ಸಿನಿಮಾ ಸುದ್ದಿ

PRK-KRG ಸಹಯೋಗದಲ್ಲಿ ಯುವರಾಜ್ ಕುಮಾರ್ 2ನೇ ಚಿತ್ರ?

ಪಿಅರ್'ಕೆ ಮೂಲಕ ಯುವರಾಜ್ ನ ಲಾಂಚ್ ಮಾಡುವುದಕ್ಕೆ ಪುನೀತ್ ರಾಜ್ ಕುಮಾರ್ ಪ್ಲಾನ್ ಮಾಡಿದ್ದರು. ಈಗ ಅಪ್ಪು ಆಸೆಯಂತೆ ಪಿಅರ್'ಕೆ ಯಲ್ಲಿ ಯುವರಾಜ್ ಕುಮಾರ್ ಅವರ 2ನೇ ಚಿತ್ರ ನಿರ್ಮಾಣವಾಗಲಿದೆ.

PRK-KRG ಸಹಯೋಗದಲ್ಲಿ ಯುವರಾಜ್ ಕುಮಾರ್ 2ನೇ ಚಿತ್ರ?
ಯುವರಾಜ್ ಕುಮಾರ್
Published On :

‘ಯುವ’ ಸಿನಿಮಾ ಮೂಲಕ ಬೆಳ್ಳಿತೆರೆ ಮೇಲೆ ಅಬ್ಬರಿಸಿದ್ದ ಯುವ ರಾಜ್​ಕುಮಾರ್ ಅವರು ಇದೀಗ ಎರಡನೇ ಚಿತ್ರಕ್ಕೆ ಸಜ್ಜಾಗುತ್ತಿದ್ದಾರೆ. ಅಪ್ಪು ಕನಸಿನಂತೆ ಯುವರಾಜ್ ಕುಮಾರ್ ಅವರ ಎರಡನೇ ಚಿತ್ರ ನಿರ್ಮಾಣವಾಗುತ್ತಿದೆ ಎನ್ನಲಾಗಿದೆ.

ಪಿಅರ್'ಕೆ ಮೂಲಕ ಯುವರಾಜ್ ನ ಲಾಂಚ್ ಮಾಡುವುದಕ್ಕೆ ಪುನೀತ್ ರಾಜ್ ಕುಮಾರ್ ಪ್ಲಾನ್ ಮಾಡಿದ್ದರು. ಈಗ ಅಪ್ಪು ಆಸೆಯಂತೆ ಪಿಅರ್'ಕೆ ಯಲ್ಲಿ ಯುವರಾಜ್ ಕುಮಾರ್ ಅವರ 2ನೇ ಚಿತ್ರ ನಿರ್ಮಾಣವಾಗಲಿದೆ. ಯುವ ಚಿತ್ರಕ್ಕೆ ಅಶ್ವಿನಿ ಪುನೀತ್ ರಾಜ್ ಕುಮಾರ್ ನಿರ್ಮಾಪಕಿಯಾಗಿದ್ದಾರೆಂದು ತಿಳಿದುಬಂದಿದೆ.

ಅಪ್ಪು ಕನಸಿಗಾಗಿ ಎರಡು ದೊಡ್ಡ ನಿರ್ಮಾಣ ಸಂಸ್ಥೆಗಳು ಕೈ ಜೋಡಿಸಿವೆ. ಪಿಅರ್ ಕೆ ಜೊತೆ ಜಯಣ್ಣ ಫಿಲಂಸ್, ಕೆಅರ್ ಜಿ ಸ್ಟೂಡಿಯೋ ಸೇರಿ ಯುವ ಅವರ 2ನೇ ಸಿನಿಮಾ ನಿರ್ಮಾಣ ಮಾಡುತ್ತಿವೆ. ಮೂರು ದಿಗ್ಗಜ‌ ಸಂಸ್ಥೆಗಳ ನೇತೃತ್ವದಲ್ಲಿ ಯುವರಾಜ್ ಕುಮಾರ್ ಅವರ ಎರಡನೇ ಚಿತ್ರ ನಿರ್ಮಾಣ ಆಗುತ್ತಿದೆ.

ಈ ಸುದ್ದಿಗಳ ನಡುವಲ್ಲೇ ನಿರ್ಮಾಪಕ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ ಅವರು ಮಾಡಿರುವ ಪೋಸ್ಟ್ ವೊಂದು ಸಿನಿಮಾ ಕುರಿತು ಮತ್ತಷ್ಟು ಸುಳಿವುಗಳನ್ನು ನೀಡಿದೆ. “‘Back on track onto the next, a good week this is going to be!” ಎಂದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಯುವರಾಜ್ ಕುಮಾರ್ ಅವರ 2ನೇ ಚಿತ್ರ ಕುರಿತ ಊಹಾಪೋಹಗಳಿಗೆ ಪುಷ್ಠಿ ನೀಡಿದೆ.

ಪಿಆರ್‌ಕೆ ಪ್ರೊಡಕ್ಷನ್‌ ಬ್ಯಾನರ್‌ನಲ್ಲಿ ನಿರ್ಮಾಣ ಆಗುತ್ತಿರುವ ಈ ಸಿನಿಮಾದ ನಿರ್ದೇಶಕರು ಯಾರು? ಈ ಚಿತ್ರದ ಟೈಟಲ್ ಏನು? ಈ ಸಿನಿಮಾದಲ್ಲಿ ಯಾರೆಲ್ಲ ನಟರು ಹಾಗೂ ತಂತ್ರಜ್ಞರು ಇರಲಿದ್ದಾರೆ ಎಂಬ ಮಾಹಿತಿಗಾಗಿ ಕಾದು ನೋಡಬೇಕಿದೆ.

ಒಟ್ಟಾರೆ, ಯುವ ರಾಜ್​ಕುಮಾರ್ ಎರಡನೇ ಚಿತ್ರ ಪಿಆರ್​​ಕೆ ಪ್ರೊಡಕ್ಷನ್​ನಲ್ಲಿ ನಿರ್ಮಾಣ ಆಗುತ್ತಿರುವುದರಿಂದ ಕುತೂಹಲ ಹೆಚ್ಚಿದ್ದು, ಮೂರು ದಿಗ್ಗದ ಸಿನಿಮಾ ನಿರ್ಮಾಣ ಸಂಸ್ಧೆಗಳು ಚಿತ್ರದ ಕುರಿತು ಮೈಸೂರು ದಸರಾ ಹಬ್ಬದ ಸಂದರ್ಭದಲ್ಲಿ ದೊಡ್ಡ ಮಟ್ಟದಲ್ಲಿ ಘೋಷಣೆ ಮಾಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.