'ಗಿಣಿರಾಮ', 'ಪಾಪ ಪಾಂಡು' ನಟಿ ನಯನಾ ನಾಗರಾಜ್ ಕನ್ನಡ ಕಿರುತೆರೆಯಿಂದ ಬ್ಯಾನ್!
ಗಿಣಿರಾಮ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಯನಾ ನಾಗರಾಜ್ ಅವರನ್ನು ಕಳೆದ ವರ್ಷ ಧಾರಾವಾಹಿಗಳಿಂದ ಬ್ಯಾನ್ ಮಾಡಲಾಗಿದೆಯಂತೆ. ಈ ವಿಚಾರವನ್ನು ಸ್ವತಃ ನಯನಾ ನಾಗರಾಜ್ ತಿಳಿಸಿದ್ದಾರೆ.

ಬೆಂಗಳೂರು: ಪಾಪ ಪಾಂಡು ಹಾಗೂ ಗಿಣಿರಾಮದಂತಹ ಸೂಪರ್ ಹಿಟ್ ಧಾರಾವಾಹಿಗಳಲ್ಲಿ ನಟಿಸಿದ್ದ ನಯನಾ ನಾಗರಾಜ್ ಅವರನ್ನು ಕಿರುತೆರೆಯ ಎಲ್ಲಾ ಕಾರ್ಯಕ್ರಮಗಳಿಂದ ಬ್ಯಾನ್ ಮಾಡಲಾಗಿದೆ.
ಗಿಣಿರಾಮ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಯನಾ ನಾಗರಾಜ್ ಅವರನ್ನು ಕಳೆದ ವರ್ಷ ಧಾರಾವಾಹಿಗಳಿಂದ ಬ್ಯಾನ್ ಮಾಡಲಾಗಿದೆಯಂತೆ. ಈ ವಿಚಾರವನ್ನು ಸ್ವತಃ ನಯನಾ ನಾಗರಾಜ್ ಇತ್ತೀಚಿಗೆ ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ತಾವು ನಟಿಸುತ್ತಿದ್ದ ಧಾರಾವಾಹಿ ತಂಡದಲ್ಲಿ ವ್ಯಕ್ತಿಯೊಬ್ಬನಿ೦ದ ಮಾನಸಿಕ ಹಿಂಸೆಯಾಗುತ್ತಿತ್ತು. ಆತನ ಕಮೆಂಟ್ಗೆ ಎದುರೇಟು ಕೊಟ್ಟಿದ್ದಕ್ಕೆ ಆತ ಒಂದು ವರ್ಷ ನನ್ನ ಬದುಕನ್ನು ನರಕ ಮಾಡಿದ. ಹೀಗಾಗಿ ಆತನ ಮೇಲೆ ವಾಹಿನಿಗೆ ದೂರು ನೀಡಿದೆ. ಇದರಿಂದ ಹಿಂಸೆ ಇನ್ನಷ್ಟು ಜಾಸ್ತಿ ಆಯ್ತು. ಬಳಿಕ ಧಾರಾವಾಹಿ ಬಿಡುವ ನಿರ್ಧಾರ ಮಾಡಿದೆ. ಕೊನೆಗೆ ಧಾರಾವಾಹಿ ಕಥೆ ಅಂತ್ಯಗೊಳಿಸಲಾಯಿತು.
ಇದರಿಂದ ತಮ್ಮ ಧಾರಾವಾಹಿಗೆ ಕೋಟ್ಯಂತರ ರೂಪಾಯಿ ನಷ್ಟವಾಗಿತು ಎಂದು ಆರೋಪಿಸಿ ನನ್ನ ವಿರುದ್ಧ ದೂರು ನೀಡಿದರು. ಇದೇ ಕಾರಣದಿಂದ ನಾನು ಧಾರಾವಾಹಿ ಮಾಡದಂತೆ ನಿಷೇಧ ವಿಧಿಸಲಾಯಿತು ಎಂದು ನಟಿ ನಯನಾ ಹೇಳಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



