ಶರಣ್ ಅಭಿನಯದ ಬಹುನಿರೀಕ್ಷಿತ 'ಅವತಾರ ಪುರುಷ 2' ಚಿತ್ರ ಬಿಡುಗಡೆ ದಿನಾಂಕ ಮುಂದಕ್ಕೆ
ಇತ್ತೀಚೆಗಷ್ಟೇ 'ಒಂದು ಸರಳ ಪ್ರೇಮ ಕಥೆ' ಯಶಸ್ಸಿನ ಗುಂಗಿನಲ್ಲಿರುವ ನಿರ್ದೇಶಕ ಸಿಂಪಲ್ ಸುನಿ, ತಮ್ಮ ಬಹುನಿರೀಕ್ಷಿತ ಅವತಾರ ಪುರುಷ ಸಿನಿಮಾದ ಸೀಕ್ವೆಲ್ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಅವತಾರ ಪುರುಷ 2 ಸಿನಿಮಾ ಮಾರ್ಚ್ 22ರಂದು ತೆರೆಕಾಣಲಿದೆ ಎಂದು ಇತ್ತೀಚೆಗಷ್ಟೇ ಚಿತ್ರತಂಡ ಘೋಷಿಸಿತ್ತು. ಆದರೆ ಇದೀಗ ಚಿತ್ರ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ.

ಇತ್ತೀಚೆಗಷ್ಟೇ 'ಒಂದು ಸರಳ ಪ್ರೇಮ ಕಥೆ' ಯಶಸ್ಸಿನ ಗುಂಗಿನಲ್ಲಿರುವ ನಿರ್ದೇಶಕ ಸಿಂಪಲ್ ಸುನಿ, ತಮ್ಮ ಬಹುನಿರೀಕ್ಷಿತ ಅವತಾರ ಪುರುಷ ಸಿನಿಮಾದ ಸೀಕ್ವೆಲ್ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಶರಣ್, ಆಶಿಕಾ ರಂಗನಾಥ್ ಮತ್ತು ಶ್ರೀನಗರ ಕಿಟ್ಟಿ ನಟಿಸಿದ್ದ ಅವತಾರ ಪುರುಷ ಚಿತ್ರವು 2022ರ ಮೇನಲ್ಲಿ ಬಿಡುಗಡೆಯಾಗಿತ್ತು. ಇದೀಗ, ಒಂದೂವರೆ ವರ್ಷಗಳ ನಂತರ ಚಿತ್ರದ ಮುಂದುವರಿದ 'ಅವತಾರ ಪುರುಷ- ತ್ರಿಶಂಕು ಪಯಣ' ಬಿಡುಗಡೆ ದಿನಾಂಕವನ್ನು ಚಿತ್ರತಂಡ ಮುಂದೂಡಿದೆ.
ಅವತಾರ ಪುರುಷ 2 ಸಿನಿಮಾ ಮಾರ್ಚ್ 22ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ ಎಂದು ಇತ್ತೀಚೆಗಷ್ಟೇ ಚಿತ್ರತಂಡ ಘೋಷಿಸಿತ್ತು. ಆದರೆ ಇದೀಗ ಚಿತ್ರ ಬಿಡುಗಡೆ ದಿನಾಂಕವನ್ನು ಮುಂದೂಡಿದ್ದು, ಏಪ್ರಿಲ್ 5ರಂದು ಚಿತ್ರ ಬಿಡುಗಡೆಯಾಗಲಿದೆ ಎಂದಿದೆ.
ಈ ಕುರಿತು ಟ್ವೀಟ್ ಮಾಡಿರುವ ನಿರ್ದೇಶಕ ಸುನಿ, ಸ್ಯಾಂಡಲ್‌ವುಡ್ ಅಧ್ಯಕ್ಷರಿಗೆ ಅವತಾರ ಪುರುಷ ಬಿಡುಗಡೆಯ ಹೊಸ ದಿನಾಂಕ ಗೊತ್ತಾಯ್ತು. ಏಪ್ರಿಲ್ 5 ರಂದು ಸಿನಿಮಾ ಬಿಡುಗಡೆಯಾಗಲಿದೆ. ಈ ಬಾರಿಯ ಯುಗಾದಿ.. ಹೊಸತಡಕು.. ಹಾಗೂ ರಂಜಾನ್ ಹಬ್ಬಗಳಲ್ಲಿ ಒಂದನ್ನು ಅವತಾರ ಪುರುಷ 2 ಚಿತ್ರಕ್ಕೆ ಮೀಸಲಿಡಿ ಎಂದು ಬರೆದಿದ್ದಾರೆ.
ಅವತಾರ ಪುರುಷ ಚಿತ್ರದ ಟ್ರೈಲರ್
ಅವತಾರ ಪುರುಷ ಸೀಕ್ವೆಲ್‌ನಲ್ಲಿ ಸಾಯಿಕುಮಾರ್, ವಿಜಯ್ ಚೆಂಡೂರ್, ಸುಧಾರಾಣಿ, ಭವ್ಯ, ಅಯ್ಯಪ್ಪ ಪಿ ಶರ್ಮಾ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದು, ವಿಲಿಯಂ ಡೇವಿಡ್ ಛಾಯಾಗ್ರಹಣವನ್ನು ನಿಭಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


