ಸಿನಿಮಾ ಸುದ್ದಿ

ಕಾಟೇರ ಸಕ್ಸಸ್ ಮೀಟ್: ಅಣ್ಣಾವ್ರ ಕಾಲಿನ ದೂಳಿಗೂ ನಾನು ಸಮ ಇಲ್ಲ ಎಂದ ದರ್ಶನ್!

ಕಳೆದ ಶುಕ್ರವಾರ ಬಿಡುಗಡೆಯಾದ 'ಕಾಟೇರ' ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ದೋಚುತ್ತಿದ್ದು, ಚಾಲೆಂಜಿಂಗ್ ಸ್ಟಾರ್' ದರ್ಶನ್ ಬಾಕ್ಸ್ ಆಫೀಸ್ ಸುಲ್ತಾನ ಎಂಬುದು ಸಾಬೀತಾಗಿದೆ.

ಕಾಟೇರ ಸಕ್ಸಸ್ ಮೀಟ್: ಅಣ್ಣಾವ್ರ ಕಾಲಿನ ದೂಳಿಗೂ ನಾನು ಸಮ ಇಲ್ಲ ಎಂದ ದರ್ಶನ್!
ಟೀಮ್ ಕಾಟೇರ
Published On :

ಬೆಂಗಳೂರು: ಕಳೆದ ಶುಕ್ರವಾರ ಬಿಡುಗಡೆಯಾದ 'ಕಾಟೇರ' ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ದೋಚುತ್ತಿದ್ದು, ಚಾಲೆಂಜಿಂಗ್ ಸ್ಟಾರ್' ದರ್ಶನ್ ಬಾಕ್ಸ್ ಆಫೀಸ್ ಸುಲ್ತಾನ ಎಂಬುದು ಸಾಬೀತಾಗಿದೆ. ಮೊದಲ ದಿನ 19.79 ಕೋಟಿ ರೂ. ಕಲೆಕ್ಷನ್ ಮಾಡಿದ್ದ ಈ ಸಿನಿಮಾ ಮೂರನೇ ದಿನ ಅಂದರೆ ಭಾನುವಾರ 20.94 ಕೋಟಿ ರೂಪಾಯಿ ಗಳಿಸಿದೆ. ಮೂರು ದಿನಗಳಲ್ಲಿ ಒಟ್ಟು 58.8 ಕೋಟಿ ಕೋಟಿ ರೂ. ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. 

ಸಿನಿಮಾ ಗೆದ್ದ ಹಿನ್ವೆಲೆಯಲ್ಲಿ ಸೋಮವಾರ ಸಂಜೆ ಚಿತ್ರತಂಡದಿಂದ ಸಕ್ಸಸ್ ಮೀಟ್ ನಡೆಯಿತು. ಈ ಸಂದರ್ಭದಲ್ಲಿ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ದರ್ಶನ್, ನಾನು ರಾಜ್‌ಕುಮಾರ್ ಅವರ ಕಾಲಿನ ಧೂಳಿಗೂ ಸಮ ಇಲ್ಲ. ಅವರಿಗೆ ನನ್ನನ್ನು ಹೋಲಿಸಬೇಡಿ, ಅವರು ಮಾಡಿರುವ ಪಾತ್ರಗಳಲ್ಲಿ 0.5 ಅಷ್ಟು ಕೂಡ ನಾವು ಮಾಡಲು ಆಗಲ್ಲ, ಪ್ರಯತ್ನಿಸಬಹುದಷ್ಟೇ ಅಂದರು. 

ಜಾತಿ ಸೇರಿದಂತೆ ಸಿನಿಮಾದಲ್ಲಿನ ಮತ್ತೊಂದಿಷ್ಟು ಕಥೆ ಕುರಿತು ಕೇಳಿದ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ದರ್ಶನ್, ಕಾಟೇರ ಕಥೆ ಕೇಳುವಾಗ ಚಂದಮಾಮನ ಕಥೆ ಕೇಳಿದಂತೆ ಕೇಳಿದ್ದೀನಿ. ಸಿನಿಮಾದಲ್ಲಿ ಒಳ್ಳೇಯ ಮೆಸೇಜ್ ಇದೆ. ಇವತ್ತು ಜನ ಮಾತನಾಡದೇನು? ಗಂಡಸು ಬೆವರು ಸುರಿಸಬೇಕು, ಜೊಲ್ಲು ಸುರಿಸಬಾರದು ಅಂತಾರೆ. ಇದರಲ್ಲಿ ಅದೆಷ್ಚು ಅರ್ಥ ಇದೆ. ಸಮಾಜದಲ್ಲಿ ನಮ್ಮ ಸುತ್ತಮುತ್ತ ನಡೆಯುತ್ತಿರುವ ಕಥೆನೇ ಇದು ಎಂದರು.

ಸಿನಿಮಾ ಕಥೆ ಆಯ್ಕೆ ಮಾಡುವಾಗ ಮೂರು ರೀತಿ ಯೋಚನೆ ಮಾಡುತ್ತೇನೆ.ಹೆಣ್ಣನ್ನು ಕೆಟ್ಟದಾಗಿ ತೋರಿಸಬಾರದು, ಕನ್ನಡ ಭಾಷೆಗೆ ಅವಮಾನವಾಗುವಂತೆ ಇರಬಾರದು, ಅನ್ನದಾತನರಿಗೆ ನಷ್ಟ ಆಗಬಾರದು ಎಂಬುದು ನನ್ನ ಪಾಲಿಸಿ ಅಂದ ದರ್ಶನ್, ಯಾವತ್ತಿಗೂ ರಾಷ್ಟ್ರ ಪ್ರಶಸ್ತಿ ಬರುತ್ತೆ ಅಂತಾ ಸಿನಿಮಾ ಮಾಡಲ್ಲ ಎಂದು ಸ್ಪಷ್ಪಪಡಿಸಿದರು.

ನಾನೊಬ್ಬ ಕಮರ್ಷಿಯಲ್ ನಟ. ನನ್ನ ನಂಬಿದ ನಿರ್ಮಾಪಕರು ಸಿನಿಮಾಕ್ಕೆ ಹಾಕಿರುವ ಹಣ ವಾಪಸ್ ಬರಬೇಕು. ಚಿತ್ರದಲ್ಲಿ ಅಭಿನಯಿಸಿದ ಎಲ್ಲಾ ಕಲಾವಿದರಿಗೂ ಒಂದಷ್ಟು ಅನುಕೂಲವಾಗಬೇಕು, ಅಲ್ಲದೇ ಒಂದು ಚಿತ್ರ ಗೆದ್ದಾಗ ಮತ್ತೊಂದಿಷ್ಟು ಚಿತ್ರಗಳು ಸೆಟ್ಟೇರಲು ಕಾರಣವಾಗುತ್ತದೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.