ಬಿಡುಗಡೆಗೂ ಮುನ್ನವೇ 'ಪುಷ್ಪ 2' ಬ್ಲಾಕ್‌ಬಸ್ಟರ್: 1000 ಕೋಟಿ ರೂ ಬಾಚಿದ್ಹೇಗೆ ಅಲ್ಲು ಅರ್ಜುನ್ ನಟನೆಯ ಚಿತ್ರ!
ಇತ್ತೀಚಿನ ಟ್ರೇಡ್ ವರದಿಗಳು ಮತ್ತು 'ಪುಷ್ಪಾ' ನಿರ್ಮಾಪಕರ PR ಬಿಡುಗಡೆಯಲ್ಲಿ, ಭಾಗ 2 ಬಿಡುಗಡೆಗೆ ಮುನ್ನವೇ 1065 ಕೋಟಿ ರೂಪಾಯಿ ಗಳಿಸಿದೆ ಎಂದು ದೃಢಪಡಿಸಲಾಗಿದೆ.

ಭಾರತದ ಮುಂದಿನ ಬಹುನಿರೀಕ್ಷಿತ ಚಿತ್ರಗಳ ಪೈಕಿ ಅಲ್ಲು ಅರ್ಜುನ್ ಅಭಿನಯದ ಪುಷ್ಪ 2 ಅಗ್ರಸ್ಥಾನದಲ್ಲಿದೆ. ಅಲ್ಲದೆ ಚಿತ್ರದ ಬಿಡುಗಡೆಗಾಗಿ ಅಭಿಮಾನಿಗಳು ಜಾತಕಪಕ್ಷಿಯಂತೆ ಕಾಯುತ್ತಿದ್ದಾರೆ. ಈ ವರ್ಷ ಅಲ್ಲು ಅರ್ಜುನ್ ಅಭಿನಯದ ಚಿತ್ರದ ಪುಷ್ಪ 2 ಚಿತ್ರದ ಪೋಸ್ಟರ್, ಟೀಸರ್ ಮತ್ತು ಹಾಡುಗಳನ್ನು ನೋಡಿದ ಅಭಿಮಾನಿಗಳು ಚಿತ್ರದ ಬಿಡುಗಡೆಗಾಗಿ ತುದಿಗಾಲಲ್ಲಿ ನಿಂತಿದ್ದಾರೆ. ಚಿತ್ರದ ಹೈಪ್ ನಿರ್ಮಾಪಕರ ಜೇಬು ತುಂಬುವಂತೆ ಮಾಡಿದೆ. ಅದರ ಅಂಕಿಅಂಶಗಳನ್ನು ನೋಡಿ ಚಿತ್ರರಂಗವು ಹುಬ್ಬೇರುವಂತೆ ಮಾಡಿದೆ. ಪುಷ್ಪ 2 ಡಿಸೆಂಬರ್ 6ರಂದು ಬಿಡುಗಡೆಯಾಗಲಿದೆ.
ಬಿಡುಗಡೆಗೂ ಮುನ್ನವೇ 1000 ಕೋಟಿ ಗಳಿಸಿದ ನಿರ್ಮಾಪಕರು
ಇತ್ತೀಚಿನ ಟ್ರೇಡ್ ವರದಿಗಳು ಮತ್ತು 'ಪುಷ್ಪಾ' ನಿರ್ಮಾಪಕರ PR ಬಿಡುಗಡೆಯಲ್ಲಿ, ಭಾಗ 2 ಬಿಡುಗಡೆಗೆ ಮುನ್ನವೇ 1065 ಕೋಟಿ ರೂಪಾಯಿ ಗಳಿಸಿದೆ ಎಂದು ದೃಢಪಡಿಸಲಾಗಿದೆ. ಅದರಲ್ಲಿ 640 ಕೋಟಿ ರೂಪಾಯಿಯಷ್ಟು ದೊಡ್ಡ ಮೊತ್ತವನ್ನು ಚಿತ್ರದ ಥಿಯೇಟ್ರಿಕಲ್ ರೈಟ್ಸ್‌ನಿಂದ ಗಳಿಸಲಾಗಿದೆ. ಅದೇನೆಂದರೆ, ಭಾರತೀಯ ಚಲನಚಿತ್ರ ಮಾರುಕಟ್ಟೆಯಲ್ಲಿ ವಿವಿಧ ಭಾಗಗಳಾಗಿ ವಿಂಗಡಿಸಲಾದ ವಿತರಕರು ಮತ್ತು ವಿದೇಶಗಳ ಚಲನಚಿತ್ರ ಮಾರುಕಟ್ಟೆಗಳಲ್ಲಿ ಚಿತ್ರವನ್ನು ಥಿಯೇಟರ್‌ಗಳಿಗೆ ತರಲು ತಯಾರಕರಿಗೆ 640 ಕೋಟಿ ರೂ. ನೀಡಲಾಗಿದೆ.
ಮತ್ತೊಂದೆಡೆ OTT ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್ 'ಪುಷ್ಪ 2' ಗಾಗಿ 275 ಕೋಟಿ ರೂಪಾಯಿಗಳ ಒಪ್ಪಂದವನ್ನು ಮಾಡಿದೆ. ಚಿತ್ರದ ನಾನ್ ಥಿಯೇಟ್ರಿಕಲ್ ರೈಟ್ಸ್ ನಿಂದ ನಿರ್ಮಾಪಕರು 425 ಕೋಟಿ ರೂಪಾಯಿ ಗಳಿಸಿದ್ದಾರೆ. 'ಪುಷ್ಪ 2' ಚಿತ್ರದ ನಿರ್ಮಾಪಕರು ಬಿಡುಗಡೆಗೆ ಮುನ್ನವೇ ಚಿತ್ರದಿಂದ 1000 ಕೋಟಿ ಗಳಿಸಿದೆ.
ಥಿಯೇಟ್ರಿಕಲ್ ರೈಟ್ಸ್:
ಆಂಧ್ರಪ್ರದೇಶ/ತೆಲಂಗಾಣ- 220 ಕೋಟಿ
ಉತ್ತರ ಭಾರತ - 200 ಕೋಟಿ
ತಮಿಳುನಾಡು - 50 ಕೋಟಿ
ಕರ್ನಾಟಕ - 30 ಕೋಟಿ
ಕೇರಳ - 20 ಕೋಟಿ
ಸಾಗರೋತ್ತರ - 120
ಒಟ್ಟು- 640 ಕೋಟಿ
ಥಿಯೇಟ್ರಿಕಲ್ ರೈಟ್ಸ್ ಹೊರತುಪಡಿಸಿ
ಡಿಜಿಟಲ್ ಹಕ್ಕುಗಳು (ನೆಟ್‌ಫ್ಲಿಕ್ಸ್) - 275 ಕೋಟಿಗಳು
ಸಂಗೀತ ಹಕ್ಕು- 65 ಕೋಟಿ
ಸ್ಯಾಟಲೈಟ್ ರೈಟ್ಸ್ - 85 ಕೋಟಿ
ಒಟ್ಟು- 425 ಕೋಟಿ
'ಪುಷ್ಪಾ 2: ದಿ ರೂಲ್' ಬ್ಲಾಕ್ಬಸ್ಟರ್ ಆಗುತ್ತಾ?
ಬಿಡುಗಡೆಗೂ ಮುನ್ನವೇ ಅಲ್ಲು ಅರ್ಜುನ್ ಚಿತ್ರ 1000 ಕೋಟಿ ಗಳಿಸಿದೆ ಎಂಬ ಸುದ್ದಿ ಹೊರಬಿದ್ದ ಕೂಡಲೇ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ನಡುವೆ ಜಂಗಿಕುಸ್ತಿ ಶುರುವಾಗಿದೆ. ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಮೊದಲು ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರ ಪುನರಾಗಮನದ ಚಿತ್ರ 'ಪಠಾಣ್' ಅನ್ನು ಗುರಿಯಾಗಿಸಲು ಪ್ರಾರಂಭಿಸಿದರು. ಪಠಾಣ್ ವಿಶ್ವಾದ್ಯಂತ ಒಟ್ಟು ಕಲೆಕ್ಷನ್ ಸುಮಾರು 1055 ಕೋಟಿ ರೂ. ಆದರೆ ರಿಲೀಸ್ ಗೂ ಮುನ್ನವೇ ಅಲ್ಲು ಅರ್ಜುನ್ ಸಿನಿಮಾ ಶಾರುಖ್ ಸಿನಿಮಾವನ್ನು ಹಿಂದಿಕ್ಕಿದೆ ಎಂದು ಬರೆದಿದ್ದಾರೆ.
'ಪುಷ್ಪ 2' ಗಳಿಕೆಯ ಲೆಕ್ಕಚಾರವೇನು?
ಥಿಯೇಟರ್ ವ್ಯವಹಾರದ ಬಗ್ಗೆ ಮಾತನಾಡುತ್ತಾ, ಭಾರತ ಮತ್ತು ಸಾಗರೋತ್ತರ ಮಾರುಕಟ್ಟೆಗಳಲ್ಲಿ ವಿತರಕರು ನಿರ್ಮಾಪಕರಿಗೆ 640 ಕೋಟಿ ರೂಪಾಯಿಗಳನ್ನು ನೀಡಿದ್ದಾರೆ. ಇದರಿಂದಾಗಿ ಅವರು ಥಿಯೇಟರ್‌ಗಳಲ್ಲಿ 'ಪುಷ್ಪ 2' ಅನ್ನು ಪ್ರದರ್ಶಿಸಲು ಅರ್ಹರಾಗಿದ್ದಾರೆ. ಸರಳ ಭಾಷೆಯಲ್ಲಿ ಹೇಳುವುದಾದರೆ ವಿತರಕರು 640 ಕೋಟಿ ರೂಪಾಯಿಗೆ ಚಿತ್ರವನ್ನು ಖರೀದಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



