ಸಿನಿಮಾ ಸುದ್ದಿ

ಪೋಷಕರ ವಿರೋಧದ ನಡುವೆಯೂ ಸರಿಗಮಪ ಸಿಂಗರ್​ ಪೃಥ್ವಿ ಭಟ್‌- ಅಭಿಷೇಕ್ ಅದ್ಧೂರಿ ರಿಸೆಪ್ಷನ್!

ಸಿನಿಮಾ ಸೇರಿದಂತೆ ಅನೇಕ ವೇದಿಕೆ ಕಾರ್ಯಕ್ರಮಗಳಲ್ಲಿಯೂ ಹಾಡಿನ ಮೂಲಕ ಗಮನ ಸೆಳೆದಿದ್ದಾರೆ. ಮನೆಯವರ ವಿರೋಧದ ನಡುವೆಯೂ ಮಾರ್ಚ್‌ 27ರಂದು ಪೃಥ್ವಿ ಭಟ್‌ ಮತ್ತು ಅಭಿಷೇಕ್ ಪ್ರೇಮ ವಿವಾಹ ಆಗಿದ್ದರು.

ಪೋಷಕರ ವಿರೋಧದ ನಡುವೆಯೂ ಸರಿಗಮಪ ಸಿಂಗರ್​ ಪೃಥ್ವಿ ಭಟ್‌- ಅಭಿಷೇಕ್ ಅದ್ಧೂರಿ ರಿಸೆಪ್ಷನ್!
ಪೃಥ್ವಿ ಭಟ್‌- ಅಭಿಷೇಕ್
Published On :

ಸರಿಗಮಪ ರಿಯಾಲಿಟಿ ಶೋ ಮೂಲಕ ಫೇಮಸ್‌ ಆಗಿರುವ ಗಾಯಕಿ ಪೃಥ್ವಿ ಭಟ್‌, ಮತ್ತು ಜೀ ಕನ್ನಡ ವಾಹಿನಿಯಲ್ಲಿಯೇ ಪ್ರೊಡಕ್ಷನ್‌ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಅಭಿಷೇಕ್‌ ಅಭಿಷೇಕ್‌ ಅದ್ದೂರಿಯಾಗಿ ರಿಸೆಪ್ಶನ್‌ ಮಾಡಿಕೊಂಡಿದ್ದಾರೆ.

ಸಿನಿಮಾ ಸೇರಿದಂತೆ ಅನೇಕ ವೇದಿಕೆ ಕಾರ್ಯಕ್ರಮಗಳಲ್ಲಿಯೂ ಹಾಡಿನ ಮೂಲಕ ಗಮನ ಸೆಳೆದಿದ್ದಾರೆ. ಮನೆಯವರ ವಿರೋಧದ ನಡುವೆಯೂ ಮಾರ್ಚ್‌ 27ರಂದು ಪೃಥ್ವಿ ಭಟ್‌ ಮತ್ತು ಅಭಿಷೇಕ್ ಪ್ರೇಮ ವಿವಾಹ ಆಗಿದ್ದರು. ಮದುವೆಯಾದ ಎರಡು ತಿಂಗಳ ನಂತರ ಇದೀಗ ಪೃಥ್ವಿ ಭಟ್‌ ಆರತಕ್ಷತೆ ಮಾಡಿಕೊಂಡಿದ್ದಾರೆ.

ಈ ಸಮಾರಂಭದಲ್ಲಿ ಇಡೀ ʻಜೀ ಕನ್ನಡʼ ವಾಹಿನಿಯ ತಾರೆಯರು ಭಾಗಿಯಾಗಿ ಇವರಿಬ್ಬರಿಗೆ ಶುಭ ಹಾರೈಸಿದ್ದಾರೆ. ಅಲ್ಲದೇ ಬೇರೆ ಬೇರೆ ರಿಯಾಲಿಟಿ ಶೋಗಳ ಸ್ಪರ್ಧಿಗಳು, ತೀರ್ಪುಗಾರರು, ತಂತ್ರಜ್ಞರು, ʻಬಿಗ್‌ ಬಾಸ್‌ ಕನ್ನಡ ಸೀಸನ್‌ 11ʼರ ವಿನ್ನರ್‌ ಹನುಮಂತ ಕೂಡ ಆರತಕ್ಷತೆಯಲ್ಲಿ ಭಾಗಿಯಾಗಿದ್ದರು. ಗಾಯಕ ವಿಜಯ್‌ ಪ್ರಕಾಶ್‌ ಅವರ ಪತ್ನಿ ಮಹತಿ ಮತ್ತು ಮಗಳು ಪೃಥ್ವಿ ಭಟ್‌ ಆರತಕ್ಷತೆ ಸಮಾರಂಭಕ್ಕೆ ಬಂದಿದ್ದರು.

ಹಂಸಲೇಖ ಪತ್ನಿ ಹಾಗೂ ಮಗಳು ಬಂದು ಪೃಥ್ವಿ ಭಟ್ ಗೆ ಹಾರೈಸಿದ್ದಾರೆ. ಪುತ್ರಿ ಪೃಥ್ವಿ ಮದುವೆಗೆ ತಂದೆ ಶಿವಪ್ರಸಾದ್‌ ವಿರೋಧ ವ್ಯಕ್ತಪಡಿಸಿದ್ದರು. ಈ ಸುದ್ದಿ ಭಾರಿ ವೈರಲ್‌ ಆಗಿತ್ತು. ಇದೀಗ ಗಾಯಕಿ ಅದ್ದೂರಿಯಾಗಿ ರಿಸೆಪ್ಷನ್‌ ಮಾಡಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.