ಸಿನಿಮಾ ಸುದ್ದಿ

ಹಿನ್ನೋಟ 2025: ಈ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟ ತಾರೆಯರು

2025ರಲ್ಲಿ ಕಿರಿತೆರೆ ಹಾಗೂ ಹಿರಿತೆರೆಯ ಅನೇಕ ತಾರೆಯರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೆಲ ಸೆಲೆಬ್ರಿಟಿಗಳು ಅತ್ಯಂತ ಸರಳವಾಗಿ ಮದುವೆಯಾದರೆ, ಮತ್ತೆ ಕೆಲವರು ಅದ್ದೂರಿಯಾಗಿ ಸಪ್ತಪದಿ ತುಳಿದಿದ್ದಾರೆ.

ಹಿನ್ನೋಟ 2025: ಈ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟ ತಾರೆಯರು
ಸಂಗ್ರಹ ಚಿತ್ರ
Published On :

2026 ಹೊಸ ವರ್ಷ ಬರಮಾಡಿಕೊಳ್ಳುವ ಮುನ್ನ, 2025ರಲ್ಲಿ ಸಾಕಷ್ಟು ಸೆಲೆಬ್ರಿಟಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಈ ವರ್ಷ ವಿವಾಹ ಬಂಧನಕ್ಕೆ ಒಳಗಾದ ತಾರೆಯರ ಪಟ್ಟಿ ಇಲ್ಲಿದೆ ನೋಡಿ…

1. ಡಾಲಿ ಧನಂಜಯ್-ಧನ್ಯತಾ

Story image

ಸ್ಯಾಂಡಲ್‌ವುಡ್‌ ನಟ ಡಾಲಿ ಧನಂಜಯ್ ಅವರು, ಫೆಬ್ರವರಿ 16ರಂದು ಮೈಸೂರಿನಲ್ಲಿ ಡಾಕ್ಟರ್‌ ಧನ್ಯತಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

2. ಸೌಂದರ್ಯ-ರುಷಭ್

Story image

ಹಿರಿಯ ನಟಿ ಜಯಮಾಲಾ ಅವರ ಪುತ್ರಿ ಸೌಂದರ್ಯ ಅವರು ರುಷಭ್‌ ಅವರೊಂದಿಗೆ ವಿವಾಹ ಬಂಧನಕ್ಕೊಳಗಾದರು. ಬೆಂಗಳೂರಿನ ಪ್ಯಾಲೇಸ್‌ ಗ್ರೌಂಡ್ಸ್‌ನಲ್ಲಿ ನಡೆದ ವಿವಾಹ ಸಮಾರಂಭ ಅದ್ಧೂರಿಯಾಗಿ ನೆರವೇರಿತು.

3. ಅರ್ಚನಾ ಕೊಟ್ಟಿಗೆ-ಶರತ್‌

Story image

ಸ್ಯಾಂಡಲ್ ವುಡ್ ನಟಿ ಅರ್ಚನಾ ಕೊಟ್ಟಿಗೆ ಏಪ್ರಿಲ್‌ನಲ್ಲಿ ಕ್ರಿಕೆಟರ್‌ ಬಿ.ಆರ್‌ ಶರತ್‌ ಅವರ ಜೊತೆಗೆ ಹಸೆಮಣೆ ಏರಿದರು.

4. ಭುವನ್‌ ಗೌಡ-ನಿಖಿತಾ

Story image

‘ಕೆಜಿಎಫ್’‌ ಮತ್ತು ‘ಸಲಾರ್’‌ ಸೇರಿಂದತೆ ಹಲವು ಸಿನಿಮಾಗಳಿಗೆ ಸಿನಿಮ್ಯಾಟೋಗ್ರಾಫರ್‌ ಆಗಿ ಕೆಲಸ ಮಾಡಿದ ಭುವನ್‌ ಗೌಡ ಅಕ್ಟೋಬರ್‌ನಲ್ಲಿ ನಿಖಿತಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

5. ಕಿರಣ್‌ ರಾಜ್-ಅನಯಾ ವಸುಧಾ

Story image

‘777 ಚಾರ್ಲಿ’ ಸಿನಿಮಾದ ನಿರ್ದೇಶಕ ಕಿರಣ್‌ ರಾಜ್‌ ನವೆಂಬರ್‌ ತಿಂಗಳಲ್ಲಿ ಅನಯಾ ವಸುಧಾ ಅವರನ್ನ ವಿವಾಹವಾದರು.

6. ರಾಣಾ-ರಕ್ಷಿತಾ

Story image

ಸ್ಯಾಂಡಲ್‌ವುಡ್‌ ಕ್ರೇಜಿ ಕ್ವೀನ್‌ ರಕ್ಷಿತಾ ಅವರ ಸಹೋದರ ರಾಣಾ ಅವರು ರಕ್ಷಿತಾ ಎಂಬುವರನ್ನ ವಿವಾಹವಾದರು. ಫೆಬ್ರವರಿ 7ರಂದು ಬೆಂಗಳೂರಿನ ಚಾಮರ ವಜ್ರದಲ್ಲಿ ವಿವಾಹ ಸಮಾರಂಭ ನೆರವೇರಿತು.

7. ಅಖಿಲ್ ಅಕ್ಕಿನೇನಿ-ಜೈನಾಬ್‌

Story image

ಟಾಲಿವುಡ್‌ ನಟ ನಾಗಾರ್ಜುನ ಹಾಗೂ ನಟಿ ಅಮಲಾ ಪುತ್ರ ಅಖಿಲ್‌ ಅಕ್ಕಿನೇನಿ ತಮ್ಮ ದೀರ್ಘಕಾಲದ ಗೆಳತಿ ಜೈನಾಬ್‌ ಅವರ ಜೊತೆಗೆ ಸಪ್ತಪದಿ ತುಳಿದರು.

8. ವೈಷ್ಣವಿ ಗೌಡ- ಅನುಕೂಲ್

Story image

ಕನ್ನಡ ಕಿರುತೆರೆ ನಟಿ ವೈಷ್ಣವಿ ಗೌಡ ಅವರು ಅನುಕೂಲ್ ಮಿಶ್ರಾ ಜೊತೆಗೆ ಜೂನ್ 4ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

9. ದೀಪ್ತಿ ಮಾನೆ-ರೋಹನ್‌

Story image

ಕನ್ನಡ ಕಿರುತೆರೆಯಲ್ಲಿ ನಟಿ ದೀಪ್ತಿ ಮಾನೆ‌ ಅವರು ನವೆಂಬರ್ 7ರಂದು ರೋಹನ್‌ ಎಂಬುವವರ ಜೊತೆಗೆ ವಿವಾಹವಾದರು.

10. ನಟಿ ರಜಿನಿ-ಅರುಣ್ ವೆಂಕಟೇಶ್

Story image

ಅಮೃತವರ್ಷಿಣಿ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದುಕೊಂಡಿದ್ದ ನಟಿ ರಜಿನಿ ಅವರು ಅರುಣ್‌ ವೆಂಕಟೇಶ್ ಎಂಬುವವರ ಜೊತೆಗೆ ನವೆಂಬರ್ 10ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

11. ನಟಿ ಮೇಘಾ ಶೆಣೈ-ಭರತ್‌ ಸಿಂಗ್‌

Story image

ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್​ ತಂಗಿಯಾಗಿ ಪಾತ್ರ ನಿಭಾಯಿಸುತ್ತಿದ್ದ ನಟಿ ಮೇಘಾ ಶೆಣೈ ಅವರು, ನವೆಂಬರ್ 12ರಂದು ಭರತ್‌ ಸಿಂಗ್‌ ಜೊತೆಗೆ ಮದುವೆಯಾದರು.

12. ಯದುಶ್ರೇಷ್ಟ-ವಿಶಾಖ ಹೇಮಂತ್

Story image

ಮಿಥುನ ರಾಶಿ ಧಾರಾವಾಹಿಯಲ್ಲಿ ನಟಿಸಿ ಜನಪ್ರಿಯತೆ ಪಡೆದಿದ್ದ ನಟ ಯದುಶ್ರೇಷ್ಟ ಅವರು ಭರತನಾಟ್ಯ ಕಲಾವಿದೆ ವಿಶಾಖ ಹೇಮಂತ್ ಜೊತೆಗೆ ಜುಲೈ 14ರಂದು ಸಪ್ತಪದಿ ತುಳಿದಿದ್ದರು.

13. ಶಮಂತ್ ಗೌಡ-ಮೇಘನಾ

Story image

ಲಕ್ಷ್ಮೀ ಬಾರಮ್ಮ ಧಾರಾವಾಹಿ​ ನಟ ಶಮಂತ್ ಗೌಡ ಅವರು ಮೇಘನಾ ಎಂಬುವವರ ಜೊತೆಗೆ‌ ಮೇ 17ರಂದು ಮದುವೆಯಾಗಿದ್ದರು.

14. ಮೇಘಶ್ರೀ ಗೌಡ-ಪುರಂದರ

Story image

ಕನ್ನಡ ಕಿರುತೆರೆ ಲೋಕದಲ್ಲೇ ವಿಲನ್​ ಪಾತ್ರದ ಮೂಲಕ ಸಖತ್ ಫೇಮಸ್​ ಆಗಿದ್ದ ನಟಿ ಮೇಘಶ್ರೀ ಗೌಡ ಅವರು ಪುರಂದರ ಎಂಬುವವರ ಜೊತೆಗೆ ಫೆ.23ರಂದು ವಿವಾಹವಾದರು.

15. ಮೇಘನಾ ಶಂಕರಪ್ಪ-ಜಯಂತ್

Story image

ಸೀತಾರಾಮ ಧಾರಾವಾಹಿಯಲ್ಲಿ ನಟಿಸುತ್ತಿದ್ದ ನಟಿ ಮೇಘನಾ ಶಂಕರಪ್ಪ ಅವರು ಫೆ.9ರಂದು ಜಯಂತ್ ಜೊತೆಗೆ ಅದ್ಧೂರಿಯಾಗಿ ವಿವಾಗವಾದರು.

16. ಚೈತ್ರಾ ಕುಂದಾಪುರ-ಶ್ರೀಕಾಂತ್‌ ಕಶ್ಯಪ್‌

Story image

‘ಬಿಗ್‌ ಬಾಸ್‌ʼ ಖ್ಯಾತಿಯ ಚೈತ್ರಾ ಕುಂದಾಪುರ ಅವರು, ಶ್ರೀಕಾಂತ್‌ ಕಶ್ಯಪ್‌ ಎಂಬುವವರ ಜೊತೆ ಮೇ 9ರಂದು ವಿವಾಹವಾದರು.

17. ಸುಹಾನಾ ಸೈಯದ್‌ - ನಿತಿನ್‌ ಶಿವಾಂಶ್‌

Story image

ಕುವೆಂಪು ಅವರ ಮಂತ್ರ ಮಾಂಗಲ್ಯ ಆಶಯದಂತೆ ಗಾಯಕಿ ಸುಹಾನಾ ಸೈಯದ್‌ - ನಿತಿನ್‌ ಶಿವಾಂಶ್‌ ಮದುವೆಯಾದರು.

18. ಅನುಶ್ರೀ-ರೋಷನ್‌

Story image

ಖ್ಯಾತ ನಿರೂಪಕಿ ಅನುಶ್ರೀ ಅವರು ತಮ್ಮ ಬಹುಕಾಲದ ಗೆಳೆಯ ರೋಷನ್‌ ಜೊತೆ ಆಗಸ್ಟ್‌ 28ರಂದು ವಿವಾಹವಾದರು.

19. ರಘು ದೀಕ್ಷಿತ್ - ವಾರಿಜಶ್ರೀ ವೇಣುಗೋಪಾಲ್

Story image

ಗಾಯಕ ರಘು ದೀಕ್ಷಿತ್‌ ಅವರು ಗ್ರ್ಯಾಮಿ ನಾಮನಿರ್ದೇಶಿತ ಗಾಯಕಿ ವಾರಿಜಶ್ರೀ ವೇಣುಗೋಪಾಲ್‌ ಅವರ ಜೊತೆ ಅಕ್ಟೋಬರ್​ 24ರಂದು ವಿವಾಹವಾದರು.

20. ಸಮಂತಾ ರುತ್ ಪ್ರಭು-ರಾಜ್ ನಿಧಿಮೋರು

Story image

ದಕ್ಷಿಣ ಚಿತ್ರರಂಗದ ಖ್ಯಾತ ನಟಿ ಸಮಂತಾ ರುತ್​ ಪ್ರಭು ಅವರು ಇದೇ ಡಿಸೆಂಬರ್​ 1ರಂದು ನಿರ್ದೇಶಕ ರಾಜ್ ನಿಧಿಮೋರು ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

21. ದಿವ್ಯಾ ವಸಂತ-ಸಚಿನ್‌ ಯಾದವ್

Story image

‘ಗಿಚ್ಚಿ ಗಿಲಿಗಿಲಿ’ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದ ದಿವ್ಯಾ ವಸಂತ ಅವರು ಸಚಿನ್‌ ಯಾದವ್ ಎಂಬುವರನ್ನ ಮದುವೆಯಾದರು.

22. ಐಶ್ವರ್ಯಾ ಬಸ್ಪುರೆ-ರಾಕೇಶ್‌

Story image

‘ಯಾರೇ ನೀ ಮೋಹಿನಿ’ ಸೇರಿದಂತೆ ಇತರೆ ಹಲವಾರು ಧಾರಾವಾಹಿಗಳಲ್ಲಿ ಮಿಂಚಿದ ನಟಿ ಐಶ್ವರ್ಯಾ ಬಸ್ಪುರೆ ಅವರು, ರಾಕೇಶ್‌ ಎಂಬುವರ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು.

23. ರಂಜಿತ್-ಮಾನಸಾ

Story image

‘ಬಿಗ್‌ ಬಾಸ್‌ ಕನ್ನಡ 11’ರ ಸ್ಪರ್ಧಿ ರಂಜಿತ್‌ - ಮಾಸನಾ ವಿವಾಹ ಮಹೋತ್ಸವ ಮೇ 11ರಂದು ಅದ್ಧೂರಿಯಾಗಿ ನೆರವೇರಿತು.

24. ಸುಪ್ರೀತಾ ನಾರಾಯಣ-ಚಂದನ್‌ ಶೆಟ್ಟಿ

Story image

ಕಿರುತೆರೆ ನಟಿ ಸುಪ್ರೀತಾ ಸತ್ಯನಾರಾಯಣ ಅವರು ಡಿಜಿಟಲ್‌ ಕ್ರಿಯೇಟರ್‌ ಹಾಗೂ ಸಾಫ್ಟ್‌ವೇರ್‌ ಉದ್ಯೋಗಿ ಚಂದನ್‌ ಶೆಟ್ಟಿ ಅವರೊಂದಿಗೆ ವೈವಾಹಿಕ ಜೀವನಕ್ಕೆ ಈ ವರ್ಷ ಕಾಲಿಟ್ಟರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.