ಸಿನಿಮಾ ಸುದ್ದಿ

ಬಹುಭಾಷಾ ನಟಿ 'ವೇದಿಕಾ' ಹಾಟ್ ಅವತಾರಕ್ಕೆ ಅಭಿಮಾನಿಗಳು ದಂಗು! Video ವೈರಲ್

ವೇದಿಕಾ ಅವರ ಈ ಹಾಟ್ ಅವತಾರ ಕಂಡು ಅಭಿಮಾನಿಗಳು ದಂಗಾಗಿದ್ದಾರೆ.ಈ ವಿಡಿಯೋಗೆ ನಾನಾ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಬಹುಭಾಷಾ ನಟಿ 'ವೇದಿಕಾ' ಹಾಟ್ ಅವತಾರಕ್ಕೆ ಅಭಿಮಾನಿಗಳು ದಂಗು! Video ವೈರಲ್
ನಟಿ ವೇದಿಕಾ
Published On :

ಬಹುಭಾಷಾ ನಟಿ ವೇದಿಕಾ ಹಾಟ್ ಅವತಾರಕ್ಕೆ ಅಭಿಮಾನಿಗಳು ಬೆಚ್ಚಿ ಬಿದ್ದಿದ್ದಾರೆ. ಕನ್ನಡದ ಶಿವಲಿಂಗ ಚಿತ್ರದಲ್ಲಿ ನಟಿಸಿರುವ ವೇದಿಕಾ, ಕನ್ನಡದ ಹುಡುಗಿಯಾದರೂ ಹುಟ್ಟಿ ಬೆಳೆದಿದ್ದು ಬಾಂಬೆಯಲ್ಲಿ. ಹೀಗಾಗಿ ಸಖತ್ ಬೋಲ್ಡ್ ಅವತಾರದಲ್ಲಿ ಆಗಾಗ ಕಾಣಿಸಿಕೊಳ್ಳುತ್ತಾರೆ.

ಮಾಡೆಲ್ ಕಮ್ ನಟಿಯಾಗಿರುವ ವೇದಿಕಾ, ಕಪ್ಪು ಬಣ್ಣದ ಬಿಕಿನಿಯಲ್ಲಿ ಸಮುದ್ರದ ಕಿನಾರೆಯಲ್ಲಿ ನಿಂತು ವಿವಿಧ ಸ್ಟೈಲ್‌ನಲ್ಲಿ ಪೋಸ್ ನೀಡಿದ್ದಾರೆ. ಈ ಫೋಟೋಶೂಟ್‌ನ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ವೇದಿಕಾ ಅವರ ಈ ಹಾಟ್ ಅವತಾರ ಕಂಡು ಅಭಿಮಾನಿಗಳು ದಂಗಾಗಿದ್ದಾರೆ. ಈ ವಿಡಿಯೋಗೆ ನಾನಾ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಅಂದಹಾಗೆ, ತಮಿಳು ಚಿತ್ರದ ಮೂಲಕ ಸಿನಿ ಪ್ರಯಾಣ ಆರಂಭಿಸಿದ ವೇದಿಕಾ, ತೆಲುಗು ಹಾಗೂ ಕನ್ನಡದ ಶಿವಲಿಂಗ ಸಿನಿಮಾದಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.