Mollywoodಗೆ "ಪುಟ್ಟಿ" ಗ್ರಾಂಡ್ ಎಂಟ್ರಿ; ನಿವೀನ್ ಪೌಲಿಗೆ ಕಾಂತಾರ ಬೆಡಗಿ ರುಕ್ಷ್ಮಿಣಿ ವಸಂತ್ ಜೋಡಿ
26 ರಂದು ಟಾಕ್ಸಿಕ್ ಚಿತ್ರದ ಮೂಲಕ ಬೆಳ್ಳಿಪರದೆಯ ಮೇಲೆ, ಮತೊಮ್ಮೆ ಮಿಂಚಲು ರುಕ್ಮಿಣಿ ವಸಂತ್ ರೆಡಿಯಾಗಿದ್ದಾರೆ. ಇದರ ನಡುವೆಯೇ ಖ್ಯಾತ ಸ್ಟಾರ್ ನಟ ನಿವಿನ್ ಪೌಲಿ ಅವರ 51ನೇ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗುವ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಅದ್ದೂರಿ ಎಂಟ್ರಿಗೆ ಸಿದ್ಧತೆ ನಡೆಸಿದ್ದಾರೆ.

ಇದೇ 26 ರಂದು ಟಾಕ್ಸಿಕ್ ಚಿತ್ರದ ಮೂಲಕ ಬೆಳ್ಳಿ ಪರದೆಯ ಮೇಲೆ, ಮತೊಮ್ಮೆ ಮಿಂಚಲು ಕಾಂತಾರ ಚಲುವೆ ರುಕ್ಮಿಣಿ ವಸಂತ್ ರೆಡಿಯಾಗಿದ್ದಾರೆ. ಇದರ ನಡುವೆಯೇ ಮಲಯಾಳಂನ ಖ್ಯಾತ ಸ್ಟಾರ್ ನಟ ನಿವಿನ್ ಪೌಲಿ ಅವರ 51ನೇ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗುವ ಮೂಲಕ ಕನ್ನಡ, ತೆಲುಗು ಹಾಗೂ ತಮಿಳಿನ ನಂತರ ಮಲಯಾಳಂ ಚಿತ್ರರಂಗಕ್ಕೆ ಅದ್ದೂರಿಯಾಗಿ ಎಂಟ್ರಿಗೆ ಸಿದ್ಧತೆ ನಡೆಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ನಿವಿನ್ ಪೌಲಿ ನಟನೆಯ 51ನೇ ಚಿತ್ರಕ್ಕೆ ರುಕ್ಮಿಣಿ
ಮಾಲಿವುಡ್ ಚಿತ್ರರಂಗದ ಸ್ಟಾರ್ ನಟ ನಿವಿನ್ ಪೌಲಿ ನಟನೆಯ 51ನೇ ಚಿತ್ರಕ್ಕೆ (ತಾತ್ಕಾಲಿಕ ಶೀರ್ಷಿಕೆ NP51) ರುಕ್ಷ್ಮಿಣಿ ವಸಂತ್ ನಾಯಕಿಯಾಗಿ ಆಯ್ಕೆಯಾಗಿದ್ದು, ಇತ್ತೀಚೆಗಷ್ಟೇ ಚಿತ್ರದ ಶೂಟಿಂಗ್ನಲ್ಲಿ ಭಾಗವಹಿಸಿರುವುದಾಗಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದು ಒಂದು ಸಖತ್ ರೊಮ್ಯಾಂಟಿಕ್ ಕಾಮಿಡಿ ಚಿತ್ರ ಎನ್ನಲಾಗಿದ್ದು, 'ಜಯ ಜಯ ಜಯ ಜಯ ಹೇ' ಸೂಪರ್ ಹಿಟ್ ಚಿತ್ರದ ಸಹ-ಬರಹಗಾರ ನಶೀದ್ ಮೊಹಮದ್ ಫ್ಯಾಮಿ ಅವರು ಈ ಚಿತ್ರದ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಂತಸ ವ್ಯಕ್ತಪಡಿಸಿರುವ ರುಕ್ಷ್ಮಿಣಿ, "ನಾವು ದೂರದಿಂದ ನೋಡಿ ಆರಾಧಿಸುವ ಜಾಗದಲ್ಲಿ ನಾವೇ ಇರುವುದು ವಿಶೇಷ ಅನುಭವ. ಮಲಯಾಳಂ ಚಿತ್ರರಂಗದ ಭಾಗವಾಗಿರುವುದಕ್ಕೆ ಹೆಮ್ಮೆಯಿದೆ" ಎಂದು ಬರೆದುಕೊಂಡಿದ್ದಾರೆ.
ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾದ ಪುಟ್ಟಿ
ಕನ್ನಡದಲ್ಲಿ ಸ್ಟಾರ್ ನಟಿಯಾಗಿ ಹೊರಹೊಮ್ಮಿರುವ ರುಕ್ಷ್ಮಿಣಿ ವಸಂತ್ ಸದ್ಯ ದಕ್ಷಿಣ ಭಾರತದಾದ್ಯಂತ ಭಾರಿ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಅದರಂತೆ, ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಗೀತು ಮೋಹನ್ ದಾಸ್ ನಿರ್ದೇಶನದ ಬಹುನಿರೀಕ್ಷಿತ ಟಾಕ್ಸಿಕ್ ಚಿತ್ರದಲ್ಲೂ ರುಕ್ಷ್ಮಿಣಿ ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸಿದ್ದಾರೆ. ಇದರೊಂದಿಗೆ, ಜೂನಿಯರ್ NTR ನಟನೆಯ, ಪ್ರಶಾಂತ್ ನೀಲ್ ನಿರ್ದೇಶನದ ತೆಲುಗಿನ ಬಿಗ್ ಬಜೆಟ್ ಸಿನಿಮಾ 'ಡ್ರಾಗನ್'ನಲ್ಲೂ ಇವರೇ ನಾಯಕಿಜಾಲತಾಣ
ಈಗಾಗಲೇ ತೆಲುಗಿನಲ್ಲಿ 'ಅಪ್ಪುಡೋ ಇಪ್ಪುಡೋ ಎಪ್ಪುಡೋ' ಮತ್ತು ತಮಿಳಿನಲ್ಲಿ 'ವಿಜಯ್ ಸೇತುಪತಿ' ಜೊತೆ 'ಏಸ್' ಚಿತ್ರಗಳಲ್ಲಿ ನಟಿಸುವ ಮೂಲಕ ಕಾಲಿವುಡ್ ಹಾಗೂ ಟಾಲಿವುಡ್ಗೂ ಎಂಟ್ರಿ ಕೊಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


