ಸಿನಿಮಾ ಸುದ್ದಿ

ಕಡಿಮೆಯಾಯ್ತಾ ದರ್ಶನ್ ಕ್ರೇಜ್?: 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ರೀ-ರಿಲೀಸ್‌, ಚಿತ್ರಮಂದಿರಗಳು ಖಾಲಿ-ಖಾಲಿ!

ದರ್ಶನ್ ಸಿನಿಮಾವನ್ನು ಮುಂಜಾನೆ 6ಕ್ಕೆ ಶೋ ಇಟ್ಟಿದ್ದರು. ಸಿದ್ದಲಿಂಗೇಶ್ವರ ಚಿತ್ರಮಂದಿರದಲ್ಲಿ ನೂರು ಜನ ಕೂಡ ಇರಲಿಲ್ಲ. ಚಿತ್ರಮಂದಿರ ಖಾಲಿ ಖಾಲಿ ಆಗಿತ್ತು. ಇದಕ್ಕೆ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.

ಕಡಿಮೆಯಾಯ್ತಾ ದರ್ಶನ್ ಕ್ರೇಜ್?: 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ರೀ-ರಿಲೀಸ್‌, ಚಿತ್ರಮಂದಿರಗಳು ಖಾಲಿ-ಖಾಲಿ!
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ
Published On :

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ 130ಕ್ಕೂ ದಿನಗಳ ಜೈಲು ವಾಸದ ಬಳಿಕ ಇದೀಗ ಮಧ್ಯಂತರ ಜಾಮೀನು ಪಡೆದು ಹೊರಬಂದಿದ್ದಾರೆ. ಇನ್ನು ಕೆಲ ನಿರ್ಮಾಪಕರು ದರ್ಶನ್ ಅಭಿನಯದ ಕರಿಯಾ, ನನ್ನ ಪ್ರೀತಿಯ ರಾಮು, ನವಗ್ರಹ ಚಿತ್ರಗಳು ಬಿಡುಗಡೆಯಾಗಿದ್ದವು. ಇದೀಗ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರವನ್ನು ರೀ ರಿಲೀಸ್ ಮಾಡಲಾಗಿದೆ. ಆದರೆ ಚಿತ್ರಮಂದಿರಗಳು ಖಾಲಿ ಖಾಲಿಯಾಗಿದ್ದು ದರ್ಶನ್ ಕ್ರೇಜ್ ಕಡಿಮೆ ಆಯ್ತ ಎಂಬ ಅನುಮಾನ ಮೂಡಿಸಿವೆ.

ಹೊಸ ಸಿನಿಮಾಗಳನ್ನು ಬೆಳಗ್ಗೆ 10ಕ್ಕೆ ರಿಲೀಸ್ ಮಾಡಲಾಗುತ್ತದೆ. ಆದರೆ ದರ್ಶನ್ ಸಿನಿಮಾವನ್ನು ಮುಂಜಾನೆ 6ಕ್ಕೆ ಶೋ ಇಟ್ಟಿದ್ದರು. ಸಿದ್ದಲಿಂಗೇಶ್ವರ ಚಿತ್ರಮಂದಿರದಲ್ಲಿ ನೂರು ಜನ ಕೂಡ ಇರಲಿಲ್ಲ. ಚಿತ್ರಮಂದಿರ ಖಾಲಿ ಖಾಲಿ ಆಗಿತ್ತು. ಇದಕ್ಕೆ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ. ದರ್ಶನ್ ಸಿನಿಮಾಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು. ಇಷ್ಟು ಬೇಗ ದರ್ಶನ್ ಕ್ರೇಜ್ ಕಡಿಮೆ ಆಯ್ತಾ ಎನ್ನುವ ಅನುಮಾನ ಮೂಡಿದೆ.

ಎರಡು ವಾರಗಳ ಹಿಂದೆ ನವಗ್ರಹ ಚಿತ್ರ ರೀ-ರಿಲೀಸ್ ಆಗಿತ್ತು. ಆ ಚಿತ್ರ ಒಂದು ವಾರದಲ್ಲೇ ಒಂದು ಕೋಟಿ ಕಲೆಕ್ಷನ್ ಮಾಡಿತ್ತು. ಆದರೆ ರಾಯಣ್ಣನ ಕಲೆಕ್ಷನ್ ಮೊದಲ ಶೋನಲ್ಲಿ 10 ಸಾವಿರ ರುಪಾಯಿ ದಾಟಿಲ್ಲ. ಹೀಗಾಗಿ ಚಿತ್ರದ ರಿಲೀಸ್ ಬಗ್ಗೆ ಪ್ರಚಾರ ಮಾಡದೇ ಬಿಡುಗಡೆ ಮಾಡಿ ದರ್ಶನ್ ಗೆ ಅವಮಾನ ಮಾಡಿದ್ದಾರೆ ಎಂಬುದು ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.