ಮಲಯಾಳಂ ಸೂಪರ್‌ಸ್ಟಾರ್ ಮೋಹನ್ ಲಾಲ್‌ಗೆ ಸೇನಾ ಮುಖ್ಯಸ್ಥರಿಂದ ಕಮಾಂಡೇಷನ್!
ಕಾರ್ಯಕ್ರಮದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ನಟ, ಸೇನೆಗಾಗಿ ಮತ್ತು ನಾಗರಿಕರ ಸುಧಾರಣೆಗಾಗಿ ತಮ್ಮಿಂದ ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಿದ್ದೇನೆ ಎಂದು ತಿಳಿಸಿದರು.

ನವದೆಹಲಿ: ನವದೆಹಲಿಯಲ್ಲಿ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ಇತ್ತೀಚೆಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾದ ಮಲಯಾಳಂ ಸೂಪರ್‌ಸ್ಟಾರ್ ಮೋಹನ್ ಲಾಲ್ ಅವರಿಗೆ ಮಂಗಳವಾರ ಕಮಾಂಡೇಷನ್ ಪ್ರಶಂಸಾ ಪದಕ ನೀಡಿ ಗೌರವಿಸಿದರು.
ಪ್ರಾದೇಶಿಕ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಗೌರವ ಶ್ರೇಣಿಯನ್ನು ಹೊಂದಿರುವ ಮೋಹನ್ ಲಾಲ್ ಅವರು, ಸೇನಾ ಮುಖ್ಯಸ್ಥರಿಂದ ಪ್ರಶಂಸೆಯನ್ನು ಪಡೆಯುವುದು " ಅತ್ಯಂತ ಗೌರವ" ಎಂದು ಹೇಳಿದ್ದಾರೆ.
ಕಾರ್ಯಕ್ರಮದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ನಟ, ಸೇನೆಗಾಗಿ ಮತ್ತು ನಾಗರಿಕರ ಸುಧಾರಣೆಗಾಗಿ ತಮ್ಮಿಂದ ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಿದ್ದೇನೆ ಎಂದು ತಿಳಿಸಿದರು.
"ಪ್ರಾದೇಶಿಕ ಸೇನಾ ಬೆಟಾಲಿಯನ್‌ಗಳಿಗೆ ಹೆಚ್ಚಿನ ದಕ್ಷತೆಯನ್ನು ಹೇಗೆ ತರುವುದು ಮತ್ತು ದೇಶಕ್ಕಾಗಿ ಏನು ಮಾಡಬಹುದು" ಎಂಬುದರ ಕುರಿತು ನಾನು ಮತ್ತು ಸೇನಾ ಮುಖ್ಯಸ್ಥರು ಚರ್ಚಿಸಿದ್ದೇವೆ ಎಂದು ಅವರು ಹೇಳಿದರು.
"ಇದು ಒಂದು ಸಣ್ಣ ಚರ್ಚೆಯಾಗಿತ್ತು. ಆದರೆ ನಮ್ಮ ಮುಂದೆ ದೊಡ್ಡ ಯೋಜನೆಗಳಿವೆ" ಎಂದು ಅವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



