ಸಿನಿಮಾ ಸುದ್ದಿ

ಬಾಕ್ಸ್ ಆಫೀಸ್‌ನಲ್ಲಿ ತಗ್ಗಿದ Coolie ಅಬ್ಬರ: ರಜಿನಿಕಾಂತ್ ನಟನೆಯ ಚಿತ್ರ ಗಳಿಸಿದ್ದೆಷ್ಟು?

ಈ ಕುಸಿತದ ಹೊರತಾಗಿಯೂ, ಚಿತ್ರದ ಒಟ್ಟಾರೆ ಗಳಿಕೆಯು ವರ್ಷದ ಅತಿದೊಡ್ಡ ಬ್ಲಾಕ್‌ಬಸ್ಟರ್‌ಗಳಲ್ಲಿ ಒಂದಾಗಿದೆ.

ಬಾಕ್ಸ್ ಆಫೀಸ್‌ನಲ್ಲಿ ತಗ್ಗಿದ Coolie ಅಬ್ಬರ: ರಜಿನಿಕಾಂತ್ ನಟನೆಯ ಚಿತ್ರ ಗಳಿಸಿದ್ದೆಷ್ಟು?
ಕೂಲಿ ಚಿತ್ರದ ಸ್ಟಿಲ್
Published On :

ಲೋಕೇಶ್ ಕನಕರಾಜ್ ನಿರ್ದೇಶನದ ರಜನಿಕಾಂತ್ ನಟನೆಯ ಕೂಲಿ ಚಿತ್ರವು ದೇಶೀಯ ಗಲ್ಲಾ ಪೆಟ್ಟಿಗೆಯಲ್ಲಿ ₹222.5 ಕೋಟಿ ಗಳಿಸುವ ಮೂಲಕ ಮೊದಲ ವಾರವನ್ನು ಯಶಸ್ವಿಯಾಗಿ ಮುಗಿಸಿದೆ. ಬಿಡುಗಡೆಯಾದ ಆರಂಭಿಕ ವಾರದಲ್ಲಿ ದಾಖಲೆಯ ಗಳಿಕೆ ಕಂಡ ನಂತರ ಚಿತ್ರದ ಕಲೆಕ್ಷನ್ ಕೊಂಚ ಕುಸಿತ ಕಂಡಿದೆ.

ಫಿಲ್ಮ್ ಟ್ರೇಡ್ ಪೋರ್ಟಲ್ Sacnilk ಪ್ರಕಾರ, ಚಿತ್ರವು ಬಿಡುಗಡೆಯಾದ 7ನೇ ದಿನದಂದು ಸುಮಾರು ₹6.5 ಕೋಟಿ ಗಳಿಸಿದೆ. ಮಂಗಳವಾರ ಚಿತ್ರವು 9.5 ಕೋಟಿ ರೂ. ಗಳಿಸಿತ್ತು.

ಕೂಲಿ ಚಿತ್ರ ಬಿಡುಗಡೆಯಾದ ಮೊದಲ ದಿನ ₹65 ಕೋಟಿ, ಎರಡನೇ ದಿನ ₹54.75 ಕೋಟಿ, ಮೂರನೇ ದಿನ ₹39.5 ಕೋಟಿ, ನಾಲ್ಕನೇ ದಿನ ₹35.25 ಕೋಟಿ, ಐದನೇ ದಿನ ₹12 ಕೋಟಿ, ಆರನೇ ದಿನ ₹9.5 ಕೋಟಿ ಮತ್ತು ಅಂತಿಮವಾಗಿ 7ನೇ ದಿನ ₹6.5 ಕೋಟಿ ಗಳಿಕೆ ಕಂಡಿದೆ.

ಈ ಕುಸಿತದ ಹೊರತಾಗಿಯೂ, ಚಿತ್ರದ ಒಟ್ಟಾರೆ ಗಳಿಕೆಯು ವರ್ಷದ ಅತಿದೊಡ್ಡ ಬ್ಲಾಕ್‌ಬಸ್ಟರ್‌ಗಳಲ್ಲಿ ಒಂದಾಗಿದೆ. ಚಿತ್ರ ಬಿಡುಗಡೆಯಾದ ಕೇವಲ ಒಂದು ವಾರದಲ್ಲಿ ₹220 ಕೋಟಿ ಮೈಲಿಗಲ್ಲನ್ನು ಮೀರಿದೆ. ಹೃತಿಕ್ ರೋಷನ್ ಮತ್ತು ಜೂನಿಯರ್ ಎನ್‌ಟಿಆರ್ ನಟನೆಯ ವಾರ್ 2 ಚಿತ್ರವು ಬಿಡುಗಡೆಯಾಗಿದ್ದು, ಸ್ಪರ್ಧೆ ಏರ್ಪಟ್ಟಿದೆ. ಇದೀಗ ಕೂಲಿ ತನ್ನ ಎರಡನೇ ವಾರದಲ್ಲಿ ಹೇಗೆ ನಿಲ್ಲುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಈ ಆ್ಯಕ್ಷನ್ ಚಿತ್ರವು ಲೋಕೇಶ್ ಕನಕರಾಜ್ ಮತ್ತು ರಜನಿಕಾಂತ್ ಅವರ ಮೊದಲ ಸಹಯೋಗವಾಗಿದ್ದು, ಲೋಕೇಶ್ ಅವರ ಆರನೇ ನಿರ್ದೇಶನದ ಚಿತ್ರವಾಗಿದೆ. ಈ ಚಿತ್ರದಲ್ಲಿ ನಾಗಾರ್ಜುನ, ಉಪೇಂದ್ರ, ಸತ್ಯರಾಜ್, ಸೌಬಿನ್ ಶಾಹಿರ್, ಶ್ರುತಿ ಹಾಸನ್ ಮತ್ತು ರಚಿತಾ ರಾಮ್ ಸೇರಿದಂತೆ ಬಹು ತಾರಾಗಣವಿದೆ. ಅನಿರುದ್ಧ್ ರವಿಚಂದರ್ ಅವರ ಸಂಗೀತ ಸಂಯೋಜನೆ, ಗಿರೀಶ್ ಗಂಗಾಧರನ್ ಅವರ ಛಾಯಾಗ್ರಹಣ ಮತ್ತು ಫಿಲೋಮಿನ್ ರಾಜ್ ಅವರ ಸಂಕಲನವಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.