ಸಿನಿಮಾ ಸುದ್ದಿ

BBK 12: ದೊಡ್ಮನೆಯಿಂದ 'ಧ್ರುವಂತ್' ಮಿಡ್‌ ವೀಕ್‌ ಎಲಿಮಿನೇಟ್?

ಕಳೆದ ವಾರ ಸೀಸನ್ ಕೊನೆಯ ಕಿಚ್ಚನ ಚಪ್ಪಾಳೆ ಪಡೆದಿದ್ದ ಧ್ರುವಂತ್ ಮನೆಯಿಂದ ಮಿಡ್‌ ವೀಕ್‌ ಎಲಿಮಿನೇಟ್ ಆಗಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

BBK 12: ದೊಡ್ಮನೆಯಿಂದ 'ಧ್ರುವಂತ್' ಮಿಡ್‌ ವೀಕ್‌ ಎಲಿಮಿನೇಟ್?
BBK 12 ಫಿನಾಲೆ ಹೊಸ್ತಿನಲ್ಲಿರುವ ಸ್ಪರ್ಧಿಗಳು
Published On :

ಕನ್ನಡದ ಜನಪ್ರಿಯ ರಿಯಾಲಿಟಿ ಶೋ 'ಬಿಗ್‌ಬಾಸ್‌ 12' ಸದ್ಯ ಫಿನಾಲೆ ಹಂತಕ್ಕೆ ತಲುಪಿದ್ದು, ಈ ಬಾರಿ ಯಾರು ಟಾಪ್-5ರಲ್ಲಿ ಉಳಿತ್ತಾರೆ, ಕಪ್ ಯಾರು ಗೆಲ್ಲಲಿದ್ದಾರೆ ಎಂಬುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಶನಿವಾರ ಮತ್ತು ಭಾನುವಾರ ಗ್ರಾಂಡ್ ಫಿನಾಲೆ ನಡೆಯಲಿದೆ.

ಈ ನಡುವೆ ಕಳೆದ ವಾರ ಸೀಸನ್ ಕೊನೆಯ ಕಿಚ್ಚನ ಚಪ್ಪಾಳೆ ಪಡೆದಿದ್ದ ಧ್ರುವಂತ್ ಮನೆಯಿಂದ ಮಿಡ್‌ ವೀಕ್‌ ಎಲಿಮಿನೇಟ್ ಆಗಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಸದ್ಯ ಮನೆಯಲ್ಲಿ ಗಿಲಿ ನಟ, ರಘು, ರಕ್ಷಿತಾ, ಅಶ್ವಿನಿ ಗೌಡ, ಕಾವ್ಯಾ, ಧನುಶ್ ಹಾಗೂ ಧ್ರುವಂತ್ ಸೇರಿದಂತೆ ಏಳು ಮಂದಿ ಸ್ಪರ್ಧಿಗಳಿದ್ದಾರೆ. ಈ ಮಧ್ಯೆ ಫಿನಾಲೆ ಸ್ಪರ್ಧಿ ಎನ್ನಲಾಗುತ್ತಿದ್ದ ಧ್ರುವಂತ್ ಮನೆಯಿಂದ ಮಿಡ್ ನೈಟ್ ಎಲಿಮಿನೇಟ್ ಆಗಿದ್ದಾರೆ ಎನ್ನಲಾಗುತ್ತಿದೆ. ಆದರೆ ಎಲಿಮಿನೇಷನ್ ಬಗ್ಗೆ ಎಪಿಸೋಡ್ ಪ್ರಸಾರವಾದ ಮೇಲೆ ಅಧಿಕೃತವಾಗಿ ತಿಳಿದು ಬರಲಿದೆ.

ಮಿಡ್‌ ವೀಕ್‌ ಎಲಿಮಿನೇಷನ್‌ ಪ್ರಕ್ರಿಯೆಯಲ್ಲಿ ಆ್ಯಕ್ಟಿವಿಡಿ ರೂಮ್‌ನಿಂದ ಒಬ್ಬೊಬ್ಬರನ್ನೇ ಹೊರಗೆ ಕಳುಹಿಸಲಾಗುತ್ತದೆ. ಹೊರಕಳುಹಿಸಲ್ಪಡುವ ಸದಸ್ಯರ ಪೈಕಿ ಮನೆಯ ಒಳಗಡೆ ಮರಳಿ ಬರುವವರು ಸೀಸನ್‌ 12ರ ಫಿನಾಲೆ ತಲುಪುತ್ತಾರೆ. ಮನೆಗೆ ಮರಳಿ ಬಾರದ ಒಬ್ಬ ಸದಸ್ಯ/ಸದಸ್ಯೆ ವಿದಾಯ ಹೇಳಿ ಹೊರ ನಡೆಯುತ್ತಾರೆ.

ಮಿಡ್‌ ವೀಕ್‌ ಎಲಿಮಿನೇಷನ್‌ ಸಾಲಿನಲ್ಲಿ ಗಿಲ್ಲಿ, ರಘು, ರಕ್ಷಿತಾ, ಅಶ್ವಿನಿ, ಕಾವ್ಯ, ಧ್ರುವಂತ್‌ ಇದ್ದಾರೆ. ಆಗೊಂದು ವೇಳೆ ಧ್ರುವಂತ್ ಡೊಡ್ಮನೆಯಿಂದ ಹೊರಗೆ ಬಂದರೆ ಉಳಿದ ಗಿಲ್ಲಿನಟ, ಅಶ್ವಿನಿ, ರಘು, ರಕ್ಷಿತಾ, ಕಾವ್ಯಾ ಮತ್ತು ಧನುಶ್ ಬಿಗ್‌ ಬಾಸ್‌ ಗೆಲ್ಲುವ ರೇಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.