ ಸಹ ಅಪಹರಿಸಿ ಕೊಲೆ ಮಾಡಲಾಗಿತ್ತು. ಸರ್ಕಾರ ಮತ್ತು ಪೊಲೀಸ್ ವ್ಯವಸ್ಥೆಯ ಕರಾಳ ಮುಖವನ್ನು ಇದು ತೋರಿಸುವುದರಿಂದ ಚಿತ್ರವು ರಾಜಕೀಯ ಸೂಕ್ಷ್ಮತೆಯನ್ನು ಹೊಂದಿದೆ ಎಂದು ಹೇಳಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



