ಜಗ್ಗೇಶ್ ನಟನೆಯ ರಂಗನಾಯಕ ಚಿತ್ರದ 'ಗಾಳಿ ತಂಗಾಳಿ' ಹಾಡಿನಲ್ಲಿದೆ ಕನ್ನಡದ ಹಲವು ವಿಶೇಷತೆಗಳು...
ನಟ ಜಗ್ಗೇಶ್ ಹಾಗೂ ಸಿನಿಮಾ ನಿರ್ದೇಶಕ ಗುರುಪ್ರಸಾದ್ ಜೋಡಿ ಮಠ, ಎದ್ದೇಳು ಮಂಜುನಾಥ ಸೇರಿದಂತೆ ಹಲವು ಹಿಟ್ ಸಿನಿಮಾಗಳಿಗೆ ಜನಪ್ರಿಯತೆ ಪಡೆದಿದೆ.

ನಟ ಜಗ್ಗೇಶ್ ಹಾಗೂ ಸಿನಿಮಾ ನಿರ್ದೇಶಕ ಗುರುಪ್ರಸಾದ್ ಜೋಡಿ ಮಠ, ಎದ್ದೇಳು ಮಂಜುನಾಥ ಸೇರಿದಂತೆ ಹಲವು ಹಿಟ್ ಸಿನಿಮಾಗಳಿಗೆ ಜನಪ್ರಿಯತೆ ಪಡೆದಿದೆ.
ಈ ಜೋಡಿ ಮತ್ತೆ ರಂಗನಾಯಕ ಸಿನಿಮಾದಲ್ಲಿ ಒಟ್ಟಾಗುತ್ತಿವೆ. 15 ವರ್ಷಗಳ ನಂತರ ಜಗ್ಗೇಶ್- ಗುರುಪ್ರಸಾದ್ ಜೋಡಿ ಸಿನಿಮಾ ಮಾಡುತ್ತಿದ್ದು, ಮಾ.08 ರಂದು ಶಿವರಾತ್ರಿ ವೇಳೆಗೆ ರಂಗನಾಯಕ ಸಿನಿಮಾ ಬಿಡುಗಡೆಗೆ ಸಜ್ಜುಗೊಳ್ಳುತ್ತಿದೆ.
ಇತ್ತೀಚೆಗೆ ಸಿನಿಮಾ ತಂಡ ರಂಗನಾಯಕ ಚಿತ್ರದ ಮೊದಲ ಹಾಡನ್ನು ಅನಾವರಣಗೊಳಿಸಿದ್ದರು. ಗಾಳಿ ತಂಗಾಲಿ ಎಂಬ ಶೀರ್ಷಿಕೆಯು ಹಲವು ಕಾರಣಗಳಿಗಾಗಿ ಗಮನ ಸೆಳೆದಿದೆ.
ಸಂಗೀತ ಸಂಯೋಜನೆ ಮಾಡಿರುವ ಅನೂಪ್ ಸೀಳಿನ್ ಮುನಿರಾಜು ಜೊತೆಗೆ ತಮ್ಮ ಧ್ವನಿಯನ್ನು ಸಹ ನೀಡಿದ್ದಾರೆ. ಗಾಳಿ ತಂಗಾಳಿ ಹಾಡು ಗುರುಪ್ರಸಾದ್ ಅವರ ಸಾಹಿತ್ಯದೊಂದಿಗೆ ಕನ್ನಡದ ಸತ್ವವನ್ನು ತೆರೆದಿಡುತ್ತದೆ. ವೀಡಿಯೋ ಸಾಂಗ್ ಚಿತ್ರದ ನಾಯಕ ಜಗ್ಗೇಶ್ ಅವರ ಮೇಲಷ್ಟೇ ಕೇಂದ್ರೀಕೃತಗೊಳ್ಳದೇ ಜೂನಿಯರ್ ಅಂಬರೀಶ್, ರವಿಚಂದ್ರನ್, ವಿಷ್ಣುವರ್ಧನ್, ರಾಜಕುಮಾರ್, ಶಂಕರ್ ನಾಗ್ ಸೇರಿ ಇನ್ನಿತರರನ್ನೂ ಚಿತ್ರೀಕರಿಸಲಾಗಿದೆ.
ವಿಖ್ಯಾತ್ ಚಿತ್ರ ಪ್ರೊಡಕ್ಷನ್ ಬ್ಯಾನರ್‌ನಡಿಯಲ್ಲಿ ವಿಖ್ಯಾತ್ ಎಆರ್ ನಿರ್ಮಿಸಿರುವ ರಂಗನಾಯಕ, ರಾಜಕೀಯ ವಿಡಂಬನೆ ಕಥಾ ಹಂದರವನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ. ಜೀ ಸ್ಟುಡಿಯೋಸ್ ಚಿತ್ರ ವಿತರಣೆ ಹಕ್ಕು ಪಡೆದಿದ್ದು ಈ ಚಿತ್ರ ತಮಿಳು ಕಿರುತೆರೆ ನಟಿ ರಚಿತಾ ಮಹಾಲಕ್ಷ್ಮಿಯನ್ನು ಸ್ಯಾಂಡಲ್ ವುಡ್ ಗೆ ಪರಿಚಯಿಸುತ್ತಿದೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


